Rasgulla : ಈ ಫುಡ್ ವ್ಲಾಗರ್ಗಳ (Food Vloggers) ಹಾವಳಿಯಿಂದ ನಮ್ಮ ದೇಶದ ರುಚಿರುಚಿ ಖಾದ್ಯಗಳೆಲ್ಲ ಹಳ್ಳ ಹಿಡಿಯುತ್ತಿವೆ. ಚಿತ್ರವಿಚಿತ್ರ ಕಾಂಬಿನೇಷನ್ನಲ್ಲಿ ರುಚಿಕರ ಮತ್ತು ಸಾಂಪ್ರದಾಯಿಕ ಖಾದ್ಯಗಳ ಕೊಲೆಯಾಗುತ್ತಿದೆ. ರಸ್ತೆಬದಿ ವ್ಯಾಪಾರಸ್ಥರು ಹೋಟೆಲ್ ಮಾಲೀಕರು ಪ್ರಚಾರದ ಹುಚ್ಚಿಗೆ ಅನಾರೋಗ್ಯಕರ ಆಹಾರ ಸಂಸ್ಕೃತಿ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ. ಹೀಗೆಂದು ನೆಟ್ಟಿಗರು ಕೋಪೋದ್ರಿಕ್ತರಾಗಿ ಪ್ರತಿಕ್ರಿಯಿಸುತ್ತಿರುವುದು ಹೊಸದೇನಲ್ಲ. ಆದರೂ ಇಂಥ ವಿಚಿತ್ರ ಪಾಕ ಪ್ರಯೋಗಗಳು ಮಾತ್ರ ನಿಲ್ಲುತ್ತಲೇ ಇಲ್ಲ. ಮೊಸರಿನೊಂದಿಗೆ ಜಾಮೂನು ತಿನ್ನಿ ಇದು ಪ್ರಸಿದ್ಧ ಖಾದ್ಯ ಎಂಬ ವಿಡಿಯೋ ನೋಡಿದಿರಲ್ಲವೇ? ಈಗ ರಸಗುಲ್ಲಾ ರೋಲ್ ನೋಡಿ.
ಕೊಲ್ಕೊತ್ತಾ ಎಂದ ತಕ್ಷಣ ಬೆಲ್ಲದ ಪಾಕದಲ್ಲಿ ತೇಲಾಡುವ ರೊಶೊಗೊಲ್ಲಾ ನೆನಪಾಗುತ್ತದೆ ಅಲ್ಲವೆ? ಉತ್ತರದ ರೊಶೊಗುಲ್ಲಾ ದಕ್ಷಿಣದ ರಸಗುಲ್ಲಾ. ದಕ್ಷಿಣದಲ್ಲಿ ಸಕ್ಕರೆ ಪಾಕದಲ್ಲಿ ರಸಗುಲ್ಲಾ ತೇಲಿದರೆ ಉತ್ತರದಲ್ಲಿ ಬೆಲ್ಲದ ಪಾಕದಲ್ಲಿ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಇದು ರೊಶೊಗೊಲ್ಲಾ ರೋಲ್ ಅಂತೆ. ಕೊಲ್ಕತ್ತೆಯ ಬೀದಿ ಬದಿ ಅಂಗಡಿಯಲ್ಲಿ ಇದು ತಯಾರಾಗುತ್ತಿದೆ.
ಇದನ್ನೂ ಓದಿ : Viral Video: ಬ್ಯಾಲೆನ್ಸಡ್ ಡಯೆಟ್ ಎಂದರೆ ಇದೇ ನೋಡಿ! ಇನ್ನು ನಿಶ್ಚಿಂತೆಯಿಂದಿದ್ದುಬಿಡಿ
ಇದರ ರೆಸಿಪಿಯನ್ನು ತಿಳಿದ ಕೂಡಲೆ ನೆಟ್ಟಿಗರು ಇದನ್ನು ವಿರೋಧಿಸಿ ಪ್ರತಿಕ್ರಿಯಿಸಲು ಶುರು ಮಾಡಿದ್ದಾರೆ. ಈ ಫುಡ್ ವ್ಲಾಗ್ ಅನ್ನು ಅನ್ಫಾಲೋ ಮಾಡುವ ಮತ್ತು ಈ ಭೂಮಿಯಿಂದಲೇ ಮಾಯವಾಗುವ ಸಮಯ ಬಂದಿದೆ. ಈ ಖಾದ್ಯವನ್ನು ಸವಿಯುವುದಕ್ಕಿಂತ ಬಿಗಿಯಾಗಿ ಹಿಡಿದುಕೊಳ್ಳುವುದರ ಕಡೆಗೇ ಗಮನ ಕೊಡಬೇಕಿದೆ ಎಂದು ಜನ ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನು ಓದಿ : Viral: ತನ್ನ ಮೊಬೈಲ್ ಹುಡುಕಲು 21 ಲಕ್ಷ ಲೀಟರ್ ನೀರುಪೋಲು ಮಾಡಿದ ಛತ್ತೀಸ್ಗಢ ಅಧಿಕಾರಿ ಅಮಾನತು
ಆದರೆ ಈ ವಿಡಿಯೋ ಮಾಡಿದವರು, ನಾನು ಈ ರೋಲ್ ವಿಡಿಯೋ ಮಾಡುವ ಮೊದಲು ಸವಿದು ನೋಡಿದ್ದೇನೆ. ಪನೀರ್ ರೋಲ್ನಂಥ ರುಚಿಯನ್ನೇ ಇದು ಹೊಂದಿದೆ, ಏಕೆಂದರೆ ಸಿಹಿರಹಿತ ಅಂದರೆ ಚಾನಾರ್ ಕೋಫ್ತಾ ಅನ್ನು ರೋಲ್ನಲ್ಲಿ ಸುತ್ತಿಕೊಡಲಾಗುತ್ತದೆ. ಕೋಫ್ತಾಗಳು ರಸಗುಲ್ಲಾದಂತೆ ಕಾಣುವುದರಿಂದ ಇದಕ್ಕೆ ರಸಗುಲ್ಲಾ ರೋಲ್ ಎಂದು ಹೆಸರಿಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೊಲ್ಕತ್ತೆಗೆ ನೀವು ಹೋದರೆ ಈ ಖಾದ್ಯವನ್ನು ಸವಿಯಲು ಇಷ್ಟಪಡುವಿರಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:29 pm, Mon, 29 May 23