Viral Video: ಈ ಜೀವಿ ಜಗತ್ತಿನಲ್ಲಿ ಅತ್ಯಂತ ಅಪರೂಪ, ಇದು ಮೀನು ಅಲ್ಲ, ಹಾವು ಅಲ್ಲ ಮತ್ತೇನೂ? 

ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇದೇನಪ್ಪಾ ದೈತ್ಯ ಹಾವು ನೀರಿನಲ್ಲಿ ಮೀನಿನಂತೆ ಈಜಾಡುತ್ತಿದೆ, ನಿಜಕ್ಕೂ ಇದು ಮೀನೇನಾ ಅಥವಾ ದೈತ್ಯ ಸರ್ಪವೇ ಅಂತ ಹಲವರು ಕನ್ಫ್ಯೂಸ್ ಆಗಿದ್ದಾರೆ. ಆದ್ರೆ ಇದು ಹಾವಲ್ಲ, ಹಾಗಾದ್ರೆ ಮತ್ತೇನೂ ಅಂತ ಯೋಚನೆ ಮಾಡ್ತಿದ್ದೀರಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

Viral Video: ಈ ಜೀವಿ ಜಗತ್ತಿನಲ್ಲಿ ಅತ್ಯಂತ ಅಪರೂಪ, ಇದು ಮೀನು ಅಲ್ಲ, ಹಾವು ಅಲ್ಲ ಮತ್ತೇನೂ? 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 08, 2024 | 6:02 PM

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಏನಪ್ಪಾ ಇದು ಅನಕೊಂಡದಂತಿರುವ ಎರಡು ಹಾವುಗಳು ನೀರಿನಲ್ಲಿ ಮೀನಿನಂತೆ ಈಜುತ್ತಿವೆ. ನಿಜಕ್ಕೂ ಇದು ಯಾವುದೋ ದೈತ್ಯ ಮೀನೇನಾ ಅಥವಾ ದೈತ್ಯ ಸರ್ಪವೇ ಅಂತ ಈ ವಿಡಿಯೋ ನೋಡಿ ಹಲವರು ಫುಲ್ ಕನ್ಫ್ಯೂಸ್ ಆಗಿದ್ದಾರೆ. ನೀವು ಕೂಡಾ ಅದೇ ರೀತಿ ಯೋಚ್ನೆ ಮಾಡ್ತಿದ್ದಿರಾ?  ಆದ್ರೆ ನೀವು ಭಾವಿಸಿರುವ ಹಾಗೆ ಇವುಗಳು ಹಾವುಗಳಲ್ಲ.

ಇವುಗಳ ಹೆಸರು ʼಸಲಾಮಾಂಡರ್ʼ.  ಮೀನಿನಂತೆ ನೀರಿನಲ್ಲಿ ವಾಸಿಸುವ ಈ ಉಭಯಚರಗಳ ವೈಜ್ಞಾನಿಕ ಹೆಸರು ಆಂಡ್ರಿಯಾಸ್ ಡೇವಿಡಿಯನಸ್.  ನೋಡಲು ದೈತ್ಯ ಹಾವಿನಂತೆ ಕಾಣುವ ಈ ಜೀವಿಗಳು ನೀರಿನಲ್ಲಿರುವ ಮೀನು, ಏಡಿ, ಕಪ್ಪೆ ಇತ್ಯಾದಿ ಜಲಚರ ಜೀವಿಗಳನ್ನು ತಿಂದು ಬದುಕುತ್ತವೆ. ಹೆಚ್ಚಾಗಿ ಅಮೇರಿಕಾ, ಆಫ್ರಿಕಾ, ಯುರೋಪ್, ಏಷ್ಯಾ ಮತ್ತು ರಷ್ಯಾದಲ್ಲಿ ಈ ಸಲಾಮಾಂಡರ್​​ಗಳು ಕಂಡುಬರುತ್ತವೆ. ಹೆಚ್ಚಾಗಿ ಇವುಗಳು ತೊರೆಗಳು, ಅರಣ್ಯ ಪ್ರದೇಶದ ತಪ್ಪಲಿನಲ್ಲಿರುವ ನದಿ ನೀರುಗಳಲ್ಲಿ, ಹಾಗೂ ತೇವವಾಗಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಹಲವು ಬಗೆಯ ಸಲಾಮಾಂಡರ್ ಗಳಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ನಾವು ದೈತ್ಯ ಚೀನಿ ಸಲಾಮಂಡರ್​​ಗಳನ್ನು ಕಾಣಬಹುದು. ಇವುಗಳು ಚೀನಾದಲ್ಲಿ ಕಾಣಸಿಗುತ್ತವೆ. ವಿಶೇಷವಾಗಿ ಚೀನಾದಲ್ಲಿ ಕಾಣಸಿಗುವಂತಹ  ದೈತ್ಯ ಸಲಾಮಾಂಡರ್ 5.9 ಅಡಿ ಉದ್ದ ಮತ್ತು 140 ಪೌಂಡ್ ತೂಗುತ್ತವೆ. ದೊಡ್ಡ ಗಾತ್ರದ ತಲೆ, ಸಣ್ಣ ಕಣ್ಣುಗಳು, ಸುಕ್ಕುಗಟ್ಟಿದಂತೆ ಕಾಣುವ ಚರ್ಮವನ್ನು ಹೊಂದಿರುವ ಈ ಉಭಯಚರ ಜೀವಿ ಕಾಣಲು ಥೇಟ್ ದೈತ್ಯ ಹಾವಿನಂತಿದೆ. ಆಹಾರ, ಸಾಂಪ್ರದಾಯಿಕ ಔಷಧಿ, ಆವಾಸಸ್ಥಾನಗಳ ನಾಶದಿಂದಾಗಿ ಇಂದು ಈ ದೈತ್ಯ ಸಲಾಮಾಂಡರ್ ಅಳಿವಿನಂಚಿನಲ್ಲಿವೆ. ಇದೀಗ ಅಳಿವಿನಂಚಿನಲ್ಲಿರುವ ಈ ಉಭಯಚರ ಜೀವಿಯ ವಿಡಿಯೋವೊಂದು  ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

@AMAZINGNATURE ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು,  ನೀರಿನ ತೊರೆಯಲ್ಲಿ ಎರಡು ದೈತ್ಯ ಸಲಾಮಾಂಡರ್ ಗಳು ಈಜುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಸಣ್ಣ ನೀರಿನ ತೊರೆಯಲ್ಲಿ ಎರಡು ದೈತ್ಯ ಸಲಾಮಾಂಡರ್ಗಳು ಆಹಾರವನ್ನರಸುತ್ತಾ, ಅತ್ತಿಂದ ಇತ್ತ ನಿಧಾನವಾಗಿ ಈಜಾಡುತ್ತಾ ಹೋಗುವ ದೃಶ್ಯವನ್ನು ಕಾಣಬಹುದು. ಈ ದೈತ್ಯ ಉಭಯಚರ ಜೀವಿಯನ್ನು ಕಂಡು ಹೆಚ್ಚಿನವರು ಇದ್ಯಾವುದಪ್ಪಾ ಇಷ್ಟು ದೊಡ್ಡ ಹಾವು ಎಂದು ಭಯಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ:  ಲಿಫ್ಟ್​​​​ನಲ್ಲಿ ಸಿಲುಕಿಕೊಂಡ ನಾಯಿ ಮರಿಯನ್ನು ರಕ್ಷಿಸಿದ ಬಾಲಕ; ಇತನ ಸಮಯ ಪ್ರಜ್ಞೆ ನೋಡಿ

ಜನವರಿ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಷ್ಟಕ್ಕೂ ಇದು ಯಾವ ಜೀವಿʼ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಇನ್ನೊಬ್ಬ ಬಳಕೆದಾರರು ʼಇದು ಸಲಾಮಾಂಡರ್ ಎಂಬ ಉಭಯಚರ ಜೀವಿʼ ಎಂದು ಉತ್ತರಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಮೊಸಳೆಯೇʼ ಎಂದು ಕೇಳಿದ್ದಾರೆ. ಇನ್ನೂ ಈ ಸಲಾಮಾಂಡರ್ ಉಭಯಚರವನ್ನು ಮೊದಲ ಬಾರಿಗೆ ಕಂಡ ಅನೇಕರು ಇದು ದೈತ್ಯ ಸರ್ಪವೇ ಅಂತ ಪ್ರಶ್ನೆ ಕೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ