AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಿವಲಿಂಗಕ್ಕೆ ಸುತ್ತಿಕೊಂಡ ನಿಜವಾದ ನಾಗರಹಾವು; ಶ್ರೀಶೈಲ ದೇವಸ್ಥಾನದಲ್ಲೊಂದು ಪವಾಡ

ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ನಿಜವಾದ ನಾಗರಹಾವು ಸುತ್ತಿಕೊಂಡಿರುವ ಆಘಾತಕಾರಿ ವಿಡಿಯೋ ಹೊರಬಿದ್ದಿದೆ. ಶ್ರೀಶೈಲಂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಈ ಪವಾಡ ಸಂಭವಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ಶಿವಲಿಂಗಕ್ಕೆ ಸುತ್ತಿಕೊಂಡ ನಿಜವಾದ ನಾಗರಹಾವು; ಶ್ರೀಶೈಲ ದೇವಸ್ಥಾನದಲ್ಲೊಂದು ಪವಾಡ
ಶಿವಲಿಂಗಕ್ಕೆ ಸುತ್ತಿಕೊಂಡ ನಿಜವಾದ ನಾಗರಹಾವುImage Credit source: vidhaatha
ಸುಷ್ಮಾ ಚಕ್ರೆ
|

Updated on: Jul 16, 2024 | 4:41 PM

Share

ಶ್ರೀಶೈಲ: ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ದೇವಾಲಯವೊಂದರಲ್ಲಿ ಇಂದು (ಮಂಗಳವಾರ) ಬೃಹತ್ ನಾಗರಹಾವು ಕಾಣಿಸಿಕೊಂಡಿದೆ. ಈ ದೇವಾಲಯದಲ್ಲಿರುವ ಶಿವಲಿಂಗದ ಸುತ್ತಲೂ ಹಾವು ಸುತ್ತುವರೆದಿರುವುದು ಭಕ್ತರನ್ನು ಆಶ್ಚರ್ಯಗೊಳಿಸಿತು. ಇದು ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ಪಾತಾಳ ಗಂಗೆಯ ದೇವಸ್ಥಾನದ ವೀಡಿಯೊ ಎನ್ನಲಾಗಿದೆ. ಈ ಕ್ಲಿಪ್ ಅನ್ನು ದೇಗುಲದಲ್ಲಿ ಕೆಲವು ಭಕ್ತರು ಚಿತ್ರೀಕರಿಸಿದ್ದಾರೆ. ಅದೀಗ ವೈರಲ್ ಆಗಿದೆ.

ಪಾತಾಳ ಗಂಗೆಯಲ್ಲಿ ಚಂದ್ರಲಿಂಗದ ಸುತ್ತಲೂ ನಾಗರಹಾವು ಸುತ್ತುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರೀಶೈಲದ ಪಾತಾಳ ಗಂಗೆಯಲ್ಲಿ ಚಂದ್ರಲಿಂಗೇಶ್ವರ ಸ್ವಾಮಿಯ ಪುರಾತನ ದೇವಾಲಯವಿದೆ. ಅಲ್ಲಿ ಪ್ರತಿದಿನ ಭಕ್ತರು ಪೂಜೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೂ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು. ನಂತರ, ದೊಡ್ಡ ನಾಗರಹಾವು ಅಲ್ಲಿಗೆ ಬಂದು ಚಂದ್ರಲಿಂಗದ ಸುತ್ತಲೂ ಮಲಗಿರುವುದು ಕಂಡುಬಂದಿತು.

ಈ ಪವಾಡವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಶ್ರೀಶೈಲ ಭಕ್ತರು ಸೇರಿದ್ದರು. ದೇಗುಲದ ಆವರಣದಲ್ಲಿ ಹಾವುಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ, ಆದರೆ ಇದುವರೆಗೂ ಈ ರೀತಿಯ ಘಟನೆ ನಡೆದಿಲ್ಲ ಎನ್ನುತ್ತಾರೆ ಭಕ್ತರು.

ಇದನ್ನೂ ಓದಿ: Viral Video: ಹಸು ಎಂದುಕೊಂಡು ಎಮ್ಮೆಗೆ 10 ಕೆಜಿ ಚಿನ್ನದ ಸರ ಹಾಕಿದ ಮಾಲೀಕ; ಇಂಟರ್ನೆಟ್​ನಲ್ಲಿ ವಿಡಿಯೋ ವೈರಲ್

ದೇಗುಲದಲ್ಲಿ ನಾಗರಹಾವು ಶಿವಲಿಂಗವನ್ನು ಸುತ್ತಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ದೊಡ್ಡ ಹಾವು ಕೊಳದ ಮುಂದೆ ಎಲೆಗಳಿಂದ ಮುಚ್ಚಿದ ಶಿವಲಿಂಗವನ್ನು ಸುತ್ತುತ್ತಿರುವಂತೆ ಕಾಣುತ್ತದೆ.

ದೇಗುಲದಲ್ಲಿ ನಾಗರಹಾವು ಇರುವ ಸುದ್ದಿ ವೈರಲ್ ಆದ ನಂತರ, ಭಕ್ತರು ಮತ್ತು ಸುತ್ತಮುತ್ತಲಿನ ಜನರು ಹಾವನ್ನು ನೋಡಲು ದೇವಸ್ಥಾನಕ್ಕೆ ಭೇಟಿ ನೀಡಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ