Viral Video: ಮಳೆಯನ್ನೂ ಲೆಕ್ಕಿಸದೇ, ವಿದ್ಯುತ್‌ ಸಂಪರ್ಕ ಸರಿಪಡಿಸಿದ ಲೈನ್‌ಮ್ಯಾನ್‌ಗಳ ಕೆಲಸ ನಿಜಕ್ಕೂ ಶ್ಲಾಘನೀಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2024 | 10:34 AM

ವಿಶೇಷವಾಗಿ ಈ ಮಳೆಗಾಲದಲ್ಲಿ ಲೈನ್‌ಮ್ಯಾನ್‌ಗಳ ಕೆಲಸ ನಿಜಕ್ಕೂ ಸಾಹಸವೇ ಸರಿ. ಈ ರಿಯಲ್‌ ಹಿರೋಗಳು ಗಾಳಿ ಮಳೆಯನ್ನೂ ಲೆಕ್ಕಿಸದೆ ಸಾರ್ವಜನಿಕರಿಗಾಗಿ ತಮ್ಮ ಪ್ರಾಣದ ಹಂಗನ್ನೂ ತೊರೆದು ಕಡಿದು ಹೋದ ವಿದ್ಯುತ್‌ ಸಂಪರ್ಕಗಳನ್ನು ಸರಿ ಪಡಿಸುವ ಕೆಲಸವನ್ನು ಮಾಡುತ್ತಾರೆ. ಈ ರಿಯಲ್‌ ಹೀರೋಗಳಿಗೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್‌ ಆಗಿದ್ದು, ಪ್ರಾಣದ ಹಂಗು ತೊರೆದು ಕರ್ತವ್ಯದಲ್ಲಿ ನಿರತರಾದ ಲೈನ್‌ಮ್ಯಾನ್‌ಗಳ ಸಾಹಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ವಿಶೇಷವಾಗಿ ಈ ಮಳೆಗಾಲದಲ್ಲಿ ಗಾಳಿ ಮಳೆಯಿಂದಾಗಿ ವಿದ್ಯತ್‌ ಕಂಬಗಳ ಮೇಲೆ ಮರ ಬಿದ್ದು ವಿದ್ಯುತ್‌ ವ್ಯತ್ಯಯವಾಗುತ್ತಿರುತ್ತವೆ. ಒಂದೆರಡು ಗಂಟೆಗಳ ವಿದ್ಯುತ್‌ ವ್ಯತ್ಯಯಕ್ಕೆ ಹೊಂದಿಕೊಳ್ಳಲಾಗದರೆ ಇನ್ಯಾವಾಗ ಕರೆಂಟ್‌ ಬರುತ್ತೋ ಎಂದ ಕೋಪದಿಂದ ವಿದ್ಯುತ್‌ ನಿಗಮದವರನ್ನು ನಾವು ಶಪಿಸುತ್ತೇವೆ. ಆದ್ರೆ ಲೈನ್‌ ಮ್ಯಾನ್‌ಗಳು ಮಾತ್ರ ನಮಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಎಂತಹ ಗಾಳಿ ಮಳೆಯಲ್ಲೂ ಕೂಡಾ ಒದ್ದೆಯಾಗುತ್ತಾ ವಿದ್ಯುತ್‌ ಕಂಬಗಳ ಮೇಲೇರಿ ತಂತಿಗಳ ಮರುಜೋಡಣೆ, ಇನ್ನಿತರ ರಿಪೇರಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಲೈನ್‌ ಮ್ಯಾನ್‌ಗಳ ಈ ಕೆಲಸ ನಿಜಕ್ಕೂ ಸಾಹಸವೇ ಸರಿ. ಇದೀಗ ರಿಯಲ್‌ ಹಿರೋಗಳಾದ ಲೈನ್‌ಮ್ಯಾನ್‌ಗಳ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಪ್ರಾಣದ ಹಂಗು ತೊರೆದು ಕರ್ತವ್ಯದಲ್ಲಿ ನಿರತರಾದ ಈ ಲೈನ್‌ಮ್ಯಾನ್‌ಗಳ ಸಾಹಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶ್ರೀಮಂತರನ್ನು ಬಲೆಗೆ ಬೀಳಿಸುವುದು ಹೇಗೆ? ಲವ್‌ ಟಿಪ್ಸ್‌ ಕೊಟ್ಟು ವರ್ಷಕ್ಕೆ 162 ಕೋಟಿ ರೂ. ಗಳಿಸುವ ಲವ್‌ ಗುರು

ನಮ್ಮ ಲೈನ್‌ಮ್ಯಾನ್‌ಗಳದ್ದು ಬಹಳ ದೊಡ್ಡ ಕೆಲಸ. ವಿಶೇಷವಾಗಿ ಇವರು ಮಳೆಗಾಲದಲ್ಲಿ ಗಾಳಿ ಮಳೆಯನ್ನು ಲೆಕ್ಕಿಸದೆ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಈ ಲೈನ್‌ಮ್ಯಾನ್‌ಗಳ ಕೆಲಸದ ನಿಷ್ಠೆಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್‌ ಆಗಿದ್ದು, ಗಾಳಿಯ ಕಾರಣದಿಂದ ಕರೆಂಟ್‌ ಕಂಬದ ಮೇಲೆ ಮರವೊಂದು ಬಿದ್ದಿದ್ದು, ಇದರಿಂದ ಸ್ಥಳೀಯ ಜನರಿಗೆ ಯಾವುದೇ ತೊಂದರೆ ಆಗಬಾರದೆಂದು, ಜಡಿ ಮಳೆಯನ್ನೂ ಲೆಕ್ಕಿಸದೆ ಲೈನ್‌ ಮ್ಯಾನ್‌ಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಿ ಕಡಿದು ಹೋಗಿದ್ದ ವಿದ್ಯುತ್‌ ತಂತಿಯನ್ನು ಸರಿ ಪಡಿಸುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಪ್ರಾಣದ ಹಂಗು ತೊರೆದು ಕರ್ತವ್ಯದಲ್ಲಿ ನಿರತರಾದ ಲೈನ್‌ಮ್ಯಾನ್‌ಗಳ ಈ ಸಾಹಸಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ