AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guinness World Record: 140 ಭಾಷೆಗಳಲ್ಲಿ ಹಾಡಿ ಗಿನ್ನಿಸ್‌ ವಿಶ್ವ ದಾಖಲೆ ಬರೆದ ಕೇರಳದ ಯುವತಿ

ಕೇರಳ ಮೂಲದ ಗಾಯಕಿ ಸುಚೇತಾ ಸತೀಶ್‌(18) ದುಬೈನಲ್ಲಿ ನಡೆದ ʻಕನ್ಸರ್ಟ್‌ ಫಾರ್‌ ಕ್ಲೈಮೇಟ್‌ʼ ಕಾರ್ಯಕ್ರಮದಲ್ಲಿ 9 ಗಂಟೆಗಳಲ್ಲಿ ಬರೋಬ್ಬರಿ 140 ಭಾಷೆಗಳಲ್ಲಿ ಹಾಡು ಹಾಡಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ತನ್ನ ಸಾಧನೆಯ ಕುರಿತು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Guinness World Record: 140 ಭಾಷೆಗಳಲ್ಲಿ ಹಾಡಿ ಗಿನ್ನಿಸ್‌ ವಿಶ್ವ ದಾಖಲೆ ಬರೆದ ಕೇರಳದ ಯುವತಿ
ಗಾಯಕಿ ಸುಚೇತಾ ಸತೀಶ್‌(18)
ಅಕ್ಷತಾ ವರ್ಕಾಡಿ
|

Updated on:Jan 07, 2024 | 5:59 PM

Share

ಕೇರಳ ಮೂಲದ ಗಾಯಕಿ ಸುಚೇತಾ ಸತೀಶ್‌(18) ದುಬೈನಲ್ಲಿ ನಡೆದ ʻಕನ್ಸರ್ಟ್‌ ಫಾರ್‌ ಕ್ಲೈಮೇಟ್‌ʼ ಕಾರ್ಯಕ್ರಮದಲ್ಲಿ 9 ಗಂಟೆಗಳಲ್ಲಿ ಬರೋಬ್ಬರಿ 140 ಭಾಷೆಗಳಲ್ಲಿ ಹಾಡು ಹಾಡಿ ವಿಶ್ವ ದಾಖಲೆ(Guinness World Record) ಯನ್ನು ಬರೆದಿದ್ದಾರೆ. ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದ ಇದಾಗಿದ್ದು, ಈಕೆ 140 ಭಾಷೆಗಳಲ್ಲಿ ಹಾಡಿ ಪ್ರದರ್ಶನ ನೀಡುವ ಪ್ರೇಕ್ಷಕರ ಮನಗೆದ್ದಿದ್ದಾರೆ. ನವೆಂಬರ್‌ 30 ರಿಂದ ಡಿಸೆಂಬರ್‌ 12 ರವರೆಗೆ ದುಬೈನಲ್ಲಿ ʻಕನ್ಸರ್ಟ್‌ ಫಾರ್‌ ಕ್ಲೈಮೇಟ್‌ʼ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಹಿಂದೆ 2021ರಲ್ಲಿ ಸುಚೇತಾ 120 ಭಾಷೆಗಳಲ್ಲಿ ಹಾಡಿ ಗಿನ್ನಿಸ್‌ ದಾಖಲೆ ಮಾಡಿದ್ದರು. ನಂತರ 121 ಭಾಷೆಗಳಲ್ಲಿ ಹಾಡಿದ್ದ ಪುಣೆ ಮೂಲದ ಗಾಯಕಿ ಮಂಜುಶ್ರೀ ಓಕ್‌ ಅವರ ರೆಕಾರ್ಡ್‌ನ್ನು ಬ್ರೇಕ್‌ ಮಾಡಿ ಮತ್ತೊಮ್ಮೆ ಹೊಸ ದಾಖಲೆ ಬರೆದಿದ್ದಾರೆ.

ವಿಶ್ವ ದಾಖಲೆಯ ಬಗ್ಗೆ ಸುಚೇತಾ ಅವರು ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ತನ್ನ ಸಾಧನೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿ, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕ್ಯಾಪ್ಷನ್​​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 3 ಲಕ್ಷಕ್ಕೂ ಹೆಚ್ಚು ನಗದು ಹೊಂದಿದ್ದ ನೋಟಿನ ಕಂತನ್ನು ಹರಿದು ತಿಂದ ಸಾಕು ನಾಯಿ

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಟದ ಪ್ರಕಾರ , ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ ಸಭಾಂಗಣದಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು 140 ಭಾಷೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಸುಚೇತಾ ಸತೀಶ್​​​​, ಈ ಹಿಂದೆ ದಾಖಲೆ ಬರೆದಿದ್ದ ಪುಣೆ ಮೂಲದ ಗಾಯಕಿ ಮಂಜುಶ್ರೀ ಅವರ ದಾಖಲೆಯನ್ನು ಮುರಿದಿದ್ದಾರೆ. ದುಬೈನಲ್ಲಿ ನಡೆದ COP 28 ಶೃಂಗಸಭೆಯಲ್ಲಿ ಭಾಗವಹಿಸಿದ 140 ರಾಷ್ಟ್ರಗಳನ್ನು ಪ್ರತಿನಿಧಿಸಲು 140 ಸಂಖ್ಯೆಯನ್ನು ಆಯ್ಕೆ ಮಾಡಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:56 pm, Sun, 7 January 24

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ