Viral Video: ಮಳೆಗಾಲದ ವಿಶೇಷ ಕೆಂಪು ಇರುವೆ ಚಟ್ನಿ ಪಾಕ ವಿಧಾನ ಇಲ್ಲಿದೆ ನೋಡಿ; ವಿಡಿಯೋ ವೈರಲ್​​

|

Updated on: Jul 05, 2024 | 1:40 PM

ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕೆಂಪು ಇರುವೆ ಚಟ್ನಿಯನ್ನು ಮಾಡುವ ವಿಧಾನವನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ಸದ್ಯ ಈ ವಿಡಿಯೋ ಇಲ್ಲಿಯವರೆಗೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ಮಳೆಗಾಲದ ವಿಶೇಷ ಕೆಂಪು ಇರುವೆ ಚಟ್ನಿ ಪಾಕ ವಿಧಾನ ಇಲ್ಲಿದೆ ನೋಡಿ; ವಿಡಿಯೋ ವೈರಲ್​​
Red Ant Chutney
Follow us on

ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಜನರಿಂದಲೇ ಕೆಂಪು ಇರುವೆ ಚಟ್ನಿ ಹೆಚ್ಚು ಜನಪ್ರಿಯವಾಗುತ್ತಿದೆ. ಮಲೆನಾಡು ಮತ್ತು ಅಂಕೋಲೆಯ ಸಿದ್ದಿ ಸುಮುದಾಯದವರ ವಿಶಿಷ್ಟ ಆಹಾರ ಪದ್ಧತಿಯಾದ ಚಗಳಿ ಚಟ್ನಿ ಅಥವಾ ಕೆಂಪು ಇರುವೆಯ ಚಟ್ನಿ ಬಗ್ಗೆ ನೀವು ಕೇಳಿರಬಹುದು. ಇದೀಗ ಕೆಂಪು ಇರುವೆ ತಯಾರಿಸುವ ವಿಧಾನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಚಟ್ನಿಯನ್ನು ಮಾಡುವ ವಿಧಾನವನ್ನು ವಿಡಿಯೋದಲ್ಲಿ ವಿವರಿಸಲಾಗಿದೆ.

foodguyrishi ಎಂಬ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​​ ಆಗಿದೆ. ಜೂನ್​​ 23ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 25.8 ಮಿಲಿಯನ್​​​​​ ಅಂದರೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ಭಾರೀ ವೈರಲ್​​ ಆಗುತ್ತಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಸಿರಪ್‌ ಬಾಟಲಿ ನುಂಗಿ ಸಂಕಷ್ಟಕ್ಕೆ ಸಿಲುಕಿದ ನಾಗಪ್ಪ; ರಕ್ಷಣೆಗೆ ಧಾವಿಸಿದ ಸ್ನೇಕ್‌ ಹೆಲ್ಪ್‌ಲೈನ್‌

ವಿಡಿಯೋ ಎಲ್ಲೆಡೆ ವೈರಲ್​​​ ಆಗುತ್ತಿದ್ದಂತೆ ನೆಟ್ಟಿಗರು ಈ ವಿಡಿಯೋ ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, ‘ಇದು ಭಾರತ ನಾ ಇಲ್ಲ ಚೀನಾ ನಾ’ ಎಂದು ಕಮೆಂಟ್​ನಲ್ಲಿ ಬರೆದರೆ, ಮತ್ತೊಬ್ಬರು, ‘ಚಿಕನ್, ಮಟನ್, ತಿನ್ನುವವರನ್ನ ನೋಡಿದ್ದೀವಿ. ಇವರು ಯಾರು ಗುರು ಇರುವೆನೂ ಬಿಟ್ಟಿಲ್ಲ ಎಂದು ಬರೆದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ