Viral News: ಈ ಯುವಕನಿಗೆ ಪ್ರತಿ ಶನಿವಾರ ಹಾವು ಕಚ್ಚುತ್ತೆ; ಈತನ ಭವಿಷ್ಯದಲ್ಲಿದೆ ಅಚ್ಚರಿಯ ಸಂಗತಿ
ಉತ್ತರ ಪ್ರದೇಶದ ಫತೇಪುರ್‌ನಲ್ಲಿ 24 ವರ್ಷದ ಯುವಕನಿಗೆ ಕಳೆದ 40 ದಿನಗಳಲ್ಲಿ ಆಶ್ಚರ್ಯಕರವಾಗಿ ಏಳನೇ ಬಾರಿಗೆ ಹಾವು ಕಚ್ಚಿದೆ. ಇನ್ನೂ ವಿಚಿತ್ರವೆಂದರೆ ಈತನಿಗೆ ಪ್ರತಿ ಶನಿವಾರ ಮಾತ್ರ ಹಾವು ಕಚ್ಚುತ್ತದೆ. ಇಂದು ಕೂಡ ಆತನಿಗೆ ಹಾವು ಕಚ್ಚಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಅಚ್ಚರಿಯ ಘಟನೆಗೆ ವೈದ್ಯರೇ ಶಾಕ್ ಆಗಿದ್ದಾರೆ.
ಫತೇಪುರ: ಉತ್ತರ ಪ್ರದೇಶದ ಫತೇಪುರದಲ್ಲಿ 24 ವರ್ಷದ ಯುವಕ ವಿಕಾಸ್ ದುಬೆಗೆ ಹಾವು ಒಂದಲ್ಲ ಎರಡಲ್ಲ, ಕಳೆದ 40 ದಿನಗಳಲ್ಲಿ ಬರೋಬ್ಬರಿ 7 ಬಾರಿ ಕಚ್ಚಿದೆ. ಇಂದು ಶನಿವಾರವಾದ್ದರಿಂದ ಇಂದು ಕೂಡ ಆತನಿಗೆ ಹಾವು ಕಚ್ಚಿದ್ದು, ಕಡಿತದ ನಂತರ ವಿಕಾಸ್ ದುಬೆ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದೆ.
ಫತೇಪುರ ಜಿಲ್ಲೆಯ ಸೌರಾ ಗ್ರಾಮದ ನಿವಾಸಿ ವಿಕಾಸ್ ದುಬೆ ಅವರಿಗೆ ತನ್ನ ಚಿಕ್ಕಪ್ಪನ ಮನೆಯಲ್ಲಿ ಹಾವು ಕಚ್ಚಿದೆ. ಜೂನ್ 2ರಿಂದ ಜುಲೈ 6ರ ನಡುವೆ ದುಬೆ ಅವರಿಗೆ 6 ಬಾರಿ ಹಾವು ಕಚ್ಚಿದೆ.
ದುಬೆಯ ಪದೇ ಪದೇ ಹಾವು ಕಡಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಟುಂಬದವರು, ಈಗಾಗಲೇ 9 ಬಾರಿ ಹಾವು ಕಚ್ಚುವ ಮುನ್ಸೂಚನೆಯನ್ನು ಅನುಭವಿಸಿದ್ದಾರೆ. 8 ಬಾರಿ ಹಾವು ಕಚ್ಚುವವರೆಗೆ ಮಾತ್ರ ವಿಕಾಸ್ ಬದುಕುಳಿಯುತ್ತಾರೆ ಎಂದು ಆತನ ಭವಿಷ್ಯದಲ್ಲಿದೆ. 9ನೇ ಬಾರಿಗೆ ಹಾವು ಕಚ್ಚಿದರೆ ಯಾವುದೇ ವೈದ್ಯರು, ಪುರೋಹಿತರು ಅಥವಾ ಮಾಂತ್ರಿಕರು ಆತನನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Shocking News: ಶಾಲೆಯಲ್ಲೇ 16 ವರ್ಷದ ವಿದ್ಯಾರ್ಥಿಗೆ ಹೃದಯಾಘಾತ; ಶಾಕಿಂಗ್ ವಿಡಿಯೋ ವೈರಲ್
ಜೂನ್ 2ರಂದು ತನ್ನ ಮನೆಯಲ್ಲಿ ಹಾಸಿಗೆಯಿಂದ ಎದ್ದ ನಂತರ ವಿಕಾಸ್ ದುಬೆಗೆ ಹಾವು ಕಚ್ಚಿತ್ತು. ಇದೇ ಮೊದಲ ಬಾರಿಯ ಘಟನೆ. ನಂತರ 6 ಬಾರಿ ಅವರಿಗೆ ಹಾವು ಕಚ್ಚಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ನಾಲ್ಕನೇ ಬಾರಿ ಹಾವು ಕಡಿತದ ನಂತರ ದುಬೆಗೆ ತನ್ನ ಮನೆಯನ್ನು ಬಿಟ್ಟು ಬೇರೆಡೆ ಇರುವಂತೆ ಸಲಹೆ ನೀಡಲಾಯಿತು. ಹೀಗಾಗಿ, ರಾಧಾನಗರದಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳಿದ ಅವರಿಗೆ ಅಲ್ಲಿಯೂ ಐದನೇ ಬಾರಿಗೆ ಮತ್ತೆ ಹಾವು ಕಚ್ಚಿತ್ತು. ನಂತರ ದುಬೆಯ ಪೋಷಕರು ಅವನನ್ನು ಮನೆಗೆ ಕರೆತಂದರು.
ಜುಲೈ 6ರಂದು ವಿಕಾಸ್ ಮತ್ತೊಮ್ಮೆ ಹಾವಿನ ದಾಳಿಗೆ ಒಳಗಾಗಿದ್ದರು. ಮತ್ತೆ ಅವರ ಸ್ಥಿತಿ ಹದಗೆಟ್ಟಿತು. ಆತನ ಆರೋಗ್ಯದ ಬಗ್ಗೆ ಆತಂಕಗೊಂಡ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ: Video Viral: ಶೂ ಒಳಗೆ ಬೆಚ್ಚಗೆ ಕುಳಿತಿದ್ದ ನಾಗರ ಹಾವು; ಬೆಚ್ಚಿ ಬಿದ್ದ ಯುವತಿ
ವಿಚಿತ್ರವೆಂದರೆ ವಿಕಾಸ್ಗೆ ಹಾವು ಕಡಿತವು ಯಾವಾಗಲೂ ಶನಿವಾರ ಅಥವಾ ಭಾನುವಾರದಂದು ಸಂಭವಿಸುತ್ತದೆ. ಹಾವು ಕಚ್ಚುವ ಮೊದಲು ಪ್ರತಿ ಬಾರಿಯೂ ಅವರಿಗೆ ಒಂದು ಮುನ್ಸೂಚನೆ ಸಿಗುತ್ತಿತ್ತು ಎಂದು ದುಬೆ ಈ ಹಿಂದೆ ಹೇಳಿದ್ದರು.
ಇದೀಗ ಏಳನೇ ಹಾವಿನ ಕಡಿತದ ನಂತರ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ, ಅವರ ಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಣಯಿಸಲು ಇನ್ನೂ 12ರಿಂದ 24 ಗಂಟೆಗಳು ಬೇಕಾಗುತ್ತದೆ.
“ಆತನಿಗೆ ನಿಜವಾಗಿಯೂ ಹಾವು ಕಚ್ಚುತ್ತಿದೆಯೇ ಎಂದು ನಾವು ಇನ್ನೂ ಲೆಕ್ಕಾಚಾರ ಮಾಡಬೇಕಾಗಿದೆ. ಅವರಿಗೆ ಚಿಕಿತ್ಸೆ ನೀಡುವ ವೈದ್ಯರ ಬಗ್ಗೆಯೂ ಗಮನಿಸಲಾಗುತ್ತಿದೆ. ಪ್ರತಿ ಶನಿವಾರ ಒಬ್ಬ ವ್ಯಕ್ತಿಗೆ ಹಾವು ಕಚ್ಚುತ್ತದೆ, ಆ ವ್ಯಕ್ತಿಯನ್ನು ಒಂದೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಪ್ರತಿ ಬಾರಿ ಕೇವಲ ಒಂದು ದಿನದಲ್ಲಿ ಆತ ಚೇತರಿಸಿಕೊಳ್ಳುತ್ತಿರುವುದು ವಿಚಿತ್ರವಾಗಿ ತೋರುತ್ತದೆ ” ಎಂದು ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಮೂವರು ವೈದ್ಯರ ತಂಡವನ್ನು ರಚಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Sat, 13 July 24