ವಯಸ್ಸು ಕೇವಲ ಸಂಖ್ಯೆ ಅಷ್ಟೇ, ಆರೂವರೆ ಅಡಿ ಎತ್ತರದ ಗೇಟ್ ಹಾರಿ ವೃದ್ಧಾಶ್ರಮದಿಂದ ಪರಾರಿಯಾದ 92ರ ಅಜ್ಜಿ

ಸಾಧಿಸುವ ಛಲವೊಂದಿದ್ದರೆ ವಯಸ್ಸು ಕಾರಣವಾಗುವುದಿಲ್ಲ ಎನ್ನುವುದಕ್ಕೆ ಈ ಅಜ್ಜಿ ಸಾಕ್ಷಿ. ವೃದ್ಧಾಶ್ರಮದಿಂದ ಓಡಿಹೋಗಬೇಕು ಅಂದುಕೊಂಡಿದ್ದ ಅಜ್ಜಿಗೆ ವಯಸ್ಸು ಅಡ್ಡಿಬರಲಿಲ್ಲ, 92 ವರ್ಷದ ವೃದ್ಧೆಯೊಬ್ಬರು ಆರೂವರೆ ಅಡಿ​ ಎತ್ತರದ ಗೇಟ್​ ಹಾರಿ ವೃದ್ಧಾಶ್ರಮದಿಂದ ತಪ್ಪಿಸಿಕೊಂಡಿದ್ದಾರೆ.

ವಯಸ್ಸು ಕೇವಲ ಸಂಖ್ಯೆ ಅಷ್ಟೇ, ಆರೂವರೆ ಅಡಿ ಎತ್ತರದ ಗೇಟ್ ಹಾರಿ ವೃದ್ಧಾಶ್ರಮದಿಂದ ಪರಾರಿಯಾದ 92ರ ಅಜ್ಜಿ
ಗೇಟ್
Follow us
ನಯನಾ ರಾಜೀವ್
|

Updated on: Jul 16, 2024 | 8:49 AM

ಈಗೆಲ್ಲಾ 30 ವರ್ಷ ದಾಟುತ್ತಿದ್ದಂತೆ ಒಂದು ಮಾರು ನಡೆದರೆ ಕೈಕಾಲು ನೋವು ಶುರುವಾಗುತ್ತದೆ. ನಮ್ಮ ದಿನಚರಿಯಿಂದ ಇನ್ನು 50 ವರ್ಷ ದಾಟುವಷ್ಟೊತ್ತಿಗೆ ಬಿಪಿ, ಶುಗರ್ ಹೀಗೆ ಹತ್ತು ಹಲವು ಕಾರಣಗಳಿಂದ ಹಾಸಿಗೆ ಹಿಡಿಯುವ ಪರಿಸ್ಥಿತಿ ಬರುತ್ತದೆ. ಇನ್ನು 90ರವರೆಗೆ ಬದುಕುವ ಮಾತೆಲ್ಲಿ. ಆದರೆ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ಈ ಅಜ್ಜಿ ತೋರಿಸಿಕೊಟ್ಟಿದ್ದಾರೆ.

ಆರೂವರೆ ಅಡಿ​ ಎತ್ತರದ ಗೇಟ್​ ಹಾರಿ 92 ವರ್ಷದ ಅರ್ಜಿ ವೃದ್ಧಾಶ್ರಮದಿಂದ ತಪ್ಪಿಸಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಇದೀಗ ವಿಡಿಯೋ ವೈರಲ್ ಆಗಿದೆ. ಸಾಕಷ್ಟು ಮಂದಿ ಕುತೂಹಲದಿಂದ ವೀಕ್ಷಿಸಿದ್ದಾರೆ. ಈ ಅಜ್ಜಿ ಅಲ್ಝೈಮರ್​ ರೋಗ ಅಂದರೆ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಆದರೆ ಕಾಯಿಲೆ ಮನಸ್ಸಿಗಷ್ಟೇ ದೇಹಕ್ಕಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಿಡಿಯೋ ನೋಡಿದ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ಓರ್ವ ಬಳಕೆದಾರರು ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಬರೆದಿದ್ದರೆ ಇನ್ನೊಬ್ಬರು ವಯಸ್ಸಾದಂತೆ ಜನರು ಚಿಕ್ಕವರಾಗುತ್ತಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Video: ತರಗತಿಯಲ್ಲಿ ಕೂತು ಪಾಠ ಕೇಳುತ್ತಿದ್ದ ಪುಟ್ಟ ಬಾಲಕಿಯ ತಲೆ ಮೇಲೆ ಬಿದ್ದ ಫ್ಯಾನ್

ಅವರ ಫಿಟ್‌ನೆಸ್ ಮಟ್ಟವು 1992 ರಲ್ಲಿ ಜನಿಸಿದವರಿಗಿಂತ ಉತ್ತಮವಾಗಿದೆ ಎಂದಿದ್ದಾರೆ. ನಾನು 29 ನೇ ವಯಸ್ಸಿನಲ್ಲಿ ಅದನ್ನು ಏರಲು ಸಾಧ್ಯವಾಗಲಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.ಆದರೆ ಅವರಿಗೆ ಅಲ್ಝೈಮರ್ ಕಾಯಿಲೆ ಇರುವ ಕಾರಣ ಅವರು ಎಲ್ಲಾದರೂ ಓಡಿ ಹೋಗಿ ಏನಾದರೂ ಅಪಾಯ ಎದುರಾದರೆ ಎನ್ನುವ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. ಇವರು ಕೇವಲ 24 ಸೆಕೆಂಡುಗಳಲ್ಲಿ ಗೇಟ್​ ಹತ್ತಿ ಹಾರಿದ್ದಾರೆ.

ವ್ಯಾಯಾಮ ಮತ್ತು ಕ್ಲೈಂಬಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಮಹಿಳೆ ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶಾಂಡೋಂಗ್ ಪ್ರಾಂತ್ಯದ ನರ್ಸಿಂಗ್ ಹೋಮ್‌ನಲ್ಲಿನ ಸಿಬ್ಬಂದಿ ಶೀಘ್ರದಲ್ಲೇ ಅವರನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ಪತ್ತೆಹಚ್ಚಲು ಸಾಧ್ಯವಾಯಿತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ