AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratan Tata: ಟಾಟಾ ಇಂಡಿಕಾಗೆ 25 ವರ್ಷ; ಭಾವನಾತ್ಮಕ ಸಂದೇಶದ ಮೂಲಕ ರಜತ ಸಂಭ್ರಮ ಹಂಚಿಕೊಂಡ ರತನ್ ಟಾಟಾ

ಎರಡು ದಶಕಗಳ ಕಾಲ ದೇಶದ ಕಾರು ಮಾರುಕಟ್ಟೆಯಲ್ಲಿ, ಪ್ರಯಾಣಿಕರ ಮನದಲ್ಲಿ ಅಚ್ಚಳಿಯದೇ ಉಳಿದ ಟಾಟಾ ಇಂಡಿಕಾ ಕಾರು ತಯಾರಿಯನ್ನು 2018ರ ಏಪ್ರಿಲ್​ನಲ್ಲಿ ಸ್ಥಗಿತಗೊಳಿಸಲಾಗಿತ್ತು.

Ratan Tata: ಟಾಟಾ ಇಂಡಿಕಾಗೆ 25 ವರ್ಷ; ಭಾವನಾತ್ಮಕ ಸಂದೇಶದ ಮೂಲಕ ರಜತ ಸಂಭ್ರಮ ಹಂಚಿಕೊಂಡ ರತನ್ ಟಾಟಾ
ಟಾಟಾ ಇಂಡಿಕಾ ಕಾರಿನ ಜತೆ ರತನ್ ಟಾಟಾ (ಚಿತ್ರ ಕೃಪೆ; ರತನ್ ಟಾಟಾ ಇನ್​ಸ್ಟಾಗ್ರಾಂ)
TV9 Web
| Edited By: |

Updated on:Jan 17, 2023 | 10:44 AM

Share

ದೇಶದ ಕಾರು ಮಾರುಕಟ್ಟೆಯಲ್ಲಿ ದಶಕಗಳ ಕಾಲ ಪ್ರಸಿದ್ಧಿಪಡೆದಿದ್ದ ಟಾಟಾ ಇಂಡಿಕಾ ಕಾರು (Tata Indica car) ಮಾರುಕಟ್ಟೆ ಪ್ರವೇಶಿಸಿ 25 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಉದ್ಯಮಿ, ಟಾಟಾ ಸಮೂಹ(Tata Group) ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) 25 ವರ್ಷಗಳ ಹಿಂದಿನ ದಿನವನ್ನು ನೆನಪಿಸಿಕೊಂಡು ಸಾಮಾಜಿಕ ಮಾಧ್ಯಮ ಇನ್​ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿದ್ದಾರೆ. 1998ರಲ್ಲಿ ಬಿಡುಗಡೆಯಾಗಿದ್ದ ಟಾಟಾ ಇಂಡಿಯಾ ಕಾರು ಮೊದಲ ದೇಶೀಯ ಪ್ರಯಾಣಿಕ ಕಾರು ಆಗಿತ್ತಲ್ಲದೆ, ಟಾಟಾ ಮೋಟರ್ಸ್​​ ಬಿಡುಗಡೆ ಮಾಡಿದ ಮೊದಲ ಕಾರೂ ಆಗಿತ್ತು. ಡೀಸೆಲ್ ಎಂಜಿನ್​​ ಹೊಂದಿರುವ ಇಂಡಿಕಾ ಕಾರು ಆಗ ಮಾರುಕಟ್ಟೆ ಪ್ರವೇಶಿಸಿತ್ತು.

‘25 ವರ್ಷಗಳ ಹಿಂದೆ ಟಾಟಾ ಇಂಡಿಕಾ ಅನಾವರಣಗೊಳಿಸಲಾಯಿತು. ಅದರೊಂದಿಗೆ ದೇಶೀಯ ಪ್ರಯಾಣಿಕ ಕಾರು ತಯಾರಿಕಾ ಉದ್ಯಮ ಜನ್ಮತಾಳಿತು. ಇದು ನನ್ನ ಅಚ್ಚುಮೆಚ್ಚಿನ ನೆನಪುಗಳನ್ನು ಮೆಲುಕುಹಾಕುವಂತೆ ಮಾಡಿದೆ ಮತ್ತು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ’ ಎಂದು ರತನ್ ಟಾಟಾ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಇದರ ಜತೆಗೆ ಇಂಡಿಕಾ ಕಾರಿನೊಂದಿಗೆ ನಿಂತುಕೊಂಡಿರುವ ಫೋಟೊವನ್ನೂ ಅವರು ಹಂಚಿಕೊಂಡಿದ್ದಾರೆ.

View this post on Instagram

A post shared by Ratan Tata (@ratantata)

ರತನ್ ಟಾಟಾ ಅವರ ಸಂದೇಶವನ್ನು ಮಂಗಳವಾರ ಬೆಳಗ್ಗಿನ ವೇಳೆಗೆ (ಜನವರಿ 17) 35 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅನೇಕರು ಟಾಟಾ ಇಂಡಿಕಾ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಬಿಡುಗಡೆಯಾದ ಮೊದಲ ಎರಡು ವರ್ಷಗಳಲ್ಲೇ ಟಾಟಾ ಇಂಡಿಕಾ ಕಾರು ದೇಶದ ಕಾರು ಮಾರುಕಟ್ಟೆಯಲ್ಲಿ ಗಮನಾರ್ಹ ಸಾಧನೆ ಮಾಡಿತ್ತು. ಇದು ಟಾಟಾ ಸಮೂಹದ ನಂತರದ ಬ್ರ್ಯಾಂಡ್​​ಗಳಿಗೆ ಉತ್ತಮ ತಳಪಾಯವನ್ನೂ ಹಾಕಿಕೊಟ್ಟಿತು. ನಂತರ ಎರಡು ದಶಕಗಳ ಕಾಲ ದೇಶದ ಕಾರು ಮಾರುಕಟ್ಟೆಯಲ್ಲಿ, ಪ್ರಯಾಣಿಕರ ಮನದಲ್ಲಿ ಅಚ್ಚಳಿಯದೇ ಉಳಿದ ಟಾಟಾ ಇಂಡಿಕಾ ಕಾರು ತಯಾರಿಯನ್ನು 2018ರ ಏಪ್ರಿಲ್​ನಲ್ಲಿ ಸ್ಥಗಿತಗೊಳಿಸಲಾಗಿತ್ತು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:42 am, Tue, 17 January 23