Sign In

By signing in or creating an account, you agree with Associated Broadcasting Company's Terms & Conditions and Privacy Policy.

Hyderabad: 18 ದಿನದ ಮಗುವನ್ನು 1.5 ಲಕ್ಷ ರೂ.ಗೆ ಮಾರಾಟ ಮಾಡಿದ ತಂದೆ

ಹೆಣ್ಣು ಮಗುವನ್ನು ಸಾಕಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ತನ್ನ 18 ದಿನದ ಹಸುಗೂಸನ್ನು ಮಾರಾಟ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ವಿಷಯ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಪತ್ನಿಗೆ ಬೆದರಿಕೆ ಹಾಕಿ ಮಧ್ಯವರ್ತಿ ಸಹಾಯದಿಂದ 1.50 ಲಕ್ಷ ರೂ.ಗೆ ಮಗುವನ್ನು ಮಾರಾಟ ಮಾಡಿದ್ದಾನೆ.

Hyderabad: 18 ದಿನದ ಮಗುವನ್ನು 1.5 ಲಕ್ಷ ರೂ.ಗೆ ಮಾರಾಟ ಮಾಡಿದ ತಂದೆ
18 ದಿನದ ಮಗುವನ್ನು ಮಾರಾಟ ಮಾಡಿದ ತಂದೆ( ಸಾಂದರ್ಭಿಕ ಚಿತ್ರ)
Follow us
ಅಕ್ಷತಾ ವರ್ಕಾಡಿ
|

Updated on: Jul 13, 2024 | 12:52 PM

18 ದಿನದ ಹೆಣ್ಣು ಮಗುವನ್ನು ಹೈದರಾಬಾದ್‌ನ ಬಂಡ್ಲಗುಡ ಪೊಲೀಸರು ಶುಕ್ರವಾರ ಕರ್ನಾಟಕದ ಗುಲ್ಬರ್ಗದಿಂದ ರಕ್ಷಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಈ ಮಗುವನ್ನು ಸ್ವಂತ ತಂದೆ 1.5 ಲಕ್ಷಕ್ಕೆ ಕರ್ನಾಟಕದ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದರು. ಮಗುವಿನ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಕಟುಕ ತಂದೆ,ಮಧ್ಯವರ್ತಿ ಮತ್ತು ಖರೀದಿದಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಿನಗೂಲಿ ಕಾರ್ಮಿಕ ಮೊಹಮ್ಮದ್ ಆಸಿಫ್ (40) ಮತ್ತು ಅವರ ಪತ್ನಿ ಅಸ್ಮಾ ಬೇಗಂ (36) ಅವರಿಗೆ ಆರು ವರ್ಷದ ಮಗನಿದ್ದಾನೆ.ಈ ದಂಪತಿಗೆ ಇತ್ತೀಚಿಗಷ್ಟೇ ಹೆಣ್ಣು ಮಗುವೊಂದು ಜನಿಸಿದೆ. ಆದರೆ ಆರ್ಥಿಕವಾಗಿ ದುರ್ಬಲವಾಗಿದ್ದರಿಂದ ಹೆಣ್ಣು ಮಗುವನ್ನು ಸಾಕಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮಗುವಿನ ತಂದೆ ಪತ್ನಿಗೆ ಬೆದರಿಕೆ ಹಾಕಿ ಮಗುವನ್ನು ಮಾರಾಟ ಮಾಡಿದ್ದಾನೆ.

ಇದನ್ನೂ ಓದಿ: ಜೀವಂತ ಕೋಳಿಯ ತಲೆ ಕಚ್ಚಿ ವಿಕೃತಿ ಮೆರೆಯುತ್ತಾ ನೃತ್ಯ ಮಾಡಿದ ಡ್ಯಾನ್ಸರ್​; ವಿಡಿಯೋ ವೈರಲ್​​​

ಮಗುವಿನ ಮಾರಾಟಕ್ಕೆ ಮಧ್ಯವರ್ತಿ ಚಾಂದ್ ಸುಲ್ತಾನ್​​ ಎಂಬಾತ ಸಹಾಯ ಮಾಡಿದ್ದಾನೆ. ಸುಲ್ತಾನ್​​ ತನ್ನ ಕುಟುಂಬದ ಸ್ನೇಹಿತ, ಮಿನಲ್ ಸಾಬ್ ಅವರಿಗೆ 1.50 ಲಕ್ಷ ರೂ. ಮಗುವನ್ನು ಮಾರಾಟ ಮಾಡಿದ್ದು, ಅದರಲ್ಲಿ 50 ಸಾವಿರನ್ನು ತನಗೆ ಇಟ್ಟುಕೊಟ್ಟು, ಉಳಿದ 1ಲಕ್ಷವನ್ನು ಮಗುವಿನ ತಂದೆಗೆ ನೀಡಿದ್ದಾನೆ. ಇದೀಗ ಮಗುವಿನ ತಾಯಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಗುವನ್ನು ಕರ್ನಾಟಕದಿಂದ ರಕ್ಷಿಸಲಾಗಿದೆ. ಪತಿ, ಮಧ್ಯವರ್ತಿ ಮತ್ತು ಖರೀದಿದಾರರು ಈಗ ಪೊಲೀಸ್ ವಶದಲ್ಲಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ