AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಆ ಒಂದು ಫೋನ್​​ ಕಾಲ್, ಮದುವೆಯೂ ಬೇಡ, ಹುಡುಗಿಯೂ ಬೇಡ ಎಂದು ಓಡಿ ಹೋದ ವರ

ತಾಳಿ ಕಟ್ಟುವ ಶುಭ ವೇಳೆಯಲ್ಲಿ ವರನ ಫೋನಿಗೊಂದು ಕರೆ ಬಂದಿದೆ. ವಧುವಿನ ಪ್ರಿಯಕರ ಕರೆ ಮಾಡಿದ್ದು, ತಮ್ಮಿಬ್ಬರ ಹಲವು ವರ್ಷಗಳ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಇದಲ್ಲದೇ ಅವರಿಬ್ಬರು ಜೊತೆಗಿದ್ದ ಖಾಸಗಿ ಫೋಟೋ, ವಿಡಿಯೋಗಳನ್ನು ವರನಿಗೆ ಕಳುಹಿಸಿದ್ದಾನೆ. ಶಾಕ್​​ಗೆ ಒಳಗಾದ ವರ ಮಂಟಪ ಬಿಟ್ಟು ಓಡಿ ಹೋಗಿದ್ದಾನೆ.

Viral News: ಆ ಒಂದು ಫೋನ್​​ ಕಾಲ್, ಮದುವೆಯೂ ಬೇಡ, ಹುಡುಗಿಯೂ ಬೇಡ ಎಂದು ಓಡಿ ಹೋದ ವರ
ಅಕ್ಷತಾ ವರ್ಕಾಡಿ
|

Updated on: Jul 13, 2024 | 3:35 PM

Share

ಉತ್ತರ ಪ್ರದೇಶ: ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ, ಇನ್ನೇನು ತಾಳಿ ಕಟ್ಟುವ ವೇಳೆಗೆ ಮುರಿದು ಬಿದ್ದಿದೆ. ತಾಳಿ ಕಟ್ಟುವ ವೇಳೆಯಲ್ಲಿ ವರನ ಮೊಬೈಲ್ ಫೋನ್‌ಗೆ ಕರೆಯೊಂದು ಬಂದಿದ್ದು, ವಧುವಿನ ಪ್ರೇಮ್​​ ಕಹಾನಿ ಬಯಲಾಗಿದೆ. ಇದರಿಂದ ನೊಂದ ವರ ವಧುವನ್ನು ಬಿಟ್ಟು ಮಂಟಪದಿಂದ ಓಡಿ ಹೋಗಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.

ತಾಳಿ ಕಟ್ಟುವ ಶುಭ ವೇಳೆಯಲ್ಲಿ ವರನ ಫೋನಿಗೊಂದು ಕರೆ ಬಂದಿದೆ. ವಧುವಿನ ಪ್ರಿಯಕರ ಕರೆ ಮಾಡಿದ್ದು, ತಮ್ಮಿಬ್ಬರ ಹಲವು ವರ್ಷಗಳ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಇದಕ್ಕೆ ವರ ನಿಮ್ಮಿಬ್ಬರ ನಡುವಿನ ಪ್ರೀತಿಗೆ ಸಾಕ್ಷಿಯೇನಿದೆ? ಎಂದು ಕೇಳಿದ್ದಾನೆ. ವಧುವಿನ ಜೊತೆಗಿದ್ದ ಸಾಕಷ್ಟು ಫೋಟೋ, ವಿಡಿಯೋಗಳನ್ನು ಯುವಕ ವರನ ಫೋನ್​​ಗೆ ಕಳುಹಿಸಿದ್ದು, ಇವರಿಬ್ಬರ ನಡುವಿನ ಆತ್ಮೀಯತೆಯನ್ನು ಕಂಡು ವರ ಶಾಕ್​​ ಆಗಿದ್ದು, ತಾಳಿ ಕಟ್ಟುವ ಬದಲು ಮದುವೆ ಮಂಟಪದಿಂದ ಓಡಿ ಹೋಗಿದ್ದಾನೆ.

ಇದನ್ನೂ ಓದಿ: Hyderabad: 18 ದಿನದ ಮಗುವನ್ನು 1.5 ಲಕ್ಷ ರೂ.ಗೆ ಮಾರಾಟ ಮಾಡಿದ ತಂದೆ

ಯುವಕ ವಧುವಿನೊಂದಿಗೆ ಒಂದೇ ಕೊಠಡಿಯಲ್ಲಿದ್ದ ಖಾಸಗಿ ಫೋಟೋ ವಿಡಿಯೋಗಳನ್ನು ಕಳುಹಿಸಿದ್ದಾನೆ. ಆತ್ಮೀಯ ಕ್ಷಣಗಳ ವೀಡಿಯೋ ನೋಡಿದ ವರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ವಧುವಿನ ಪ್ರಿಯಕರ ಎಂದು ಹೇಳಲಾಗಿರುವ ವ್ಯಕ್ತಿಯನ್ನು ಕಮಲ್ ಸಿಂಗ್ ಗುರುತಿಸಲಾಗಿದ್ದು, ವಧುವಿನ ಕುಟುಂಬಸ್ಥರ ದೂರಿನ ಆಧಾರದ ಮೇರೆಗೆ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ