ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳ (Social Media) ಬಳಕೆ ದಿನನಿತ್ಯದ ಭಾಗವಾಗಿದೆ. ಚಾಟ್, ವಿಡಿಯೋ ಕಾಲ್, ವಾಯ್ಸ್ ಕಾಲ್ಗಳ ಜಗತ್ತಿನಲ್ಲಿ ಎಮೋಜಿಗಳನ್ನು(Emojis) ಯಥೇಚ್ಛವಾಗಿ ಬಳಸುತ್ತೇವೆ. ಭಾವನೆಗಳನ್ನು ವಿವರಿಸಲು ಎಮೋಜಿಗಳನ್ನಿಟ್ಟು ಮೆಸೇಜ್ಗಳನ್ನು ಕಳುಹಿಸುತ್ತೇವೆ. ಕೆಲವರಂತೂ ಖುಷಿಯನ್ನು ವ್ಯಕ್ತಪಡಿಸಲು ಕೆಂಪು ಬಣ್ಣದ ಹಾರ್ಟ್ ಎಮೋಜಿಗಳನ್ನು ಕಳುಹಿಸುತ್ತಾರೆ. ಇನ್ನೂ ಕೆಲವರಿಗೆ ಎಮೋಜಿಗಳಿಲ್ಲದೆ ಮೆಸೇಜ್ ಕಳುಹಿಸುವುದೆಂದರೆ ಅಲರ್ಜಿ ಎನ್ನುವಂತಿರುತ್ತದೆ. ಹೀಗಿದ್ದಾಗ ಯಾವುದಾದದರೂ ಒಂದು ಎಮೋಜಿಯನ್ನು ಬ್ಯಾನ್ಮಾಡಿಬಿಟ್ಟರೆ? ಹೌದು, ಸೌದಿ ಅರೇಬಿಯಾದಲ್ಲಿ (Saudi Arabia) ಇಂಥದ್ದೊಂದು ನಿಯಮ ಜಾರಿಯಾಗಿದೆ. ವಾಟ್ಸಾಪ್ ಸಂದೇಶ ಕಳುಹಿಸುವಾಗ ರೆಡ್ ಹಾರ್ಟ್ ಎಮೋಜಿಗಳನ್ನು (Red Heart Emojis) ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿ ತಿಳಿಸಿದೆ.
ವಾಟ್ಸಾಪ್ನಲ್ಲಿ ಕೆಂಪು ಬಣ್ಣದ ಹಾರ್ಟ್ ಎಮೋಜಿ ಕಳುಹಿಸುವುದು ಕಿರುಕುಳ ನೀಡಿದಂತೆ. ಒಂದು ವೇಳೆ ಮೆಸೇಜ್ನಲ್ಲಿ ರೆಡ್ ಹಾರ್ಟ್ ಎಮೋಜಿ ಕಳುಹಿಸಿರುವುದು ತಿಳಿದು ಬಂದರೆ ಅಂತಹವರಿಗೆ 5 ವರ್ಷ ಜೈಲು ಮತ್ತು 26 ಸಾವಿರ ಡಾಲರ್ ದಂಡ ವಿಧಿಸಲಾಗುವುದು ಎಂದು ಸೈಬರ್ ಕ್ರೈಮ್ ತಜ್ಞರೊಬ್ಬರು ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲೆಡೆ ಸುದ್ದಿಯಾಗಿದೆ.
ಸೌದಿ ಅರೇಬಿಯಾದ ಕಾನೂನಿ ಪ್ರಕಾರ ರೆಡ್ ಹಾರ್ಟ್ಗಳನ್ನು ಕಳುಹಿಸುವುದು ಲೈಂಗಿಕತೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಆನ್ಲೈನ್ನಲ್ಲಿ ಚಾಟ್ ಮಾಡುವ ವೇಳೆ ಈ ರೀತಿ ರೆಡ್ ಹಾರ್ಟ್ಗಳನ್ನು ಕಳುಹಿಸುವುದು ಕಿರುಕುಳಕ್ಕೆ ಸಮಾನವಾಗಿದೆ. ಕಾನೂನಿನ ಅಡಿಯಲ್ಲ ಅಂತಹ ಪ್ರಕರಣಗಳು ಸಾಬೀತಾದರೆ ಶಿಕ್ಷೆ ತಪ್ಪಿದ್ದಲ್ಲ ಎಂದು ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್ ಅಸೋಸಿಯೇಷನ್ನ ಸದಸ್ಯ ಅಲ್ ಮೊತಾಜ್ ಕುಟ್ಬಿ ತಿಳಿಸಿದ್ದು, ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅದೇ ರೀತಿಯ ತಪ್ಪು ಪುನಾರಾವರ್ತನೆಯಾದರೆ ದಂಡದ ಮೊತ್ತ ದುಪ್ಪಟ್ಟಾಗುವುದು ಜತೆಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:
1,868 ಮೀಟರ್ ಎತ್ತರದ ಅಗಸ್ತ್ಯರ್ಕೂಡಮ್ ಶಿಖರ ಏರಿದ 62ರ ವೃದ್ಧೆ: ವಿಡಿಯೋ ವೈರಲ್
Published On - 5:09 pm, Sun, 20 February 22