Viral Video: ಬರ್ಡ್ ಮ್ಯಾನ್ ಸುಮೇಧ್ ವಾಘಮಾರೆ ಜತೆ ವಿಶೇಷ ವಿಡಿಯೋ ಹಂಚಿಕೊಂಡ ಸಚಿನ್
ರಾಷ್ಟ್ರೀಯ ಪಕ್ಷಿ ದಿನದಂದು ಕ್ರಿಕೇಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ಬರ್ಡ್ ಮ್ಯಾನ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಸುಮೇಧ್ ವಾಘಮಾರೆ ಅವರ ಪ್ರಾಣಿಗಳು ಮತ್ತು ಪಕ್ಷಿಗಳ ಧ್ವನಿಯನ್ನು ಅನುಕರಿಸುವ ಕಲೆಯ ಸುಂದರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಜನವರಿ 05 ರಂದು ರಾಷ್ಟ್ರೀಯ ಪಕ್ಷಿ ದಿನದ ವಿಶೇಷ ಸಂದರ್ಭದಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ X ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿ ತೆಂಡೂಲ್ಕರ್ ಬರ್ಡ್ ಮ್ಯಾನ್ ಎಂದೇ ಖ್ಯಾತಿಯನ್ನು ಗಳಿಸಿರುವ ಸುಮೇಧ್ ವಾಘಮಾರೆ ಅವರನ್ನು ಭೇಟಿಯಾಗಿದ್ದಾರೆ. ಆ ಸಂದರ್ಭದಲ್ಲಿ ತೆಂಡೂಲ್ಕರ್ಗಾಗಿ ಸುಮೇಧ್ ಕೆಲವೊಂದು ಪ್ರಾಣಿ ಮತ್ತು ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡಿದ್ದಾರೆ. ಈ ವಿಶೇಷ ವಿಡಿಯೋವನ್ನು ಪಕ್ಷಿಗಳ ದಿನದಂದು ಸಚಿನ್ ತೆಂಡೂಲ್ಕರ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಸುಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸುಮೇಧ್ ವಾಘಮಾರೆ ನಡುವಿನ ಸ್ವಾರಸ್ಯಕರ ಸಂಭಾಷಣೆಯ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಬರ್ಡ್ ಮ್ಯಾನ್ ಸುಮೇಧ್ ವಾಘಮಾರೆ ಅವರನ್ನು ಭೇಟಿಯಾಗಿದ್ದಾರೆ. ತಕ್ಷಣ ಜೀಪ್ ನಿಲ್ಲಿಸಿ, ಸುಮೇಧ್ ಅವರೊಂದಿಗೆ ಮಾತನಾಡಿ, ದಯವಿಟ್ಟು ನನಗೋಸ್ಕರ ನವಿಲಿನ ಧ್ವನಿಯನ್ನು ಅನುಕರಿಸುವಿರಾ ಎಂದು ತೆಂಡೂಲ್ಕರ್ ಕೇಳಿಕೊಳ್ಳುತ್ತಾರೆ. ಓಹ್ ಧಾರಾಳವಾಗಿ ಮಾಡೋಣ ಅಂತ ಖುಷಿಯಿಂದ ಸುಮೇಧ್ ನವಿಲಿನ ಧ್ವನಿಯನ್ನು ಬಹಳ ಅದ್ಭುತವಾಗಿ ಅನುಕರಿಸುತ್ತಾರೆ. ನಂತರ ನಾಯಿ. ಹುಲಿ ಚಿರತೆ, ಕೋಗಿಲೆಯ ಧ್ವನಿಯನ್ನು ಕೂಡಾ ಬಹಳ ಅದ್ಭುತವಾಗಿ ಅನುಕರಿಸಿ ತೋರಿಸುವ ಸುಂದರವಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಈ ಜೀವಿ ಜಗತ್ತಿನಲ್ಲಿ ಅತ್ಯಂತ ಅಪರೂಪ, ಇದು ಮೀನು ಅಲ್ಲ, ಹಾವು ಅಲ್ಲ ಮತ್ತೇನೂ?
ಮೂಲತಃ ಮಹಾರಾಷ್ಟ್ರದ ಹಿಂಗೋಲಿಯವರಾದ ಬರ್ಡ್ ಮ್ಯಾನ್ ಸುಮೇಧ್, ತಮ್ಮ ಸಣ್ಣ ವಯಸ್ಸಿನಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗುವಾಗ ವಿವಿಧ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ಈ ಮಿಮಿಕ್ರಿ ಕಲೆಯನ್ನು ಕರಗತ ಮಾಡಿಕೊಂಡಿರು. ಪ್ರಸ್ತುತ ಸುಮೇಧ್ ಮಹರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ಸುಮಾರು 200 ಕ್ಕೂ ಹೆಚ್ಚು ಪ್ರಾಣಿ ಮತ್ತು ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮುಂದೆ ತಮ್ಮ ಈ ವಿಶೇಷ ಕಲೆಯನ್ನು ಪ್ರದರ್ಶಿಸುವ ಮೂಲಕ ಪ್ರಾಣಿ ಮತ್ತು ಪಕ್ಷಿ ಸಂರಕ್ಷಣೆಯ ಬಗ್ಗೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ರಾಷ್ಟ್ರೀಯ ಪಕ್ಷಿ ದಿನದ ವಿಶೇಷ ಸಂದರ್ಭದಲ್ಲಿ ಬರ್ಡ್ ಮ್ಯಾನ್ ಸುಮೇಧ್ ಅವರ ವಿಶೇಷ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ