Viral Video: ಉತ್ತರ ಪ್ರದೇಶ; ಕಾರ್ಮಿಕನೀಗ ಏಷ್ಯನ್ ಗೇಮ್ಸ್ ಪದಕ ವಿಜೇತ; ರಾಮ್ ಬಾಬೂ ಸ್ಫೂರ್ತಿಪಯಣ

|

Updated on: Oct 06, 2023 | 10:39 AM

Bronze Medal: ಕೆಲಸಕ್ಕೂ ಆಸಕ್ತಿಗೂ ಸಂಬಂಧ ಇರಬೇಕು ಅಂತೇನಿಲ್ಲ. ಆಸಕ್ತಿಯನ್ನು ಬೆಳೆಸಿಕೊಂಡು ಹೋಗುವಲ್ಲಿ ಬೇಕಿರುವುದು ದೃಢ ನಿಶ್ಚಯ. ಕೆಲಸ ಎನ್ನುವುದು ಹೊಟ್ಟೆಪಾಡಿಗಾಗಿ. ಅದು ನಮ್ಮ ಪ್ರತಿಭೆ ಮತ್ತು ಆಸಕ್ತಿಯನ್ನು ಪೋಷಿಸಲು ಸಹಾಯಕವಾಗಿದ್ದರೆ ಸಾಕು. ಆದರೆ ಕಷ್ಟನಷ್ಟಗಳನ್ನು ಸಹಿಸುವ ತಾಳ್ಮೆಯಂತೂ ಇರಲೇಬೇಕು. ಇದಕ್ಕೆ ಉತ್ತಮ ಉದಾಹರಣೆ ರಾಮ್​ ಬಾಬೂ. 

Viral Video: ಉತ್ತರ ಪ್ರದೇಶ; ಕಾರ್ಮಿಕನೀಗ ಏಷ್ಯನ್ ಗೇಮ್ಸ್ ಪದಕ ವಿಜೇತ; ರಾಮ್ ಬಾಬೂ ಸ್ಫೂರ್ತಿಪಯಣ
ರಾಮ್ ಬಾಬೂ
Follow us on

Asian Games: ದೇಶಾದ್ಯಂತ ಗಮನ ಸೆಳೆದಿರುವ ಉತ್ತರ ಪ್ರದೇಶದ ರಾಮ್​ ಬಾಬೂ ಎಂಬ ಯುವಕ ಏಷ್ಯನ್​ ಗೇಮ್ಸ್​ನಲ್ಲಿ 35 ಕಿ.ಮೀ ವೇಗದ ನಡಿಗೆಯಲ್ಲಿ (Race walk) ಕಂಚಿನ ಪದಕ ಗೆಲ್ಲುವ ಮೂಲಕ ಅನೇಕರಿಗೆ ಸ್ಫೂರ್ತಿ ಎನ್ನಿಸಿದ್ದಾರೆ. ಶ್ರದ್ಧೆ ಮತ್ತು ದೃಢನಿಶ್ಚಯದಿಂದ ಒಬ್ಬ ವ್ಯಕ್ತಿ ಯಾವ ಎತ್ತರಕ್ಕೂ ಏರಬಲ್ಲ ಎನ್ನುವುದಕ್ಕೆ ಈ ಯುವಕನೇ ಸಾಕ್ಷಿ.  ರಾಷ್ಟ್ರಮಟ್ಟದಲ್ಲಿ ದಾಖಲೆಯನ್ನು ಮುರಿದ ಬಾಬೂ ಸಾಧನೆಯ ಹಿಂದೆ ಕಷ್ಟಗಳ ಸರಮಾಲೆ ಇದೆ. ತ್ಯಾಗದ ಫಲವಿದೆ. ಈ ಮೂಲಕವೇ ಇವರು ಗಟ್ಟಿ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದು. ಐಎಫ್​ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್ ರಾಮ್​  ಬಾಬೂ ಬಗ್ಗೆ X ನಲ್ಲಿ ವಿಡಿಯೋ ಮಾಡಿದ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ : Viral Video: ಎಸಿಡ್​ ದಾಳಿ; ‘ಅವರು ಕಣ್ಣಿಟ್ಟಿದ್ದು ನನ್ನ ಸ್ನೇಹಿತೆಯ ಮೇಲೆ, ಗುರಿಯಾಗಿದ್ದು ನಾನು’

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ಬೌರ್‌ನ ಎಂಬ ಹಳ್ಳಿಯಲ್ಲಿರುವ ಬಾಬೂ ಮ್ಯಾರಥಾನ್ ಓಟಗಾರರಾಗಿ ಕ್ರೀಡಾರಂಗವನ್ನು ಪ್ರವೇಶಿಸಿದರು. ಆದರೆ ವೇಗದ ನಡಿಗೆ ಅವರನ್ನು ಸೆಳೆಯಿತು. ವಾರಣಾಸಿಯಲ್ಲಿ ಹೋಟೆಲ್ ಕಾರ್ಮಿಕ ಮತ್ತು ಕೊರಿಯರ್ ಪ್ಯಾಕೇಜರ್ ಆಗಿ ಕೆಲಸ ಮಾಡುತ್ತ ತಮ್ಮ ತರಬೇತಿಗಾಗಿ ಹಣವನ್ನು ಹೊಂದಿಸಿಕೊಳ್ಳುತ್ತಿದ್ದರು. ಆದರೆ ಕೊವಿಡ್​ ಸಮಯದಲ್ಲಿ ಬಾಬೂ ತಂದೆ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದಾಗ MNREGA ಯೋಜನೆಯಡಿಯಲ್ಲಿ ಬಾಬೂ ಕೆಲಸಕ್ಕೆ ತೊಡಗಿಕೊಳ್ಳಬೇಕಾಯಿತು. ಆದರೂ ಅವರುತಮ್ಮ ಆಸಕ್ತಿಯನ್ನು ಕೈಬಿಡಲಿಲ್ಲ. ತತ್ಫಲವಾಗಿ ಏಷ್ಯನ್ ಗೇಮ್ಸ್‌ನಲ್ಲಿ 35 ಕಿಮೀ ವೇಗದ ನಡಿಗೆಯಲ್ಲಿ ಕಂಚಿನ ಪದಕವನ್ನು ಗೆದ್ದರು.

ರಾಮ್​ ಬಾಬೂ ಬಗ್ಗೆ ಪ್ರವೀಣ ಕಸ್ವಾನ್​

ಅಕ್ಟೋಬರ್ 4 ರಂದು ಪ್ರವೀಣ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈತನಕ 2.8 ಲಕ್ಷ ಜನರು  ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಈ ಹಂಚಿಕೆಯು ಸುಮಾರು 7,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇಂಥ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿದ ವ್ಯಕ್ತಿಗೆ ಧನ್ಯವಾದ ಎಂದಿದ್ದಾರೆ ಒಬ್ಬರು. ನಿರ್ಧರ ಎನ್ನುವುದು ಬದುಕಿನಲ್ಲಿ ಬಹಳ ಮುಖ್ಯ. ನಿರ್ಧಾರಕ್ಕೆ ತಾಳ್ಮೆ ಬಹಳ ಮುಖ್ಯ. ಈ ತಾಳ್ಮೆಯೇ ನಿಮ್ಮ ಗುರಿಯೆಡೆ ಕರೆದೊಯ್ಯುತ್ತದೆ. ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸ್ಪೇಸ್ ಕಾಫಿ; ಬಾಹ್ಯಾಕಾಶದಲ್ಲಿ ವಿಶೇಷ ಕಪ್​ನಲ್ಲಿ ಕಾಫಿ ಕುಡಿದ ಗಗನಯಾತ್ರಿ

ಕೆಲಸಕ್ಕೂ ಆಸಕ್ತಿಗೂ ಸಂಬಂಧ ಇರಬೇಕು ಅಂತೇನಿಲ್ಲ. ಆಸಕ್ತಿಯನ್ನು ಬೆಳೆಸಿಕೊಂಡು ಹೋಗುವಲ್ಲಿ ಇರಬೇಕಿರುವುದು ದೃಢ ನಿಶ್ಚಯ. ಕೆಲಸ ಎನ್ನುವುದು ಹೊಟ್ಟೆಪಾಡಿಗಾಗಿ. ಅದು ನಮ್ಮ ಪ್ರತಿಭೆ ಮತ್ತು ಆಸಕ್ತಿಯನ್ನು ಪೋಷಿಸುವಲ್ಲಿ ಸಹಾಯಕವಾಗಿದ್ದರೆ ಸಾಕು. ಆದರೆ ಕಷ್ಟನಷ್ಟಗಳನ್ನು ಸಹಿಸುವ ತಾಳ್ಮೆಯಂತೂ ಇರಲೇಬೇಕು. ಇದಕ್ಕೆ ಉತ್ತಮ ಉದಾಹರಣೆ ರಾಮ್​ ಬಾಬೂ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ