ಹುಡುಗಿಯರಿಗೆ ಹಾವು, ಚೇಳು, ಜಿರಲೆ, ಹಲ್ಲಿಗಳೆಂದರೆ ವಿಪರೀತ ಭಯ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಇದಕ್ಕೆ ಹೊರತಾಗಿರುತ್ತಾರೆ. ಬಹುತೇಕ ಯುವತಿಯರು ತಮ್ಮ ರೂಮಿನಲ್ಲಿ ಜಿರಲೆಯಿದ್ದರೆ ಆ ರೂಮನ್ನೇ ಬಿಟ್ಟು ಬೇರೆ ಕಡೆ ಮಲಗಿಕೊಳ್ಳುತ್ತಾರೆಯೇ ವಿನಃ ಆ ಜಿರಲೆಯನ್ನು ಓಡಿಸುವ ಪ್ರಯತ್ನಕ್ಕೆ ಅಪ್ಪಿತಪ್ಪಿಯೂ ಕೈಹಾಕುವುದಿಲ್ಲ. ಹೀಗಿರುವಾಗ ಅಪ್ಪಿತಪ್ಪಿ ತಾನು ಮಲಗುವ ಹಾಸಿಗೆಯ ಅಡಿಯಲ್ಲೇ ಹಾವುಗಳು ಸಂಸಾರ ನಡೆಸುತ್ತಿವೆ ಎಂಬುದು ಗೊತ್ತಾದರೆ ಏನಾಗಬಹುದು?!
ಆಕೆ ಮಲಗಿದ್ದಾಗ ಪ್ರತಿದಿನವೂ ಹಾವು ಬುಸುಗುಡುವ ಶಬ್ದ ಕೇಳುತ್ತಿತ್ತು. ತನ್ನ ಬೆಡ್ ರೂಮಿನ ನೆಲಕ್ಕೆ ಮಂಚದ ಕಾಲುಗಳು ಉಜ್ಜುವಾಗ ಆ ರೀತಿಯ ಶಬ್ದ ಬರುತ್ತಿರಬಹುದು ಎಂದು ಆಕೆ ಭಾವಿಸಿದ್ದಳು. ಆದರೆ, ದಿನವೂ ಯಾವಾಗ ನೋಡಿದರೂ ಹಾವಿನ ಶಬ್ದ ಕೇಳತೊಡಗಿದಾಗ ಅಕ್ಕಪಕ್ಕದಲ್ಲೆಲ್ಲೋ ಹಾವುಗಳು ವಾಸ ಮಾಡುತ್ತಿರಬಹುದು ಎಂದುಕೊಂಡಿದ್ದಳು. ಆದರೆ, ಅಸಲಿ ವಿಚಾರವೇ ಬೇರೆ ಇತ್ತು.
ಒಂದು ದಿನ ಅನುಮಾನದಿಂದ ತಾನು ಮಲಗುತ್ತಿದ್ದ ಮಂಚದ ಕೆಳಗೆ ಸರಿಯಾಗಿ ಪರೀಕ್ಷಿಸಿ ನೋಡಿದಾಗ ಹಾವು ಮರಿಗಳನ್ನು ಇಟ್ಟಿರುವುದು ಕಂಡಿತು. ಅಲ್ಲಿ 18 ಹಾವುಗಳು ವಾಸವಾಗಿದ್ದವು! ಈ ಘಟನೆ ನಡೆದಿರುವುದು ಅಮೆರಿಕದ ಆಗಸ್ಟಾದಲ್ಲಿ. ಇಷ್ಟು ದಿನ ತಾನು ಹಾವುಗಳ ಮೇಲೆ ಮಲಗುತ್ತಿದ್ದೆ ಎಂಬುದು ಗೊತ್ತಾಗುತ್ತಿದ್ದಂತೆ ಆಘಾತದಿಂದ ಆಕೆಗೆ ಹಾರ್ಟ್ ಅಟ್ಯಾಕ್ ಆಗುವುದೊಂದೇ ಬಾಕಿ. ಆಕೆಯ ಬೆಡ್ರೂಮಿನಲ್ಲಿ 17 ಹಾವಿನ ಮರಿಗಳು ತಮ್ಮ ತಾಯಿಯ ಜೊತೆ ವಾಸ ಮಾಡುತ್ತಿದ್ದವು.
ಆಕೆಯ ಮನೆಯ ಪಕ್ಕದಲ್ಲಿದ್ದ ಜಾಗವನ್ನು ಇತ್ತೀಚೆಗಷ್ಟೇ ಸ್ವಚ್ಛಗೊಳಿಸಲಾಗಿತ್ತು. ಅಲ್ಲಿ ಈ ಮೊದಲು ಪೊದೆಗಳು ಬೆಳೆದುಕೊಂಡಿದ್ದರಿಂದ ಹಾವುಗಳು ವಾಸವಾಗಿದ್ದವು. ಆ ಜಾಗವನ್ನು ಖಾಲಿ ಮಾಡಿ, ಬಿಲ್ಡಿಂಗ್ ಕಟ್ಟತೊಡಗಿದ ನಂತರ ಅಲ್ಲಿದ್ದ ಹಾವು ಆ ಯುವತಿಯ ರೂಮಿಗೆ ಶಿಫ್ಟ್ ಆಗಿತ್ತು. ಅಲ್ಲೇ ತನ್ನ 17 ಮರಿಗಳೊಂದಿಗೆ ವಾಸವಾಗಿತ್ತು.
ನಮ್ಮ ಮನೆಯಲ್ಲಿ ಎಷ್ಟು ಹಾವಿನ ಮರಿಗಳಿದ್ದಾವೆ ನೋಡಿ! ಇದನ್ನು ನೋಡಿದ ಮೇಲೆ ನನಗೆ ಹೃದ್ರೋಗತಜ್ಞರು ಬೇಕೆನಿಸುತ್ತಿದೆ ಎಂದು ಆ ಯುವತಿ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.
ಅಂದಹಾಗೆ, ಆ ಹಾವಿನ ಮರಿಗಳನ್ನು ಒಂದು ಬ್ಯಾಗ್ನಲ್ಲಿ ಹಾಕಿಕೊಂಡು ಹೋಗಿ ಹತ್ತಿರದಲ್ಲಿರುವ ಕಾಡಿನೊಳಗೆ ಬಿಡಲಾಗಿದೆ.
ಇದನ್ನೂ ಓದಿ: Viral Video: ಅಚ್ಚರಿಯಾದರೂ ಸತ್ಯ; ವಕೀಲನ ಮೇಲೆ ದಾಳಿ ಮಾಡಿದ 2 ನಾಯಿಗಳಿಗೆ ಮರಣದಂಡನೆ ಶಿಕ್ಷೆ!
(Woman finds family of 18 snakes living under her bed in Augusta)