AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಮಾನದ ಸಸ್ಯಾಹಾರ ಊಟದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆ! ವೈರಲ್ ವಿಡಿಯೋ ಇಲ್ಲಿದೆ

ಟರ್ಕಿ ಮೂಲದ ವಿಮಾನಯಾನ ಕಂಪನಿಯೊಂದರ ವಿಮಾನದಲ್ಲಿನ ಆಹಾರದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆಯಾಗಿದೆ. ಜುಲೈ 21 ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್‌ಗೆ ಹೋಗುತ್ತಿದ್ದ ಸನ್‌ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.

Viral Video: ವಿಮಾನದ ಸಸ್ಯಾಹಾರ ಊಟದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆ! ವೈರಲ್ ವಿಡಿಯೋ ಇಲ್ಲಿದೆ
ವಿಮಾನದ ಊಟದಲ್ಲಿ ಹಾವಿನ ತಲೆ ಪತ್ತೆ
TV9 Web
| Updated By: Rakesh Nayak Manchi|

Updated on:Jul 26, 2022 | 10:33 AM

Share

ಆಹಾರ ವಿತರಣೆಯಲ್ಲಿ ಕೆಲವೊಂದು ತಪ್ಪುಗಳು ನಡೆಯುತ್ತಿವೆ. ಈ ಪ್ರಮಾದವು ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತದೆ. ಇದೀಗ ಟರ್ಕಿ ಮೂಲದ ವಿಮಾನಯಾನ ಕಂಪನಿಯೊಂದರ ವಿಮಾನದಲ್ಲಿನ ಆಹಾರದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆಯಾಗಿದೆ. ವಿಮಾನಯಾನ ಬ್ಲಾಗ್ ಅನ್ನು ಉಲ್ಲೇಖಿಸಿ ಒನ್ ಮೈಲ್ ಅಟ್ ಎ ಟೈಮ್, ದಿ ಇಂಡಿಪೆಂಡೆಂಟ್ ವರದಿ ಮಾಡಿದ್ದು, ಜುಲೈ 21 ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್‌ಗೆ ಹೋಗುತ್ತಿದ್ದ ಸನ್‌ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಒಂದು ಸಣ್ಣ ಹಾವಿನ ತಲೆ ಆಲೂಗಡ್ಡೆ ಮತ್ತು ತರಕಾರಿಗಳ ನಡುವೆ ಮರೆಮಾಚಿರುವ ವಿಡಿಯೋ ವೈರಲ್ (Video Viral) ಆಗುತ್ತಿದೆ.

ವಾಕರಿಕೆ ಬರುವಂತೆ ಮಾಡುವ ಈ ಘಟನೆ ಬಗ್ಗೆ ವಿಮಾನಯಾನವು ತಕ್ಷಣ ಪ್ರತಿಕ್ರಿಯಿಸಿದೆ. ಔಟ್ಲೆಟ್ ಪ್ರಕಾರ, ಸನ್ಎಕ್ಸ್​ಪ್ರೆಸ್​​ನ ಪ್ರತಿನಿಧಿಯು ಹೇಳುವಂತೆ ಟರ್ಕಿಶ್ ಪತ್ರಿಕೆಗಳಿಗೆ ಘಟನೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ವಿಮಾನಯಾನ ಸಂಸ್ಥೆಯು ಆಹಾರ ಪೂರೈಕೆದಾರರೊಂದಿಗಿನ ಒಪ್ಪಂದವನ್ನು ನಿಲ್ಲಿಸಿದೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. 

ವಾಯುಯಾನ ಉದ್ಯಮದಲ್ಲಿ 30 ವರ್ಷಗಳ ಅನುಭವದೊಂದಿಗೆ ನಮ್ಮ ವಿಮಾನದಲ್ಲಿ ನಮ್ಮ ಅತಿಥಿಗಳಿಗೆ ನಾವು ಒದಗಿಸುವ ಸೇವೆಗಳು ಉತ್ತಮ ಗುಣಮಟ್ಟದ ಮತ್ತು ನಮ್ಮ ಗ್ರಾಹಕರು, ಉದ್ಯೋಗಿಗಳು ಆರಾಮದಾಯಕ ಹಾಗೂ ಸುರಕ್ಷಿತ ಹಾರಾಟದ ಅನುಭವವನ್ನು ಹೊಂದುವಂತೆ ಮಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದ್ದಾಗಿ ಇಂಡಿಪೆಂಡೆಂಟ್ ಹೇಳಿದೆ.

ವಿಮಾನದಲ್ಲಿ ಆಹಾರ ಸೇವೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿನ ಆರೋಪಗಳು ಮತ್ತು ಹರಡುವಿಕೆಗಳು ಸಂಪೂರ್ಣ ಸ್ವೀಕಾರಾರ್ಹವಲ್ಲ. ಈ ವಿಷಯದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ” ಎಂದು ಸಂಸ್ಥೆ ಹೇಳಿದೆ.

ಇನ್ನೊಂದೆಡೆ, ಆಹಾರ ಸರಬರಾಜು ಮಾಡಿದ ಕ್ಯಾಟರಿಂಗ್ ಕಂಪನಿಯು, ಹಾವಿನ ತಲೆಯು ತಮ್ಮ ಸೌಲಭ್ಯಗಳಿಂದ ಹುಟ್ಟಿಕೊಂಡಿರಬಹುದು ಎಂಬ ಆರೋಪವನ್ನು ನಿರಾಕರಿಸಿದೆ. Sancak Inflight Service ವರದಿಯ ಪ್ರಕಾರ ಅಡುಗೆ ಮಾಡುವಾಗ ಆಹಾರದಲ್ಲಿ ಇರಬಹುದಾದ ಯಾವುದೇ ವಿದೇಶಿ ವಸ್ತುಗಳನ್ನು ಒದಗಿಸಿಲ್ಲ. ಕ್ಯಾಟರಿಂಗ್ ಕಂಪನಿಯು ತನ್ನ ಊಟವನ್ನು 280 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬೇಯಿಸಲಾಗುತ್ತದೆ. ಆದರೆ ಪತ್ತೆಯಾದ ಹಾವಿನ ತಲೆಯನ್ನು ತುಲನೆ ಮಾಡಿದಾಗ ತಾಜಾವಾಗಿ ಕಾಣುವ ಹಾವಿನ ತಲೆಯನ್ನು ವಾಸ್ತವವಾಗಿ ಸೇರಿಸಿರಬೇಕು ಎಂದು ಕಂಪನಿ ಹೇಳಿಕೊಂಡಿದೆ.

ಈ ವಾರದ ಆರಂಭದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ದೆಹಲಿಯ ಜನಪ್ರಿಯ ಉಪಾಹಾರ ಗೃಹದಿಂದ ಒಬ್ಬ ವ್ಯಕ್ತಿ ಖರೀದಿಸಿದ ಚಿಕನ್ ಸಲಾಡ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿತ್ತು. “ಅತ್ಯಂತ ಪ್ರಸಿದ್ಧವಾದ ಡಿಗ್ಗಿನ್ ಕೆಫೆಯಲ್ಲಿ ಖರೀದಿಸಿದ ಆಹಾರದಲ್ಲಿ ಹಲ್ಲಿಯನ್ನು ಕಂಡಿದ್ದೇವೆ” ಎಂದು ವ್ಯಕ್ತಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Published On - 10:33 am, Tue, 26 July 22

‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್