
ಋಷಿಕೇಶದ ಲಕ್ಷ್ಮಣ್ ಝೂಲಾ ಬಳಿ ಇರುವ ಪವಿತ್ರ ಗಂಗಾ ನದಿಯಲ್ಲಿ ವಿದೇಶಿ ಮಹಿಳೆಯೊಬ್ಬರು ಬಿಕಿನಿ ಧರಿಸಿ ಸ್ನಾನ ಮಾಡಿದ್ದಾರೆ.ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಮಹಿಳೆ ಬಿಕಿನಿ ಮತ್ತು ಹೂವಿನ ಹಾರವನ್ನು ಧರಿಸಿ ನದಿಯಲ್ಲಿ ಈಜುವುದನ್ನು ಕಾಣಬಹುದು. ಮಹಿಳೆಯ ಈ ವರ್ತನೆಯಿಂದ ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಧಕ್ಕೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ.
ಗಂಗಾ ನದಿಯಲ್ಲಿ ಬಿಕಿನಿ ಹಾಕಿಕೊಂಡು ಸಾನ್ನ ಮಾಡಿರುವುದು ಹಿಂದೂ ಸಂಪ್ರದಾಯಗಳಿಗೆ ಧಕ್ಕೆ ತಂದಿದೆ. ಈ ರೀತಿಯ ವರ್ತನೆಗಳಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಹಾಗೂ ಪವಿತ್ರ ಸ್ಥಳಗಳಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಗಂಗಾ ನದಿ ಜಗತ್ತಿನ ಬೇರೆ ಬೇರೆ ಜನರನ್ನು ಸೆಳೆಯುತ್ತಿದೆ, ಅದರಲ್ಲೂ ಭಾರತೀಯರಿಗೆ ಇದು ಪವಿತ್ರ ನದಿಯಾಗಿದೆ ಎಂದು ಹೇಳಿದ್ದಾರೆ. ವಿದೇಶಿಗರು ತಮಗೆ ಒಪ್ಪಿಗೆ ಆಗುವ ಬಟ್ಟೆಗಳನ್ನು ಧರಿಸುವುದರಲ್ಲಿ ಯಾವ ಸಮಸ್ಯೆಗಳು ಇಲ್ಲ. ಆದರೆ ಧಾರ್ಮಿಕ ಕೇಂದ್ರಗಳಲ್ಲಿ ಕೆಲವೊಂದು ವಿಚಾರ–ಆಚಾರಗಳನ್ನು ಪಾಲಿಸಲೇಬೇಕು ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ಭಯೋತ್ಪಾದನೆಯಿಂದ ಬೇಸತ್ತು ಭಾರತಕ್ಕೆ ಬಂದ ಮಹಿಳೆಗೆ ಸಿಕ್ತು ಭಾರತೀಯ ಪೌರತ್ವ
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆಕೆ ಪರಿಶುದ್ಧವಾಗಿದ್ದು, ನದಿಯನ್ನು ಅಗೌರವಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವು ನೆಟ್ಟಿಗರು, ಆ ಮಹಿಳೆಗೆ ನಮ್ಮ ಸಂಸ್ಕೃತಿ ಹಾಗೂ ಇಲ್ಲಿ ಯಾವ ಬಟ್ಟೆ ಧರಿಸಬೇಕು ಎಂಬ ತಿಳಿವಳಿಕೆ ಇಲ್ಲದಿರಬಹುದು. ಉದ್ದೇಶಪೂರಕವಾಗಿ ಹೀಗೆ ಮಾಡಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಮಹಿಳೆಯ ಬಟ್ಟೆ ಭಾರತೀಯ ಸಂಪ್ರದಾಯ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಗಂಗಾ ಪವಿತ್ರವಾಗಿದ್ದು, ಅಲ್ಲಿಗೆ ಬರುವವರು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಟೀಕಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ