ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಎಚ್ಚರಿಕೆಯ ಸಂದೇಶವನ್ನು ಸಾರುತ್ತವೆ. ಇದೀಗ ವೈರಲ್ ಆದ ವಿಡಿಯೊವೊಂದು ಎಲ್ಲಾ ಪಾಲಕರನ್ನು ಎಚ್ಚರಿಸುವಂತೆ ಮಾಡಿದೆ. ಮಕ್ಕಳಿಬ್ಬರು ಬಿಲ್ಡಿಂಗ್ ತುತ್ತ ತುದಿಯಲ್ಲಿ ನಿಂತು ಜಂಪ್ ಮಾಡುತ್ತಾ ಆಟವಾಡುತ್ತಿದ್ದಾರೆ. ಪೋಷಕರೇ ಎಚ್ಚರ! ವಿಡಿಯೊ ನೋಡಿದ ಮೇಲಾದರೂ ನೀವು ಎಚ್ಚೆತ್ತುಕೊಳ್ಳಬೇಕು. ಮಕ್ಕಳಿಬ್ಬರು 22 ಅಂತಸ್ತಿನ ಕಟ್ಟಡದ ತುತ್ತ ತುದಿಯಲ್ಲಿ ನಿಂತು ಜಂಪಿಂಗ್ ಆಟ ಆಡುತ್ತಿದ್ದಾರೆ. ಈ ಘಟನೆ ಚೀನಾದಲ್ಲಿ ನಡೆದಿದೆ. ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಫುಲ್ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಫುಲ್ ವೈರಲ್ ಆಗುತ್ತಿದ್ದಂತೆಯೇ ಜನರು ಮಕ್ಕಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಹ ಚಿಕ್ಕ ಮಕ್ಕಳನ್ನು ಕಟ್ಟಡದ ಮೇಲೆ ಹೋಗಲು ಯಾರು ಬಿಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಶಾಕಿಂಗ್ ವಿಡಿಯೊ ನೋಡಿದ ಕೆಲವರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಎಲ್ಲಿಯದು ಎಂಬುದು ನನಗೆ ತಿಳಿದಿಲ್ಲ, ಆದರೆ ಮಕ್ಕಳಿಗೆ ಜನ್ಮ ನೀಡಿ ತಾಯಿಯಾಗಿರುವ ನನ್ನ ಮನಸ್ಸಿಗೆ ತುಂಬಾ ಹೆದರಿಕೆ ಅನಿಸುತ್ತಿದೆ ಎಂದು ಓರ್ವರು ಹೇಳಿದ್ದಾರೆ.
I don’t know where this is. As a parent, watching this made me anxious and upset.
Recieved this on WhatsApp. pic.twitter.com/xvqWca9BXH— Kaveri ?? (@ikaveri) November 9, 2021
ವಿಡಿಯೊದಲ್ಲಿ ಗಮನಿಸುವಂತೆ ಕಟ್ಟಡದ ತುತ್ತ ತುದಿಯಲ್ಲಿ ಮಕ್ಕಳಿಬ್ಬರು ಆಟವಾಡುತ್ತಿರುವುದನ್ನು ನೀವು ನೋಡಬಹುದು. ಒಂದು ಬಿಲ್ಡಿಂಗ್ನಿಂದ ಮತ್ತೊಂದು ಬಿಲ್ಡಿಂಗ್ಗೆ ಜಂಪ್ ಮಾಡುತ್ತಾ ಇಬ್ಬರು ಆಟವಾಡುತ್ತಿದ್ದಾರೆ. ಈ ವಿಡಿಯೊ ಇದುವರೆಗೆ 28 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಸಾಕಷ್ಟು ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದ್ದು, ಇಬ್ಬರೂ ಮಕ್ಕಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳ ಬಗ್ಗೆ ಕಾಳಜಿಯಿಂದಿರಬೇಕು. ಅವರು ಎಲ್ಲಿಗೆ ಹೋಗುತ್ತಾರೆ, ಏನೂ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಲಕ್ಷ್ಯವಿರಲಿ ಎಂದು ಕೆಲವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ:
Shocking News: ಮೇಕಪ್ ಇಲ್ಲದೆ ಎದುರು ಬಂದ ಹೆಂಡತಿಗೆ ಡೈವೋರ್ಸ್ ನೀಡಿದ ಪತಿರಾಯ!
Shocking Video: ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್; ಶಾಕಿಂಗ್ ವಿಡಿಯೊ ವೈರಲ್