Viral Video : ಬೇಯಿಸಿದ ಮೊಟ್ಟೆ ಸಿಪ್ಪೆಯನ್ನು ಹೀಗೂ ತೆಗೆಯಬಹುದು, ಇಲ್ಲಿದೆ ವಿಡಿಯೋ

ಮೊಟ್ಟೆಯೆಂದರೆ ಎಲ್ಲರಿಗೂ ಇಷ್ಟನೇ. ಆದರೆ, ಬೇಯಿಸಿದ ಮೊಟ್ಟೆಯ ಸಿಪ್ಪೆಯನ್ನು ಬಿಡಿಸುವುದೆಂದರೆ ಕಷ್ಟ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಒಂದೇ ಒಂದು ಸೆಕೆಂಡ್ ನಲ್ಲಿ ಮೊಟ್ಟೆ ಸಿಪ್ಪೆ ತೆಗೆದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿವೆ.

Viral Video : ಬೇಯಿಸಿದ ಮೊಟ್ಟೆ ಸಿಪ್ಪೆಯನ್ನು ಹೀಗೂ ತೆಗೆಯಬಹುದು, ಇಲ್ಲಿದೆ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Jun 01, 2024 | 12:36 PM

ಬೇಯಿಸಿದ ಮೊಟ್ಟೆಯು ಆರೋಗ್ಯಕ್ಕೆ ಲಾಭದಾಯಕವಾಗಿರುವುದಲ್ಲದೇ ಅಷ್ಟೇ ರುಚಿಯಾಗಿರುತ್ತದೆ. ಈ ಮೊಟ್ಟೆಗಳಲ್ಲಿ ಪ್ರೋಟೀನ್, ವಿಟಮಿನ್ ಬಿ 6, ಬಿ 12 ಮತ್ತು ವಿಟಮಿನ್ ಡಿ, ಕ್ಯಾಲ್ಸಿಯಂ, ಸತು, ಸೆಲೆನಿಯಮ್ ಮತ್ತು ಫೋಲೇಟ್ ಅಂಶಗಳು ಹೇರಳವಾಗಿದ್ದು, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎನ್ನುವುದು ಎಲ್ಲರಿಗೂ ತಿಳಿದಿದೆ. ತಿನ್ನಲು ರುಚಿಕರವಾಗಿರುವ ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆಯುವುದು ಸ್ವಲ್ಪ ಕಷ್ಟವೇ. ಒಂದು ವೇಳೆ ಗಮನ ಆ ಕಡೆ ಈ ಕಡೆಯಾದರೂ ಮೊಟ್ಟೆಯು ಎರಡು ಭಾಗವಾಗುತ್ತದೆ.

ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬನು ಕೆಲವೇ ಕೆಲವು ಸೆಕೆಂಡ್ ಗಳಲ್ಲಿ ಮೊಟ್ಟೆ ಸಿಪ್ಪೆ ಸುಲಿದು ತೋರಿಸಿದ್ದಾನೆ. ಈ ವಿಡಿಯೋವೊಂದು ನೆಟ್ಟಿಗರ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು, ಬೀದಿ ಬದಿಯ ವ್ಯಾಪಾರಿಯೊಬ್ಬರು ಕೋಳಿ ಮೊಟ್ಟೆಯ ಸಿಪ್ಪೆಯನ್ನು ಬಹಳ ಸುಲಭವಾಗಿ ತೆಗೆಯುವುದರಿಂದ ವಿಡಿಯೋವು ಆರಂಭವಾಗುತ್ತದೆ. ಆ ಬಳಿಕ ವಿದೇಶಿಗನೊಬ್ಬನು ಬೀದಿ ಬದಿಯ ವ್ಯಾಪಾರಿಯಂತೆ ಮೊಟ್ಟೆಯ ಸಿಪ್ಪೆ ಸುಲಿಯಲು ಮುಂದಾಗಿದ್ದಾನೆ.

ಇದನ್ನೂ ಓದಿ: ಮತಗಟ್ಟೆ ಬಳಿಯಿರುವ ಕೊಳಕ್ಕೆ EVM ಎಸೆದು ದುಷ್ಕೃತ್ಯ; ವಿಡಿಯೋ ವೈರಲ್

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ನಾಲ್ಕು ಮೊಟ್ಟೆಯನ್ನು ಬೇಯಿಸಿ, ಆ ಮೊಟ್ಟೆಯ ಮೇಲೆ ಸಣ್ಣ ರಂಧ್ರವನ್ನು ಮಾಡಿದ್ದಾನೆ. ಆ ಬಳಿಕ ಈ ರಂಧ್ರದಿಂದ ಚಮಚವನ್ನು ಹಾಕಿ ಒಂದು ಸುತ್ತು ತಿರುಗಿಸುತ್ತಿದ್ದಂತೆ ಮೊಟ್ಟೆಯ ಸಿಪ್ಪೆಯು ಕೈಯಲ್ಲಿ ಬಂದಿದೆ. dobrovolskyi_hchef ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವನ್ನು 14 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೊಟ್ಟೆಯ ಸಿಪ್ಪೆ ಸುಲಿಯುವುದು ಎಷ್ಟು ಸುಲಭ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ