Video: ಗೂಳಿ ಕಾಳಗ; ಅಂಗಡಿಗೆ ನುಗ್ಗಿ ಇಬ್ಬರು ಯುವತಿಯರನ್ನು ತುಳಿದು ಹಾಕಿದ ಗೂಳಿಗಳು

Video: ಗೂಳಿ ಕಾಳಗ; ಅಂಗಡಿಗೆ ನುಗ್ಗಿ ಇಬ್ಬರು ಯುವತಿಯರನ್ನು ತುಳಿದು ಹಾಕಿದ ಗೂಳಿಗಳು

ಅಕ್ಷತಾ ವರ್ಕಾಡಿ
|

Updated on: Jul 13, 2024 | 6:18 PM

ಕಾಲ್ಕೆರೆದು ಕಾದಾಟಕ್ಕೆ ನಿಂತ ಗೂಳಿಗಳೆರಡು ಏಕಾಏಕಿ ಬಟ್ಟೆ ಅಂಗಡಿಯೊಳಗೆ ನುಗ್ಗಿ, ಅಂಗಡಿಯ ಮಹಿಳಾ ಸಿಬ್ಬಂದಿಗಳಿಬ್ಬರನ್ನು ತುಳಿದು ಹಾಕಿದೆ. ಈ ಆಘಾತಕಾರಿಗೆ ಘಟನೆಗೆ ಸಂಬಂಧಿಸಿದ ದೃಶ್ಯಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

ಉತ್ತರಾಖಂಡ: ಕಾಲ್ಕೆರೆದು ಕಾದಾಟಕ್ಕೆ ನಿಂತ ಗೂಳಿಗಳು ಏಕಾಏಕಿ ಬಟ್ಟೆ ಅಂಗಡಿಯೊಳಗೆ ನುಗ್ಗಿ, ಅಂಗಡಿಯ ಮಹಿಳಾ ಸಿಬ್ಬಂದಿಯನ್ನು ತುಳಿದು ಹಾಕಿರುವ ಘಟನೆ ಉತ್ತರಾಖಂಡದ ಋಷಿಕೇಶದಲ್ಲಿ ನಡೆದಿದೆ. ಎರಡು ಗೂಳಿಗಳು ಕಾದಾಡುತ್ತಾ ಅಂಗಡಿಯೊಂದಕ್ಕೆ ನುಗ್ಗುತ್ತಿರುವ ದೃಶ್ಯ ಅಂಗಡಿಯ ಒಳಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಗೂಳಿಗಳು ಕಾದಾಡುತ್ತಾ ಯುವತಿರನ್ನು ತುಳಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಕೆಲ ಹೊತ್ತಿನ ಬಳಿಕ ವ್ಯಕ್ತಿಯೊಬ್ಬ ಕೋಲು ಹಿಡಿದು ಅಂಗಡಿಗೆ ನುಗ್ಗಿ, ಕೋಲಿನ ಸಹಾಯದಿಂದ ಎರಡು ಗೂಳಿಗಳನ್ನು ಹೊರತಬ್ಬಿದ್ದಾನೆ. ಸದ್ಯ ಯುವತಿಯರಿಬ್ಬರಿಗೆ ತೀವ್ರ ಗಾಯಗಳಾಗಿಲ್ಲ. ಶುಕ್ರವಾರ ಬೆಳಗ್ಗೆ 9:15 ಕ್ಕೆ ಈ ಘಟನೆ ಸಂಭವಿಸಿದ್ದು, ಸಿಸಿಟಿವಿ ಫೂಟೇಜ್‌ನಲ್ಲಿರುವ ಟೈಮ್‌ಸ್ಟ್ಯಾಂಪ್‌ನಿಂದ ತಿಳಿದುಬಂದಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?