AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಹದಲ್ಲಿ ಸಿಲುಕಿದ್ದ ನರ್ಸ್​ ಅನ್ನು ರಕ್ಷಿಸಿದ ಈ ವರದಿಗಾರ

Orlando : ಒರ್ಲ್ಯಾಂಡೋದಲ್ಲಿ ಪ್ರವಾಹಕ್ಕೆ ತುತ್ತಾಗಿದ್ದ ನರ್ಸ್​ ಒಬ್ಬರನ್ನು wesh2 ಸುದ್ದಿಸಂಸ್ಥೆಯ ವರದಿಗಾರರು ಅಕ್ಷರಶಃ ಬೆನ್ನ ಮೇಲೆ ಹೊತ್ತು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.

ಪ್ರವಾಹದಲ್ಲಿ ಸಿಲುಕಿದ್ದ ನರ್ಸ್​ ಅನ್ನು ರಕ್ಷಿಸಿದ ಈ ವರದಿಗಾರ
ಪ್ರವಾಹದಿಂದ ಮಹಿಳೆಯನ್ನು ರಕ್ಷಿಸುತ್ತಿರುವ ವರದಿಗಾರ
TV9 Web
| Edited By: ಶ್ರೀದೇವಿ ಕಳಸದ|

Updated on:Sep 30, 2022 | 12:40 PM

Share

Viral Video : ಅಮೆರಿಕದ ಒರ್ಲ್ಯಾಂಡೊದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಫ್ಲೋರಿಡಾದ ಕರಾವಳಿ ಭಾಗದಲ್ಲಿರುವ ವಿವಿಧ ರಾಜ್ಯಗಳ ಮೇಲೆ ಚಂಡಮಾರುತವು ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಈ ಪ್ರದೇಶಗಳಲ್ಲಿಯ ಜನರು ಬಿರುಗಾಳಿ ಮತ್ತು ಮಳೆಗೆ ಸಿಲುಕಿ ಅಪಾಯಕರ ಸನ್ನಿವೇಶಕ್ಕೀಡಾಗುತ್ತಿದ್ದಾರೆ. ಅನೇಕ ಜನರು ತಮ್ಮ ಕಾರುಗಳೊಂದಿಗೆ ಜಲಾವೃತವಾದ ರಸ್ತೆಗಳಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ನರ್ಸ್​ ಒಬ್ಬರು ತನ್ನ ಕಾರಿನೊಂದಿಗೆ ಪ್ರವಾಹದಲ್ಲಿ ಸಿಲುಕಿದ್ದಾರೆ. ಅದೃಷ್ಟವಶಾತ್ ಅದೇ ಮಾರ್ಗವಾಗಿ ಹೊರಡುತ್ತಿದ್ದ ವರದಿಗಾರರೊಬ್ಬರು ಈಕೆಗೆ ಸಹಾಯ ಮಾಡಿದ್ದಾರೆ.  

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by WESH 2 News (@wesh2)

Wesh2 News ತನ್ನ ವರದಿಗಾರ ಟೋನಿ ಅಟ್ಕಿನ್ಸ್ ನರ್ಸ್‌ಗೆ ಸಹಾಯ ಮಾಡುತ್ತಿರುವ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡು ಘಟನೆಯನ್ನು ವಿವರಿಸಿದೆ, ‘ನಮ್ಮ ವರದಿಗಾರರು ಬೆಳಗ್ಗೆ ಒರ್ಲ್ಯಾಂಡೋದ ಪ್ರವಾಹದಿಂದ ನರ್ಸ್​ ಒಬ್ಬರನ್ನು ರಕ್ಷಿಸಿದ್ದಾರೆ. ಆಕೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಇಂಥ ಅವಘಡಕ್ಕೆ ನೀವೂ ಸಿಲುಕಬೇಡಿ. ಹರಿವು ಹೆಚ್ಚಿದ್ದಲ್ಲಿ ಪ್ರಯಾಣಿಸಬೇಡಿ’.

ಈ ವಿಡಿಯೋದಲ್ಲಿ ನರ್ಸ್​ ಕಾರು ಭಾಗಶಃ ನೀರಿನಲ್ಲಿ ಮುಳುಗಿದೆ. ವರದಿಗಾರರು ಬೆನ್ನ ಮೇಲೆ ಆ ಮಹಿಳೆಯನ್ನು ಹೊತ್ತುಕೊಂಡು ಸುರಕ್ಷಿತ ಜಾಗಕ್ಕೆ ತಲುಪಿಸುತ್ತಾರೆ. ಈ ವರದಿಗಾರರನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. 

‘ನೀವು ಧೈರ್ಯಶಾಲಿ, ತುಂಬಾ ಕರುಣಾಮಯಿ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ’ ಎಂದು ಇನ್​ಸ್ಟಾಗ್ರಾಂ ಖಾತೆದಾರರು ಹೇಳಿದ್ದಾರೆ. ‘ಆಕೆಯ ಜೀವ ಉಳಿಸಿದ್ದಕ್ಕೆ ಧನ್ಯವಾದ ನೀವು ಸಹೃದಯಿ’ ಎಂದು ಮತ್ತೊಬ್ಬರು ಶಭಾಷ್​ ಎಂದಿದ್ದಾರೆ. 

ಸಂದರ್ಭ ಹೇಗೆ ಬರುತ್ತದೋ ಏನೋ, ಇಂಥ ಅವಘಡಗಳಿಂದ ಹೊರಬರುವುದನ್ನು ಮತ್ತು ಸಿಲುಕಿಕೊಂಡವರನ್ನು ಸುರಕ್ಷಿತ ಜಾಗಕ್ಕೆ ಕರೆತರುವ ಸಹಾಯವನ್ನು ಪ್ರತಿಯೊಬ್ಬರೂ ಮಾಡಲೇಬೇಕು. ಮನುಷ್ಯರಿಗೆ ಮನುಷ್ಯರೇ ಸಹಾಯ ಮಾಡುವುದಲ್ಲವೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:38 pm, Fri, 30 September 22

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ