ಜಾಬ್ ಅಲರ್ಟ್: ತಿಂಗಳಿಗೆ 6.5 ಲಕ್ಷ ರೂ ಸಂಬಳವಂತೆ! ಅದು ಯಾವ ರೀತಿಯ ಕೆಲಸ? ಚಾಕೋಲೆಟ್ ರುಚಿ ನೋಡುವುದಷ್ಟೇ
Chocolate Tasting Job: ಜಾಬ್ ಎಂದರೆ ಎಂಟು ಗಂಟೆಗಳ ಕಾಲ ವಿರಾಮವಿಲ್ಲದೆ ಕೆಲಸ ಮಾಡುವುದು ಅಂತಾ ಸ್ವಾಭಾವಿಕವಾಗಿ ಎಲ್ಲರದೂ ಒಂದೇ ಭಾವ ಇರುತ್ತದೆ. ಅದು ಬಿಟ್ಟು, ಚಾಕೋಲೆಟ್ ತಿಂದು ಕಾಲ ಕಳೆಯುವುದೇ ಕೆಲಸವಾದರೆ? ಕೆಲಸದ ಸ್ಥಳದಲ್ಲಿ ಹಾಗೆ ಮಾಡಿದರೆ ಏನು ಸಿಗುತ್ತೆ ಗೊತ್ತಾ !?
ಉದ್ಯೋಗವೆಂದರೆ ಎಂಟು ಗಂಟೆಗಳ ಕಾಲ ವಿರಾಮವಿಲ್ಲದೆ ದುಡಿಯುವುದು, ಸ್ವಾಭಾವಿಕವಾಗಿ ಎಲ್ಲರಿಗೂ ಒಂದೇ ಭಾವನೆ ಇರುತ್ತದೆ. ಇಲ್ಲವಾದರೆ ಚಾಕಲೇಟು ತಿಂದು ಕಾಲ ಕಳೆಯುವುದೇ ಕೆಲಸವಾದರೆ? ಜಾಬ್ ಎಂದರೆ ಎಂಟು ಗಂಟೆಗಳ ಕಾಲ ವಿರಾಮವಿಲ್ಲದೆ ಕೆಲಸ ಮಾಡುವುದು ಅಂತಾ ಸ್ವಾಭಾವಿಕವಾಗಿ ಎಲ್ಲರದೂ ಒಂದೇ ಭಾವ ಇರುತ್ತದೆ. ಅದು ಬಿಟ್ಟು, ಚಾಕೋಲೆಟ್ ತಿಂದು (Chocolate Tasting Job ) ಕಾಲ ಕಳೆಯುವುದೇ ಕೆಲಸವಾದರೆ ? ಕೆಲಸದ ಸ್ಥಳದಲ್ಲಿ ಹಾಗೆ ಮಾಡಿದರೆ ಏನು ಸಿಗುತ್ತೆ ಗೊತ್ತಾ !?
ಈ ಕೆಲಸ ಮಾಡಲು ತಿಂಗಳಿಗೆ 6.5 ಲಕ್ಷ ರೂ. ಸಂಬಳ ನೀಡುತ್ತಾರಂತೆ. ವಾಸ್ತವದಲ್ಲಿ ಅಂತಹ ಕೆಲಸ ನಿಜವಾಗಿಯೂ ಅಸ್ತಿತ್ವದಲ್ಲಿದೆ. ಅದು ಅಮೆರಿಕದಲ್ಲಿದೆ. ಯುಎಸ್ಎ ಮೂಲದ ಕ್ಯಾಂಡಿ/ಚಾಕೋಲೆಟ್ ವ್ಯಾಪಾರಿ ತಮ್ಮ ಕಂಪನಿಯಲ್ಲಿ ಇಂತಹ ಉದ್ಯೋಗ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಉದ್ಯೋಗದ ಜಾಹೀರಾತು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾವುದು ಈ ಕೆಲಸ, ಏನು ಮಾಡುವುದು? ಇದಕ್ಕೆ ಇರುವ ಅರ್ಹತೆಗಳೇನು ಎಂಬುದನ್ನು ಈಗ ನೋಡೋಣ.
ಮಕ್ಕಳಿಗೇ ಇಂತಹ ಉದ್ಯೋಗ ಸರಿ! ಆದರೆ ಬಾಲ ಕಾರ್ಮಿಕ ನೀತಿ ಏನು ಹೇಳುತ್ತದೆ?
ಅಮೆರಿಕದ ಚಾಕೊಲೇಟ್ ಕಂಪನಿ ಕ್ಯಾಂಡಿ ಫನ್ ಹೌಸ್ ಚೀಫ್ ಕ್ಯಾಂಡಿ ಆಫೀಸರ್ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಚಾಕೊಲೇಟ್ ಶಾಸ್ತ್ರಜ್ಞರ ತಂಡವನ್ನು ಮುನ್ನಡೆಸಬೇಕಾಗುತ್ತದೆ. ಕಂಪನಿಯಲ್ಲಿ ತಯಾರಾಗುವ ಚಾಕಲೇಟ್‌ಗಳನ್ನು ಟೇಸ್ಟ್ ಮಾಡುವುದು ಮತ್ತು ಅದಕ್ಕೆ ಸೂಕ್ತ ಶ್ರೇಯಾಂಕ (ರೇಟಿಂಗ್) ನೀಡುವುದು ಈ ಹುದ್ದೆ ಅಯ್ಕಯಾಗುವವರ ಕೆಲಸ-ಕಾರ್ಯವಾಗಿದೆ. ಐದು ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕಂಪನಿ ತಿಳಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 100,000 ಡಾಲರ್ ವೇತನವನ್ನು ನೀಡಲಾಗುವುದು. ಕುತೂಹಲದ ಸಂಗತಿಯೆಂದರೆ ಇಲ್ಲಿ ಮಕ್ಕಳಿಗೇ ಇಂತಹ ಉದ್ಯೋಗ ಸರಿ! ಆದರೆ ಬಾಲ ಕಾರ್ಮಿಕ ಪದ್ಧತಿಯನ್ನು ಪೋಷಿಸಿದಂತೆ ಆಗುವುದಿಲ್ಲವಾ!?
ಆಸಕ್ತರು ಆಗಸ್ಟ್ 31 ರೊಳಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಟೊರೊಂಟೊ, USA ಅಥವಾ ನೆವಾರ್ಕ್, ನ್ಯೂಜೆರ್ಸಿಯಲ್ಲಿರುವ ಕ್ಯಾಂಡಿ ಫನ್ ಹೌಸ್ ಪ್ರಧಾನ ಕಛೇರಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಸಂಪೂರ್ಣ ವಿವರಗಳಿಗಾಗಿ https://candyfunhouse.ca/pages/careers ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಕಂಪನಿ ತಿಳಿಸಿದೆ.
To read in Telugu click here