Viral : ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಬೇಟೆಯಾಡಿದ ಹುಲಿರಾಯ, ವಿಡಿಯೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 14, 2024 | 3:19 PM

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ಮುಂದೆಯೇ ಹುಲಿಯು ಜಿಂಕೆಯನ್ನು ಬೇಟೆಯಾಡಿರುವ ದೃಶ್ಯವು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Viral : ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಬೇಟೆಯಾಡಿದ ಹುಲಿರಾಯ, ವಿಡಿಯೋ ವೈರಲ್
ಹುಲಿ ( ಸಾಂಧರ್ಭಿಕ ಚಿತ್ರ )
Follow us on

ಹುಲಿಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು. ಕಾಡಿನಲ್ಲಿ ಯಾವುದಾದರೂ ಬೇಟೆ ಸಿಗುತ್ತಾ ಅಂತ ಅತ್ತಿಂದ ಇತ್ತ ಕಣ್ಣಾಯಿಸುತ್ತಾ, ಇವುಗಳ ಬೇಟೆ, ಕಾದಾಟ, ಗಾಂಭೀರ್ಯದ ನಡಿಗೆಯ ಕ್ಷಣಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ನಿಮ್ಮ ಕಣ್ಣ ಮುಂದೆ ಹುಲಿಯು ಯಾವುದಾದರೊಂದು ಪ್ರಾಣಿಯನ್ನು ಬೇಟೆಯಾಡಿದರೆ ಹೇಗಿರಬಹುದು ಎಂದು ಒಮ್ಮೆ ಊಹಿಸಿದ್ದೀರಾ. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಸಫಾರಿಯ ವೇಳೆ ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಹುಲಿಯು ಬೇಟೆಯಾಡಿದೆ.

ಸೋಶಿಯಲ್ ಮೀಡಿಯಾದಲ್ಲೂ ಈ ಅಪರೂಪದ ಬೇಟೆಯ ಕ್ಷಣದ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪ್ರವಾಸಿಗರ ಮುಂದೆ ಹುಲಿ ಬೇಟೆಯಾಡುತ್ತಿರುವುದನ್ನು ನೋಡಬಹುದು. ಈ ಭಯಾನಕ ಬೇಟೆಯ ದೃಶ್ಯ ನೋಡಲು ಪ್ರವಾಸಿಗರ ವಾಹನಗಳು ಸಾಲಾಗಿ ನಿಂತಿದೆ. ಆದರೆ ಹುಲಿಯು ತನ್ನ ಸುತ್ತಲ್ಲಿರುವ ಜನರ ಕಡೆ ಗಮನ ಹರಿಸದೇ, ತನ್ನ ಬೇಟೆಯಾದ ಜಿಂಕೆಯನ್ನು ಆಹಾರವನ್ನಾಗಿ ಮಾಡಿಕೊಳ್ಳುವುದರೆಡೆಗೆ ಹಾಗೂ ತನ್ನ ಶಕ್ತಿಯನ್ನೆಲ್ಲಾ ಕೇಂದ್ರಿಕರಿಸಿರುವುದನ್ನು ನೋಡಬಹುದು.

ಈ ವೇಳೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ಪ್ರವಾಸಿಗರ 2-3 ವಾಹನಗಳು ಹುಲಿ ಬೇಟೆಯಾಡುವುದನ್ನು ನೋಡಲು ನಿಂತಿದ್ದಾರೆ. 23 ಸೆಕೆಂಡುಗಳ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದು, ಬಳಕೆದಾರರೊಬ್ಬರು, ‘ನೀವು ಆಹಾರವನ್ನು ತಿನ್ನುತ್ತಿರುವಾಗ ಅನೇಕರು ನಿಮ್ಮನ್ನು ನೋಡುತ್ತಿದ್ದರೆ ಅಥವಾ ಅದನ್ನು ರೆಕಾರ್ಡ್​​​ ಮಾಡುತ್ತಿದ್ದರೆ ಏನೆನ್ನಿಸುತ್ತದೆ ‘ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ‘ ಕನಿಷ್ಠ ಪಕ್ಷ ಹುಲಿಗೆ ಆಹಾರ ಸೇವಿಸುವ ಖಾಸಗಿ ಸಮಯವನ್ನು ನೀಡಬೇಕಿತ್ತು, ಹುಲಿ ತುಂಬಾ ಹತ್ತಿರದಲ್ಲಿದೆ, ಇಲ್ಲಿ ಕಾರನ್ನು ನಿಲ್ಲಿಸುವುದು ಸಂಪೂರ್ಣವಾಗಿ ಅನಗತ್ಯವಾಗಿತ್ತು’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಹುಲಿಯ ಆವಾಸಸ್ಥಾನದ ಬಳಿ ಹೋಗಲು ಜನರಿಗೆ ಅನುಮತಿ ನೀಡುವುದು ಸರಿಯಲ್ಲ’ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ