ಅನೇಕ ಉದ್ಯಮಿಗಳಿಗೆ ತನ್ನ ವ್ಯಕ್ತಿತ್ವ ಮತ್ತು ಸಾಧನೆಯ ಮೂಲಕ ಸ್ಫೂರ್ತಿಯಾಗಿರುವ ಭಾರತದ ಪ್ರಸಿದ್ದ ಉದ್ಯಮಿ ರತನ್ ಟಾಟಾ. ಇವರ ವ್ಯಕ್ತಿತ್ವದಿಂದಲೇ ಇವರು ಚಿರಪರಿಚಿತರು. ಇವರು ಕೇವಲ ಉದ್ಯಮಿಯಷ್ಟೇ ಅಲ್ಲ, ತತ್ವಜ್ಞಾನಿಯೂ ಹೌದು. ದೇಶ ಕೊವಿಡ್ 19 ಸಂಕಷ್ಟಕ್ಕೀಡಾಗಿರುವ ಸಮಯದಲ್ಲಿ ಇವರು ನೀಡಿರುವ ಸಹಾಯ ಅಷ್ಟಿಷ್ಟಲ್ಲ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 8.5 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇಷ್ಟೊಂದು ಫಾಲೋವರ್ಸ್ಗಳನ್ನು ಪಡೆದುಕೊಂಡಿರುವುದು ವಿಶೇಷ ಸಂಗತಿ ಏನಲ್ಲಾ, ಆದರೆ ಇವರು ಒಂದೇ ಒಂದು ಇನ್‌ಸ್ಟಾಗ್ರಾಮ್ ಖಾತೆ ಫಾಲೋ ಮಾಡುತ್ತಿದ್ದಾರೆ. ಆದಾಗ್ಯೂ, ಇದು ಯಾವುದೇ ಸೆಲೆಬ್ರಿಟಿಗಳು ಅಥವಾ ಅವರ ಗೆಳೆಯರಲ್ಲ. ಅಷ್ಟಕ್ಕೂ ರತನ್ ಟಾಟಾ ಫಾಲೋ ಮಾಡುತ್ತಿರುವ ಇನ್‌ಸ್ಟಾಗ್ರಾಮ್ ಖಾತೆ ಯಾವುದು ಎಂದು ನೀವು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಪೂರ್ತಿಯಾಗಿ ಓದಿ.
ಸದಾ ಸಮಾಜ ಸೇವೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಯುವ ಜನತೆಗೆ ಸ್ಫೂರ್ತಿಯಾಗಿರುವ ರತನ್ ಟಾಟಾರವರು ಫಾಲೋ ಮಾಡುವ ಏಕೈಕ ಇನ್‌ಸ್ಟಾಗ್ರಾಮ್ ಖಾತೆ ಟಾಟಾ ಗ್ರೂಪ್‌ನ ಟಾಟಾ ಟ್ರಸ್ಟ್ಸ್. ಇತ್ತೀಚಿನ ದಿನಗಳಲ್ಲಿ ಟಾಟಾ ಟ್ರಸ್ಟ್‌ಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ರತನ್ ಟಾಟಾ.
ಇದನ್ನೂ ಓದಿ: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಫ್ಲೈಟ್ ಹತ್ತಿದ ಅಜ್ಜಿಯ ವಿಡಿಯೋ ವೈರಲ್
130 ವರ್ಷಗಳ ಹಿಂದೆ ಭಾರತೀಯರ ಉನ್ನತ ಶಿಕ್ಷಣಕ್ಕಾಗಿ ಸಹಾಯಕವಾಗುವಂತೆ ಟಾಟಾ ಗ್ರೂಪ್ ಸಂಸ್ಥಾಪಕ ಜಮ್ ಶೆಟ್ ಜಿ ಟಾಟಾ 1892ರಲ್ಲಿ ಈ ಟಾಟಾ ಟ್ರಸ್ಟ್ ಸ್ಥಾಪಿಸಿದರು. ದೇಶ ಕಟ್ಟಿದ ಭಾರತೀಯ ಉದ್ಯಮದ ಪಿತಾಮಹ ಎಂದೇ ಕರೆಯಲಾಗುವ ಜಮ್‍ಸೆಟ್‍ಜಿ ಟಾಟಾಜಗತ್ತಿನ ನಂಬರ್ ವನ್ ದಾನಿಯಾಗಿದ್ದರು. ದಾನ ಮಾಡುವ ವಿಚಾರದಲ್ಲಿ ಜಮ್‍ಸೆಟ್‍ಜಿ ಟಾಟಾ, ಮೈಕ್ರೋಸಾಫ್ಟ್ ದಿಗ್ಗಜ ಬಿಲ್‌ಗೇಟ್ಸ್‌ರನ್ನೇ ಹಿಂದಿಕ್ಕಿದ್ದಾರೆ. ಟಾಟಾ ಗ್ರೂಪ್‌ನ ಫಂಡ್ ಮುಖ್ಯವಾಗಿ ಭಾರತೀಯ ನಾಗರಿಕರಿಗೆ ಉನ್ನತ ಶಿಕ್ಷಣ ನೀಡಲು ಬಳಕೆ ಮಾಡಲಾಗುತ್ತದೆ. ಟಾಟಾ ಟ್ರಸ್ಟ್ಸ್ ಅಧಿಕೃತ ವೆಬ್‌ಸೈಟ್ ಪ್ರಕಾರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವುದು, ಉನ್ನತ ಸಂಶೋಧನೆಗೆ ಒತ್ತು ನೀಡುವುದು ಆ ಸಂದರ್ಭದಲ್ಲಿ ಪ್ರಮುಖವಾಗಿತ್ತು. ಬೆಳವಣಿಗೆ ಹೊಂದಿದ ಅಮೇರಿಕಾದಂತಹ ದೇಶಗಳು ಕೂಡಾ ಇದೇ ಮಾರ್ಗವನ್ನು ಹಿಡಿದಿದೆ ಎಂದು ಉಲ್ಲೇಖ ಮಾಡಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:09 pm, Fri, 10 March 23