AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಲಿಫ್ಟ್​​​​ನಲ್ಲಿ ಸಿಲುಕಿಕೊಂಡ ನಾಯಿ ಮರಿಯನ್ನು ರಕ್ಷಿಸಿದ ಬಾಲಕ; ಇತನ ಸಮಯ ಪ್ರಜ್ಞೆ ನೋಡಿ

ಜನರು ತಮ್ಮ ಮುದ್ದಿನ ಸಾಕು ಪ್ರಾಣಿಗಳನ್ನು ಅದೆಷ್ಟು ಪ್ರೀತಿಸುತ್ತಾರೆ   ಅಂದ್ರೆ, ತಮ್ಮ ಪ್ರೀತಿಯ ಸಾಕು ಪ್ರಾಣಿಗಳು ಅಪಾಯದಲ್ಲಿವೆ ಎಂದು ತಿಳಿದಾಗ ತಮ್ಮ ಪ್ರಾಣದ ಹಂಗು ತೊರೆದು, ಮುದ್ದಿನ ಸಾಕು ಪ್ರಾಣಿಗಳನ್ನು ರಕ್ಷಿಸಲು ಮುಂದಾಗುತ್ತಾರೆ. ಇಂತಹ ಅದೆಷ್ಟೋ ಘಟನೆಗಳ ಬಗ್ಗೆ ನೀವು ಕೇಳಿರಬಹುದು. ಈಗ ಅದೇ ರೀತಿಯ ಘಟನೆಯೊಂದು ನಡೆದಿದ್ದು,  ಲಿಫ್ಟ್​​​​ನಲ್ಲಿ  ಸಿಲುಕಿಕೊಂಡು ನೇತಾಡುತ್ತಾ ಒದ್ದಾಡುತ್ತಿದ್ದ, ಮುದ್ದಿನ ನಾಯಿ ಮರಿಯ ಪ್ರಾಣವನ್ನು  ಬಾಲಕನೊಬ್ಬ ತನ್ನ ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದಾನೆ. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. 

Viral Video: ಲಿಫ್ಟ್​​​​ನಲ್ಲಿ ಸಿಲುಕಿಕೊಂಡ ನಾಯಿ ಮರಿಯನ್ನು ರಕ್ಷಿಸಿದ ಬಾಲಕ; ಇತನ ಸಮಯ ಪ್ರಜ್ಞೆ ನೋಡಿ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Jan 08, 2024 | 4:46 PM

Share

ಮನುಷ್ಯ ಮತ್ತು ಶ್ವಾನದ ನಡುವಿನ ಸಂಬಂಧ ಬಹಳ ವಿಶೇಷವಾದದು. ಇದೇ ಕಾರಣಕ್ಕೆ ಹೆಚ್ಚಿನವರು ನಾಯಿಗಳನ್ನು ಸಾಕಲು ಇಷ್ಟಪಡುತ್ತಾರೆ. ಹೀಗೆ ನಾಯಿಯನ್ನು ಮನೆಗೆ ತಂದು ಕೇವಲ ಪ್ರೀತಿಯಿಂದ ಊಟ ಹಾಕಿದರೆ ಸಾಲದು,  ಅವುಗಳ ಬಗ್ಗೆ ಎಲ್ಲಾ ವಿಚಾರದಲ್ಲೂ ಎಚ್ಚರಿಗೆ ವಹಿಸಬೇಕು. ಅದರಲ್ಲೂ ಮುಖ್ಯವಾಗಿ ನಾಯಿಗಳನ್ನು ಹೊರಗಡೆ ವಿಹಾರಕ್ಕೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಏಕೆಂದರೆ  ಅವುಗಳು ಖುಷಿಯಿಂದ ನಮ್ಮ ಕೈ ತಪ್ಪಿಸಿಕೊಂಡು ಎಲ್ಲೆಲ್ಲೂ ಓಡಾಡಲು ಆರಂಭಿಸುತ್ತದೆ, ಈ ಸಂದರ್ಭದಲ್ಲಿ ಕೆಲವೊಮ್ಮೆ ನಮ್ಮ ಕಣ್ತಪ್ಪಿ ಕೆಲವೊಂದು ಅಪಘಾತಗಳು ಸಂಭವಿಸುತ್ತದೆ, ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ನಾಯಿ ಮರಿಯ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಲಿಫ್ಟಿನ ಬಾಗಿಲಿಗೆ ಸಿಕ್ಕಿಹಾಕಿಕೊಂಡ ಪರಿಣಾಮ   ಲಿಫ್ಟ್ ಮೇಲೆ ಚಲಿಸಲು ಆರಂಭಿಸಿದಾಗ, ನಾಯಿಯ ಕುತ್ತಿಗೆ ಬಿಗಿಯಲು ಆರಂಭಿಸಿದೆ, ಮುದ್ದಿನ ನಾಯಿ ಮರಿ ಒದ್ದಾಡುತ್ತಿರುವುದನ್ನು ಗಮನಿಸಿದ ಬಾಲಕ ತಕ್ಷಣ ಸಮಯ ಪ್ರಜ್ಞೆ ಮೆರೆದು ತನ್ನ ಮುದ್ದಿನ ನಾಯಿ ಮರಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾನೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಹುಡುಗನ ಧೈರ್ಯ ಮತ್ತು ಸಮಯ ಪ್ರಜ್ಞೆಗೆ ಮೆಚ್ಚುಗೆ ನೀಡಲೇಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

@memes_life_76 ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸುಮಾರು 11 ವರ್ಷ ವಯಸ್ಸಿನ ಬಾಲಕನೊಬ್ಬ, ಸಮಯ ಪ್ರಜ್ಞೆ ಮೆರೆದು ಲಿಫ್ಟ್​​​​ನಲ್ಲಿ  ಸಿಕ್ಕಿ ಹಾಕಿಕೊಂಡಿದ್ದ ನಾಯಿ ಮರಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಹುಡುಗನೊಬ್ಬ ಲಿಫ್ಟ್ ಒಳಗೆ ಬರುತ್ತಾನೆ, ಜೊತೆಗೆ ಆತನ ಮನೆಯ ಸಾಕು ನಾಯಿಯು ಕೂಡಾ ಆತನ ಹಿಂದೆಯೇ ಲಿಫ್ಟ್ ಒಳಗೆ ಬಂದು ನಿಲ್ಲುತ್ತೆ, ಆದ್ರೆ ಆ ಶ್ವಾನದ ಕುತ್ತಿಗೆಗೆ ಕಟ್ಟಿದ ಹಗ್ಗ ಲಿಫ್ಟ್ ಹೊರಗೆಯೇ ಇರುವುದನ್ನು ಆ ಹುಡುಗ ಗಮನಿಸದೆ ಬಟನ್ ಪ್ರೆಸ್ ಮಾಡುತ್ತಾನೆ. ತಕ್ಷಣ ಡೋರ್ ಕ್ಲೋಸ್ ಆಗಿ ಲಿಫ್ಟ್ ಮೇಲೆ ಚಲಿಸಲು ಪ್ರಾರಂಭಿಸುತ್ತದೆ. ಲಿಫ್ಟಿನ ಬಾಗಿನಲ್ಲಿ ನಾಯಿಯ ಕುತ್ತಿಗೆಗೆ ಕಟ್ಟಿದ ಹಗ್ಗ ಸಿಕ್ಕಿ ಹಾಕಿಕೊಂಡ ಪರಿಣಾಮ, ನಾಯಿ ಲಿಫ್ಟ್​​​​ನಲ್ಲಿ  ಸಿಲುಕಿಕೊಂಡು ನೇತಾಡುತ್ತಾ ಒದ್ದಾಡಲು ಪ್ರಾರಂಭಿಸುತ್ತೆ, ಇದನ್ನು ಗಮನಿಸಿದ ಬಾಲಕ ಸೂಪರ್ ಹೀರೊ ರೀತಿಯಲ್ಲಿ, ಹಗ್ಗವನ್ನು ಹಿಡಿದು  ಜೋರಾಗಿ ಎಳೆಯುವ ಮೂಲಕ ತನ್ನ ಸಮಯ ಪ್ರಜ್ಞೆಯಿಂದ ನಾಯಿಯನ್ನು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರು ಮಾಡುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ಕನ್ಫ್ಯೂಸ್ ಆಗಬೇಡಿ, ಇದು ವಾಷಿಂಗ್ ಮೆಷಿನ್ ಅಲ್ಲ, ಕೋಳಿ ಗೂಡು ಕಣ್ರೀ

ಡಿಸೆಂಬರ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 17.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  2 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿವೆ. ಹಾಗೂ ಹಲವರು ಕಮೆಂಟ್ಸ್ಗಳನ್ನು ಮಾಡುವ ಮೂಲಕ  ನಾಯಿ ಮರಿಯ ಪ್ರಾಣವನ್ನು ರಕ್ಷಣೆ ಮಾಡಿದ ಬಾಲಕನಿಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:43 pm, Mon, 8 January 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ