AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಈ ಲಿಂಕ್ ಕ್ಲಿಕ್​​ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಖಾಲಿ, ರಾಜ್ಯ ಪೊಲೀಸರಿಂದ ವಿನೂತನ ಜಾಗೃತಿ

ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ಈ ಮೋಸದ ಜಾಲಕ್ಕೆ ಬಿದ್ದು ಹೆಚ್ಚಿನವರು ಹಣವನ್ನು ಕಳೆದುಕೊಳ್ಳುತ್ತಿರುವ ಸಂಖ್ಯೆಯೇನು ಕಡಿಮೆಯಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಪೊಲೀಸ್‌ ಇಲಾಖೆಯು ವಿಭಿನ್ನ ಪ್ರಯತ್ನವೊಂದನ್ನು ಮಾಡಿದೆ. ಹೌದು, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿದೆ.

Viral Video : ಈ ಲಿಂಕ್ ಕ್ಲಿಕ್​​ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಖಾಲಿ, ರಾಜ್ಯ ಪೊಲೀಸರಿಂದ ವಿನೂತನ ಜಾಗೃತಿ
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on:Jul 13, 2024 | 3:36 PM

Share

ನಾವಿಂದು ತಂತ್ರಜ್ಞಾನದ ಯುಗದಲ್ಲಿದ್ದೇವೆ. ಆದರೆ ಹೊಸ ಹೊಸ ವಿಷಯಗಳಿಗೆ ತೆರಳುಕೊಳ್ಳುತ್ತಿದ್ದಂತೆ ಮೋಸ ಹೋಗುವುದೇ ಹೆಚ್ಚಾಗಿದೆ. ಹೌದು, ಇತ್ತೀಚೆಗಿನ ದಿನಗಳಲ್ಲಿ ತಂತ್ರಜ್ಞಾನದ ಜಗತ್ತಿನಲ್ಲಿ ಸೈಬರ್ ಅಪರಾಧವು ವೇಗವಾಗಿ ಹೆಚ್ಚುತ್ತಿವೆ. ಹೀಗಾಗಿ ಸೈಬರ್ ದರೋಡೆಕೋರರು ಹಣ ಪಡೆಯುವ ಮೂಲಕ ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರು ಕೋಟಿಗಟ್ಟಲೇ ಹಣವನ್ನು ಕಳೆದುಕೊಂಡಿದ್ದಾರೆ. ಇದೀಗ ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಪೊಲೀಸ್‌ ಇಲಾಖೆಯು ವಿಡಿಯೋವೊಂದನ್ನು ಹಂಚಿಕೊಂಡಿದೆ.

ಹೌದು, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ, ‘ಒತ್ತಬೇಡಿ ಗೊತ್ತಿಲ್ಲದ ಲಿಂಕ್, ಅದು ಪಕ್ಕಾ ಮೋಸಗಾರರ ಟ್ರಿಕ್, ನಿಮ್ಮ ಮೊಬೈಲ್ ಆಗುತ್ತೆ ಹ್ಯಾಕ್, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಗುತ್ತೆ ಬ್ಲಾಂಕ್ !!’ ಎಂದು ಬರೆದುಕೊಳ್ಳಲಾಗಿದೆ.

ವೈರಲ್​​​ ಸ್ಟೋರಿ ಇಲ್ಲಿದೆ ನೋಡಿ ( ಎಕ್ಸ್​​​ ಖಾತೆ)

ಈ ವಿಡಿಯೋದಲ್ಲಿ ಎರಡು ಪ್ರಾಣಿಗಳು ಇರುವುದನ್ನು ಕಾಣಬಹುದು. ಇವು ಇಬ್ಬರು ಸ್ನೇಹಿತರಾಗಿದ್ದು, ಅವರಲ್ಲಿ ಒಂದು ಈ ಲಿಂಕ್‌ ಒತ್ತಿದ್ದರೆ ಹಣ ಡಬ್ಬಲ್‌ ಆಗುತ್ತಿದೆ ಎಂದು ಹೇಳುವುದನ್ನು ಕೇಳಬಹುದು. ನೀನು ಬಾ ಲಿಂಕ್‌ ಕ್ಲಿಕ್‌ ಮಾಡೋಣ ಎನ್ನುತ್ತಾನೆ. ಆಗ ಇನ್ನೊಬ್ಬನು ಬೇಡ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತಾನೆ. ಆದರೆ ಕೊನೆಗೆ ಸ್ನೇಹಿತನ ಮಾತನ್ನು ಕೇಳದೇ ಲಿಂಕ್‌ ಅನ್ನು ಕ್ಲೀಕ್‌ ಮಾಡಿ ಆಗ ಹಣ ಕಳೆದುಕೊಳ್ಳುವುದು ಈ ವಿಡಿಯೋದಲ್ಲಿರುವುದನ್ನು ನೋಡಬಹುದು.

ಇದನ್ನೂ ಓದಿ: 18 ದಿನದ ಮಗುವನ್ನು 1.5 ಲಕ್ಷ ರೂ.ಗೆ ಮಾರಾಟ ಮಾಡಿದ ತಂದೆ

ಈ ವಿಡಿಯೋವು ಹತ್ತೊಂಭತ್ತು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದ್ದು, ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ‘ಆನ್ಲೈನ್ ವಂಚಕರನ್ನು ಹಿಡಿದು ಶಿಕ್ಷೆ ಕೊಡಲು ಅಸಾಧ್ಯ ಸರ್ಕಾರ ಮತ್ತು ಸೈಬರ್ ಇಲಾಖೆಗೆ ವಂಚಕರು ಎಲ್ಲೆ ದೇಶ ವಿದೇಶದಲ್ಲಿ ಕುಳಿತರು ಹಿಡಿದು ಶಿಕ್ಷೆ ನೀಡಬೇಕು, ಆನ್ಲೈನ್ ವಂಚಕರಿಗೆ ಸರ್ಕಾರ ಮತ್ತು ಸೈಬರ್ ಇಲಾಖೆಗೆ ಭಯ ಎನಿಸುತ್ತದೆ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡುತ್ತಿಲ್ಲ,!!!…’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಒಳ್ಳೆಯ ಸಂದೇಶ ತಿಳಿಸಿದ್ದರೆ ಸರ್ ಧನ್ಯವಾದಗಳು’ ಎಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Sat, 13 July 24

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ