ಹೊಸದಿಲ್ಲಿ: ಅತಿ ಹೆಚ್ಚು ವಾಹನ ಕಳ್ಳತನವಾಗುವ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದೆ. ನಂತರ ಚೆನ್ನೈ ಎರಡನೇ ಸ್ಥಾನ ಹಾಗೂ ಬೆಂಗಳೂರು ಮೂರನೇ ಸ್ಥಾನದಲ್ಲಿದೆ ಎಂದು ACKO ತನ್ನ ಎರಡನೇ ಆವೃತ್ತಿಯ ಈ ವರ್ಷದ ‘ಥೆಫ್ಟ್ ಆ್ಯಂಡ್ ದಿ ಸಿಟಿ’ ನಲ್ಲಿ ವರದಿ ಮಾಡಿದೆ. ವರದಿಯು 2022 ಮತ್ತು 2023ರ ನಡುವೆ ಭಾರತದಲ್ಲಿ ವಾಹನ ಕಳ್ಳತನವಾಗುವ ಸಮಸ್ಯೆ ಉಲ್ಬಣಗೊಂಡಿದೆ ಎಂದು ಬಹಿರಂಗಪಡಿಸಿದೆ. ಇದಲ್ಲದೇ ರಾಷ್ಟ್ರ ರಾಜಧಾನಿ ದೆಹಲಿಯು ಕಳ್ಳರಿಗೆ ಅತ್ಯಂತ ಪ್ರಿಯವಾದ ನಗರವಾಗಿದೆ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಪ್ರತಿ 14 ನಿಮಿಷಕ್ಕೆ ಒಂದು ಕಾರು ಕಳ್ಳತನವಾಗಿದೆ ಎಂದು ವರದಿ ಹೇಳಿದೆ. ಇದಲ್ಲದೇ ಮಂಗಳವಾರ, ಭಾನುವಾರ ಮತ್ತು ಗುರುವಾರದಂದು ವಾಹನಗಳು ಹೆಚ್ಚಾಗಿ ಕಳ್ಳತನವಾಗಿರುವುದು ಗೊತ್ತಾಗಿದೆ.
ದೇಶದಲ್ಲಿ ಅತಿ ಹೆಚ್ಚು ವಾಹನಗಳು ಕಳ್ಳತನವಾಗಿರುವ ಐದು ನಗರಗಳಿವೆ. ಈ ಟಾಪ್ 5 ಪಟ್ಟಿಯಲ್ಲಿ ಮೊದಲ ಹೆಸರು ದೆಹಲಿ. ಚೆನ್ನೈ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ, ಹೈದರಾಬಾದ್ ಮತ್ತು ಮುಂಬೈ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
ದೆಹಲಿಯ ಭಜನ್‌ಪುರ, ಶಹದಾರ, ಪಟ್‌ಪರ್‌ಗಂಜ್, ಬದರ್‌ಪುರ ಮತ್ತು ಉತ್ತಮ್ ನಗರಗಳಲ್ಲಿ ಅತಿ ಹೆಚ್ಚು ಕಳ್ಳತನವಾದ ವಾಹನಗಳಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೆಹಲಿ ನಿಸ್ಸಂದೇಹವಾಗಿ ಅತಿ ಹೆಚ್ಚು ವಾಹನಗಳನ್ನು ಕಳವು ಮಾಡುವ ನಗರವಾಗಿದೆ ಆದರೆ ಮತ್ತೊಂದೆಡೆ ದೆಹಲಿಯಲ್ಲಿ ವಾಹನ ಕಳ್ಳತನದ ಗ್ರಾಫ್ 2022 ಕ್ಕೆ ಹೋಲಿಸಿದರೆ 2023 ರಲ್ಲಿ ಕುಸಿದಿದೆ. ದೆಹಲಿ ನಗರದಲ್ಲಿ, 2022 ರಲ್ಲಿ 56 ಪ್ರತಿಶತದಷ್ಟು ವಾಹನಗಳನ್ನು ಕಳವು ಮಾಡಲಾಗಿದೆ, ಆದರೆ ಈ ಗ್ರಾಫ್ 2023 ರಲ್ಲಿ 37 ಪ್ರತಿಶತಕ್ಕೆ ಕಡಿಮೆಯಾಗಿದೆ. 2022 ಕ್ಕೆ ಹೋಲಿಸಿದರೆ, 2023 ರಲ್ಲಿ ಕಡಿಮೆ ವಾಹನಗಳು ಕಳ್ಳತನವಾಗಿದೆ.
ACKO ವರದಿಯು ಹೆಚ್ಚು ಕದ್ದ ವಾಹನಗಳಲ್ಲಿ 47 ಪ್ರತಿಶತದಷ್ಟು ಮಾರುತಿ ಸುಜುಕಿ ವಾಹನಗಳು ಎಂದು ಬಹಿರಂಗಪಡಿಸಿದೆ. ಕಳ್ಳತನ ತಡೆಯಲು ಮಾರುತಿ ಸುಜುಕಿ ಜತೆಗೆ ಹುಂಡೈ ಕಂಪನಿಯ ವಾಹನಗಳ ಮೇಲೂ ನಿಗಾ ಇಡಲಾಗಿದೆ. ACKO ನ ಎರಡನೇ ಕಳ್ಳತನದ ವರದಿಯಲ್ಲಿ, ಐದು ಹೆಚ್ಚು ಕದ್ದ ವಾಹನಗಳನ್ನು ಸಹ ಉಲ್ಲೇಖಿಸಲಾಗಿದೆ. ಈ ಟಾಪ್ 5 ಪಟ್ಟಿಯಲ್ಲಿ ಮೊದಲ ಹೆಸರು ಮಾರುತಿ ಸುಜುಕಿ ವ್ಯಾಗನ್ಆರ್ ಆಗಿದೆ. ಮಾರುತಿ ಸ್ವಿಫ್ಟ್ ಎರಡನೇ, ಹುಂಡೈ ಕ್ರೆಟಾ ಮೂರನೇ, ಹ್ಯುಂಡೈ ಗ್ರಾಂಡ್ ಐ10 ನಾಲ್ಕನೇ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಐದನೇ ಸ್ಥಾನದಲ್ಲಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ