Viral Photo: ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಪತ್ತೆ

|

Updated on: Jan 09, 2024 | 10:43 AM

ವಿಜ್ಞಾನಿಗಳು ಮೆಕ್ಸಿಕೋದಲ್ಲಿ ಮೊಸಳೆಯಷ್ಟು ಗಾತ್ರವುಳ್ಳ ವಿಶಿಷ್ಟವಾದ ಹಲ್ಲಿಯನ್ನು ಪತ್ತೆಹಚ್ಚಿದ್ದಾರೆ. ಶೋಧದ ವೇಳೆ ಈ ಜೀವಿಯನ್ನು ಕಂಡು ವಿಜ್ಞಾನಿಗಳೂ ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಶಿಷ್ಟ ಜಾತಿಯ ಹಲ್ಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

Viral Photo: ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಪತ್ತೆ
Alligator-like lizard
Image Credit source: Pixabay
Follow us on

ಮೆಕ್ಸಿಕೋದಲ್ಲಿ ಕಂಡುಬಂದ ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದೆ. ವಾಸ್ತವವಾಗಿ, ವಿಜ್ಞಾನಿಗಳು ದಕ್ಷಿಣ ಮೆಕ್ಸಿಕೋದ ಮರದ ಮೇಲ್ಭಾಗದಲ್ಲಿ ಮೊಸಳೆಯಂತಹ ಗಾತ್ರದವುಳ್ಳ ಜೀವಿಯನ್ನು ಪತ್ತೆ ಹಚ್ಚಿದ್ದಾರೆ. ಈ ಹೊಸ ಜಾತಿಗೆ ಅಬ್ರೋನಿಯಾ ಕ್ಯುನೆಮಿಕಾ ಅಥವಾ ಕೊಪಿಲಾ ಅರ್ಬೊರಿಯಲ್ ಅಲಿಗೇಟರ್ ಲಿಸರ್ಡ್​​ ಎಂದು ಹೆಸರಿಸಲಾಗಿದೆ. ವಿಜ್ಞಾನಿಗಳ ಪ್ರಕಾರ, ಈ ಹಲ್ಲಿ ಸುಮಾರು 9.8 ಇಂಚುಗಳಷ್ಟು ಉದ್ದವಿದ್ದು, ಅದರ ದೇಹವು ಹಳದಿ-ಕಂದು ಬಣ್ಣದ ಚಿಪ್ಪುಗಳಿವೆ. ಜೊತೆಗೆ ಗಾಢ ಕಂದು ಬಣ್ಣದ ಚುಕ್ಕೆಗಳನ್ನು ಕಾಣಬಹುದು. ಈ ಜೀವಿಯ ಕಣ್ಣು ತಿಳಿ ಹಳದಿ ಮತ್ತು ಕಪ್ಪು ಕಲೆಗಳನ್ನು ಹೊಂದಿರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

PLOS One ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 2014 ರಲ್ಲಿ ಈ ಹಲ್ಲಿಯ ‘ಚಿತ್ರಗಳು’ ಬೆಳಕಿಗೆ ಬಂದ ನಂತರ, ಸಂಶೋಧಕರು 2015 ಮತ್ತು 2022 ರ ನಡುವೆ ಹುಡುಕಾಟ ನಡೆಸಿ ಹಲ್ಲಿಯಂತಹ ‘ಅಸ್ಪಷ್ಟ’ ಜೀವಿಗಳನ್ನು ಕಂಡುಹುಡುಕಿದ್ದಾರೆ. ಮಿಯಾಮಿ ಹೆರಾಲ್ಡ್ ವರದಿಯ ಪ್ರಕಾರ, ಈ ಹಲ್ಲಿಯನ್ನು ಹುಡುಕಲು ಸಂಶೋಧಕರು ಸುಮಾರು 20 ಮರಗಳನ್ನು ಏರಿ 350 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಬರ್ಡ್ ಮ್ಯಾನ್ ಸುಮೇಧ್ ವಾಘಮಾರೆ ಜತೆ ವಿಶೇಷ ವಿಡಿಯೋ ಹಂಚಿಕೊಂಡ ಸಚಿನ್

ಈ ವಿಶಿಷ್ಟ ಹಲ್ಲಿ ಎಲ್ಲಿ ಕಂಡುಬಂದಿದೆ?

ವರದಿಗಳ ಪ್ರಕಾರ, ಸಂಶೋಧಕರು ಈ ಮೊಸಳೆಯಂತಹ ಹಲ್ಲಿಯನ್ನು ಮೆಕ್ಸಿಕೋ ನಗರದ ಆಗ್ನೇಯಕ್ಕೆ 700 ಕಿಲೋಮೀಟರ್ ದೂರದಲ್ಲಿರುವ ಚಿಯಾಪಾಸ್‌ನಲ್ಲಿರುವ ಕೋಪಿಲಾ ನಗರದಲ್ಲಿ ಪತ್ತೆ ಹಚ್ಚಿದ್ದಾರೆ.ಆದಾಗ್ಯೂ, ಅದರ ಸುರಕ್ಷತೆಗಾಗಿ ಈ ಹೊಸ ಜಾತಿಯ ಬಗ್ಗೆ ನಿಖರವಾದ ಸ್ಥಳವನ್ನು ಬಹಿರಂಗಪಡಿಸಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ