ಕಾಮ್ ಡೌನ್ ಹಾಡಿನ ಗಾಯಕ ರೆಮಾ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಬಹು ನಿರೀಕ್ಷಿತ ವಿವಾಹದಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ನೈಜೀರಿಯಾದ ಗಾಯಕ ಮುಂಬೈಗೆ ಬಂದಿಳಿದಿರುವುದಾಗಿ ವರದಿಯಾಗಿದೆ. ಇತ್ತೀಚಿನ ಸುದ್ದಿಗಳ ಪ್ರಕಾರ, ಈ ಗಾಯಕ ಒಂದೇ ಒಂದು ಹಾಡು ಹಾಡಲಿದ್ದು, ಇದಕ್ಕಾಗಿ ಬರೋಬ್ಬರಿ 25 ಕೋಟಿ ರೂ. ಸಂಭಾವಣೆ ಪಡೆಯಲಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಗಾಯಕ ರೆಮಾ ತನ್ನ ಫೇಮಸ್ ಹಾಡು ಕಾಮ್ ಡೌನ್ ಸಾಂಗ್ ಹಾಡಲಿದ್ದಾರೆ. ಗಾಯಕ ಈಗಾಗಲೇ ಭಾರತಕ್ಕೆ ಬಂದಿಳಿದಿರುವ ಬಗ್ಗೆ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: ಜೀವಂತ ಕೋಳಿಯ ತಲೆ ಕಚ್ಚಿ ವಿಕೃತಿ ಮೆರೆಯುತ್ತಾ ನೃತ್ಯ ಮಾಡಿದ ಡ್ಯಾನ್ಸರ್; ವಿಡಿಯೋ ವೈರಲ್
ಇದಕ್ಕೂ ಮುನ್ನ ಪಾಪ್ ಗಾಯಕ ಜಸ್ಟಿನ್ ಬೈಬರ್ ಮತ್ತು ಪಂಜಾಬಿ ಗಾಯಕರಾದ ಬಾದ್‌ಶಾ ಮತ್ತು ಕರಣ್ ಔಜ್ಲಾ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ರಾತ್ರಿಯಲ್ಲಿ ಕಾರ್ಯಕ್ರಮ ನೀಡಿದರು. ವರದಿಯ ಪ್ರಕಾರ, ಜಸ್ಟಿನ್ ಅವರ ಅಭಿನಯಕ್ಕಾಗಿ 84 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Fri, 12 July 24