ಯಾರಿದ್ದೀರಿ ಕೈ ಎತ್ತಿ? ಈ ಮಗುವಿಗೆ ಸೀಟಿ ಊದುವುದನ್ನು ಹೇಳಿಕೊಡೋಕೆ

Kid Blowing Whistle : ‘ಎಷ್ಟು ಸಲ ಸೀಟಿ ಊದಿದರೂ ಈ ಅಜ್ಜಿ ಮಾತ್ರ ನೋನೋ. ಹೆಂಗಪ್ಪಾ ಸೀಟಿ ಊದೋದು?’ ಪ್ರಯತ್ನಿಸಿ ವಿಫಲವಾಗುತ್ತಿದೆ ಈ ಮಗು. ನಿನ್ನ ಗಂಟಲುಸೀಟಿಯೇ ಸರೀ ಮಗಾ ಎಂದು ಅಚ್ಛೆ ಮಾಡುತ್ತಿದೆ ನೆಟ್​ಮಂದಿ.

ಯಾರಿದ್ದೀರಿ ಕೈ ಎತ್ತಿ? ಈ ಮಗುವಿಗೆ ಸೀಟಿ ಊದುವುದನ್ನು ಹೇಳಿಕೊಡೋಕೆ
ಮೊಮ್ಮಗನಿಗೆ ಸೀಟಿ ಊದಲು ಕಲಿಸುತ್ತಿರುವ ಅಜ್ಜಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 30, 2022 | 12:06 PM

Viral Video : ಪುಟ್ಟಮಕ್ಕಳಿರುವಾಗ ನೀವೆಲ್ಲಾ ಸೀಟಿ ಹೊಡೆಯಲು ಅದೆಷ್ಟು ಥರದಲ್ಲಿ ಪ್ರಯತ್ನಿಸುತ್ತಿದ್ದಿರಿ  ಅಲ್ಲವೆ? ಬೆರಳುಗಳನ್ನು ತುಟಿಗಳ ಮಧ್ಯೆ ಇಟ್ಟುಕೊಂಡೋ ಅಥವಾ ವಿವಿಧ ರೀತಿಯ ಎಲೆಗಳನ್ನು ಸುರುಳಿಸುತ್ತಿ ತುಟಿಗಳ ಮಧ್ಯೆ ಇಟ್ಟುಕೊಂಡೋ ಇತ್ಯಾದಿಯಾಗಿ. ಇನ್ನು ಅಪರೂಪಕ್ಕೆ ಜಾತ್ರೆಯಿಂದಲೋ, ಸಂತೆಯಿಂದಲೋ ಸೀಟಿ ಖರೀದಿಸಿದರಂತೂ ಮನೆಯಲ್ಲಿರುವವರ ಕಿವಿ ತೂತು ಬೀಳುವವರೆಗೂ, ನಿಮ್ಮ ಗಂಟಲು ನೋಯುವವರೆಗೂ ಊದೇ ಊದುತ್ತಿದ್ದಿರಿ. ಆದರೆ ಇಲ್ಲೊಂದು ಮಗುವಿಗೆ ಅದರ ಅಜ್ಜಿ ತುಟಿಯ ಮಧ್ಯೆ ಸೀಟಿ ಇಟ್ಟರೂ ಊದುವಲ್ಲಿ ವಿಫಲವಾಗುತ್ತಿದೆ. ಬದಲಾಗಿ ಗಂಟಲಿನಿಂದ ಸೀಟಿಯ ಧ್ವನಿಯನ್ನು ಅನುಕರಿಸುತ್ತಿದೆ. ಹೊಸ ಕಲಿಕೆ ಆರಂಭದಲ್ಲಿ ಹೀಗೇ ಅಲ್ಲವೆ? ಈ ಮುದ್ದಾದ ವಿಡಿಯೋ ನೆಟ್ಟಿಗರನ್ನು ಹಿಡಿದಿಟ್ಟಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಗುಡ್‌ನ್ಯೂಸ್ ಮೂವ್‌ಮೆಂಟ್ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ನೋಡಬಹುದಾಗಿದೆ. ಪ್ರತೀಬಾರಿಯೂ ಸೀಟಿ ಊದುತ್ತಿದ್ದೇನೆ. ಆದರೆ ಈ ಅಜ್ಜಿ ಇಲ್ಲ ಇಲ್ಲ ಎಂದು ನಗುತ್ತಿರುವುದು ಏಕೆ? ಎಂದು ಗೊಂದಲಕ್ಕೆ ಬೀಳುತ್ತಿದೆ ಮಗು. ಆದರೂ ಪ್ರಯತ್ನಿಸುವುದನ್ನು ಬಿಡುತ್ತಿಲ್ಲ. ಪ್ರತೀಬಾರಿಯೂ ಅಷ್ಟೇ ಮುಗ್ಧತೆಯಿಂದ ಸೀಟಿಯ ಶಬ್ದವನ್ನು ಗಂಟಲಿನಿಂದ ಹೊರಡಿಸುತ್ತಿದೆ. ಈ ವಿಡಿಯೋ ಅನ್ನು ಸುಮಾರು 10 ಲಕ್ಷ ಜನ ವೀಕ್ಷಿಸಿದ್ದಾರೆ. 45,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ನೆಟ್ಟಿಗರಿಗಂತೂ ಈ ಮಗುವಿನ ಮೇಲೆ ಮುದ್ದು ಉಕ್ಕಿ, ಶಭಾಷ್​ ಮಗು, ನೀ ಮಾಡುತ್ತಿರುವುದೇ ಸರಿ ಎಂದು ಅಚ್ಛೆ ಮಾಡಿದ್ದಾರೆ.

‘ನಾನಂತೂ ಉರುಳಾಡಿ ನಗುತ್ತಿದ್ದೇನೆ, ಮಕ್ಕಳ ಮುಗ್ಧತೆಗೆ ಅವರೇ ಸಾಟಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಈ ಮಗು ಮಾಡುತ್ತಿರುವುದೇ ಸರಿ. ಉಳಿದವರು ಸೀಟಿ ಊದುವ ಕ್ರಮವೇ ತಪ್ಪಿರಬಹುದು’ ಎಂದು ಮಗುವಿಗೆ ಬೆಂಬಲಿಸಿದ್ದಾರೆ ಇನ್ನೊಬ್ಬರು. ‘ಈ ಮಗು ಮಾಡುತ್ತಿರುವುದು ಪರ್ಫೆಕ್ಟ್​ ಎಂದೇ ಭಾವಿಸುತ್ತೇನೆ’ ಎಂದಿದ್ದಾರೆ ಮತ್ತೊಬ್ಬರು.

ನೆನಪಿಸಿಕೊಳ್ಳಿ ನಿಮ್ಮ ಬಾಲ್ಯವನ್ನು ಒಮ್ಮೆ. ಈ ಮಗುವಿನಂತೆ ನೀವಿದ್ದಲ್ಲೇ ಒಮ್ಮೆ ಸೀಟಿಯ ಧ್ವನಿ ಹೊಮ್ಮಿಸಿ ನೋಡಿ. ನೆನಪಿರಲಿ, ನಂತರದ ಪರಿಣಾಮಗಳಿಗೆ ನೀವೇ ಜವಾಬ್ದಾರರು!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:02 pm, Fri, 30 September 22

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?