AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ನಾಯಿಗಳಷ್ಟೇ ಅಲ್ಲ; ಇದೀಗ ನಡು ರಸ್ತೆಗಳಲ್ಲಿ ಬಿಡಾಡಿ ಪಶುಗಳು ಸಹ ರೊಚ್ಚಿಗೆದ್ದು ಕಂಟಕವಾಗುತ್ತಿವೆ, ವಿಡಿಯೋ ನೋಡಿ

Viral Video Of Buffalo: ರಸ್ತೆ ಮಧ್ಯದಲ್ಲಿ ನಿಂತಿದ್ದ ಪ್ರಾಣಿ ಏಕಾಏಕಿ ಓಡಿ ಬಂದು ಎದುರು ದಿಕ್ಕಿನಿಂದ ಬರುತ್ತಿದ್ದ ದ್ವಿಚಕ್ರವಾಹನದ ಮೇಲೆ ದಾಳಿ ಮಾಡಿದೆ. ಆ ವ್ಯಕ್ತಿಯನ್ನು ಬೈಕ್‌ನಿಂದ ಎತ್ತಿ ಬಿಸಾಕಿದೆ. ನಂತರವೂ ಆತನ ಮೇಲೆ ಹಲ್ಲೆ ನಡೆಸಿದೆ. ಆ ವೇಳೆ ಅಲ್ಲಿದ್ದ ಕೆಲವರು ಅವರ ಸಹಾಯಕ್ಕೆ ಬಂದಿದ್ದಾರೆ. ಆ ಪ್ರಾಣಿ ಅವರನ್ನೂ ಹೆದರಿಸಲು ಪ್ರಯತ್ನಿಸಿದೆ.

ಬೀದಿ ನಾಯಿಗಳಷ್ಟೇ ಅಲ್ಲ; ಇದೀಗ ನಡು ರಸ್ತೆಗಳಲ್ಲಿ ಬಿಡಾಡಿ ಪಶುಗಳು ಸಹ ರೊಚ್ಚಿಗೆದ್ದು ಕಂಟಕವಾಗುತ್ತಿವೆ, ವಿಡಿಯೋ ನೋಡಿ
ಇದೀಗ ನಡು ರಸ್ತೆಗಳಲ್ಲಿ ಬಿಡಾಡಿ ಪಶುಗಳು ಸಹ ರೊಚ್ಚಿಗೆದ್ದು ಕಂಟಕವಾಗುತ್ತಿವೆ
ಸಾಧು ಶ್ರೀನಾಥ್​
|

Updated on: Jan 09, 2024 | 10:59 AM

Share

ಆ ವ್ಯಕ್ತಿಯನ್ನು ಬೈಕ್‌ನಿಂದ ಕೆಳಗೆ ಬೀಳಿಸಿ, ಆತನ ಮೇಲೆ ವ್ಯಘ್ರ ಪಶು ದಾಳಿ ಮಾಡಿದೆ. ಮುಂದುವರಿದು, ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ. ಆ ವೇಳೆ ಅಲ್ಲಿದ್ದ ಕೆಲವರು ಅವರ ನೆರವಿಗೆ ಧಾವಿಸಿದ್ದಾರೆ. ಅಲ್ಲಿಗೂ ಆ ಪ್ರಾಣಿ ಅವರನ್ನೂ ಹೆದರಿಸುವ ಯತ್ನ ನಡೆಸಿದೆ. ಆ ಪ್ರಾಣಿಗೆ ಹೆದರಿ ಅಲ್ಲಿದ್ದ ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಂಡುಬಂದಿದೆ. ಇದರಿಂದ ವಾಹನಗಳು ನಡು ರಸ್ತೆಯಲ್ಲೇ ನಿಂತುಬಿಟ್ಟಿವೆ. ಇದಕ್ಕೆಲ್ಲ ಕಾರಣ ರಸ್ತೆಯ ಮಧ್ಯದಲ್ಲಿ ಪ್ರಾಣಿಯೊಂದು ರೊಚ್ಚಿಗೆದ್ದು ನಿಂತಿದೆ. ಅದಕ್ಕೂ ಮುನ್ನ, ರಸ್ತೆಯಲ್ಲಿ ಒಬ್ಬ ವ್ಯಕ್ತಿ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿರುತ್ತಾನೆ. ಪ್ರಾಣಿಯೊಂದು ಆತನ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ.

ರಸ್ತೆ ಮಧ್ಯದಲ್ಲಿ ನಿಂತಿದ್ದ ಪ್ರಾಣಿ ಏಕಾಏಕಿ ಓಡಿ ಬಂದು ಎದುರು ದಿಕ್ಕಿನಿಂದ ಬರುತ್ತಿದ್ದ ದ್ವಿಚಕ್ರವಾಹನದ ಮೇಲೆ ದಾಳಿ ಮಾಡಿದೆ. ಆ ವ್ಯಕ್ತಿಯನ್ನು ಬೈಕ್‌ನಿಂದ ಎತ್ತಿ ಬಿಸಾಕಿದೆ. ನಂತರವೂ ಆತನ ಮೇಲೆ ಹಲ್ಲೆ ನಡೆಸಿದೆ. ಆ ವೇಳೆ ಅಲ್ಲಿದ್ದ ಕೆಲವರು ಅವರ ಸಹಾಯಕ್ಕೆ ಬಂದಿದ್ದಾರೆ. ಆ ಪ್ರಾಣಿ ಅವರನ್ನೂ ಹೆದರಿಸಲು ಪ್ರಯತ್ನಿಸಿದೆ. ಪ್ರಾಣಿಗಳಿಗೆ ಹೆದರಿ ಜನರು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

X ಖಾತೆಯ ಕೈಲೇಶ್ ಅವರಿಂದ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೊಗೆ ಲೈಕ್‌ಗಳು ಮತ್ತು ಆಕ್ರೋಶಭರಿತ ಕಾಮೆಂಟ್‌ಗಳು ಬರುತ್ತಿವೆ. ಈ ವಿಡಿಯೋದಲ್ಲಿ ರಸ್ತೆಯಲ್ಲಿ ನಡೆಯುವುದೂ ಅಪಾಯಕಾರಿ… ತುಂಬಾ ಅಪಾಯಕಾರಿ ಎಂಬ ಕಾಮೆಂಟ್‌ ಬಂದಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ