AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumbai: ಭಾರೀ ಟ್ರಾಫಿಕ್ ಜಾಮ್‌; ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಆಂಬ್ಯುಲೆನ್ಸ್‌ನಲ್ಲೇ ಸಾವನ್ನಪ್ಪಿದ ವ್ಯಕ್ತಿ

ಹದಗೆಟ್ಟು ಹಾಗೂ ಮಳೆ ನೀರಿನಿಂದ ಆವೃತವಾಗಿದ್ದ ರಸ್ತೆಯಿಂದಾಗಿ ಭಾರೀ ಟ್ರಾಫಿಕ್ ಜಾಮ್‌ ಉಂಟಾಗಿದ್ದು, ಆಸ್ಪತ್ರೆಗೆ ತಲುಪಲು 40 ನಿಮಿಷಗಳು ಬೇಕಾದವು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Mumbai: ಭಾರೀ ಟ್ರಾಫಿಕ್ ಜಾಮ್‌; ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಆಂಬ್ಯುಲೆನ್ಸ್‌ನಲ್ಲೇ ಸಾವನ್ನಪ್ಪಿದ ವ್ಯಕ್ತಿ
ಅಕ್ಷತಾ ವರ್ಕಾಡಿ
|

Updated on:Jul 13, 2024 | 5:20 PM

Share

ಮುಂಬೈ: ಭಾರೀ ಟ್ರಾಫಿಕ್ ಜಾಮ್‌ನಿಂದಾಗಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಆಂಬ್ಯುಲೆನ್ಸ್‌ನಲ್ಲಿ ಕೃಷ್ಣ ಶೆಟ್ಟಿ ಎಂದು ಗುರುತಿಸಲಾದ ವೃದ್ಧರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. ಕೃಷ್ಣ ಶೆಟ್ಟಿ ಅಂಧೇರಿ ಪೂರ್ವದ ಮರೋಲ್ ಪ್ರದೇಶದ ಮುಂಬೈನ ಭವಾನಿ ನಗರದಲ್ಲಿರುವ ಅಂಧೇರಿ ಹಿಲ್ ವ್ಯೂ ಸೊಸೈಟಿಯ ನಿವಾಸಿ. ಹದಗೆಟ್ಟು ಹಾಗೂ ಮಳೆ ನೀರಿನಿಂದ ಆವೃತವಾಗಿದ್ದ ರಸ್ತೆಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ರೋಗಿಯನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ವಿಳಂಬವಾಗಿದ್ದು, ಆಸ್ಪತ್ರೆಗೆ ತಲುಪಿದ ಪರೀಕ್ಷಿಸಿದ ವೈದ್ಯರು ಆದಾಗಲೇ ವ್ಯಕ್ತಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಅಂಧೇರಿ ಹಿಲ್ ವ್ಯೂ ಸೊಸೈಟಿಯು ಮುಂಬೈನ ದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಸೆವೆನ್ ಹಿಲ್ಸ್ ಆಸ್ಪತ್ರೆಯಿಂದ 850 ಮೀಟರ್ ದೂರದಲ್ಲಿದೆ. ಶೆಟ್ಟಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗಿನಿಂದ ಆಸ್ಪತ್ರೆಗೆ ಮಾಹಿತಿ ನೀಡಿ ಹೃದ್ರೋಗ ಚಿಕಿತ್ಸಾ ಆಂಬ್ಯುಲೆನ್ಸ್‌ಗೆ ಮನವಿ ಮಾಡಿದ್ದರು. ಆಂಬ್ಯುಲೆನ್ಸ್ ತಲುಪಲು ಸಮಯ ತೆಗೆದುಕೊಂಡಿದ್ದರಿಂದ, ಅವರು ಕಾರಿನಲ್ಲಿ ಮುಂದೆ ಹೋಗಲು ನಿರ್ಧರಿಸಿದ್ದರು. ಆದರೆ, ಅಷ್ಟರಲ್ಲಿ ಆಂಬ್ಯುಲೆನ್ಸ್‌ ಬಂದಿದೆ.

ಇದನ್ನೂ ಓದಿ: ಆ ಒಂದು ಫೋನ್​​ ಕಾಲ್, ಮದುವೆಯೂ ಬೇಡ, ಹುಡುಗಿಯೂ ಬೇಡ ಎಂದು ಓಡಿ ಹೋದ ವರ

ಮಳೆಯಿಂದಾಗಿ ಭಾರೀ ಟ್ರಾಫಿಕ್ ಜಾಮ್‌ ಉಂಟಾಗಿದ್ದು, ಆಸ್ಪತ್ರೆಗೆ ತಲುಪಲು 40 ನಿಮಿಷಗಳು ಬೇಕಾದವು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ನಿವಾಸಿ ಮಾರ್ಟಿನ್ ಚೆಟ್ಟಿಯಾರ್ ನೀಡಿರುವ ಹೇಳಿಕೆ ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sat, 13 July 24