ಉತ್ತರಾಖಂಡ: ಭಾರೀ ಭೂಕುಸಿತ; ಸೆಕೆಂಡುಗಳ ಅಂತರದಲ್ಲಿ ಪಾರಾದ ಕಾರ್ಮಿಕರು
ಚಮೋಲಿ ಜಿಲ್ಲೆಯ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ರಸ್ತೆ ನಿರ್ಮಾಣದಲ್ಲಿದ್ದ ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ.
ಚಮೋಲಿ ಜಿಲ್ಲೆಯ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಭಾರೀ ಭೂಕುಸಿತ ಸಂಭವಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ರಸ್ತೆ ನಿರ್ಮಾಣದ ಕಾರ್ಮಿಕರು ಕೇವಲ ಸೆಕೆಂಡುಗಳ ಅಂತರದಲ್ಲಿ ದುರಂತದಿಂದ ಪಾರಾಗಿದ್ದಾರೆ. ಬಂಡೆಗಳು ಬೀಳುತ್ತಿದ್ದಂತೆ ಕಾರ್ಮಿಕರು ಓಡೋಡಿ ಬಂದಿದ್ದು, ದುರಂತದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾರ್ಮಿಕರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸ್ಥಳದಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. ಭಾರೀ ಭೂ ಕುಸಿತ ಸಂಭವಿಸಿದ್ದು, ಘಟನೆಗೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
workers narrowly escaping from landslide in Chamoli National Highway.#Landslide #Chamoli #Uttarakhand pic.twitter.com/nYf7LZUICM
— Priyathosh Agnihamsa (@priyathosh6447) July 11, 2024
ಇದನ್ನೂ ಓದಿ: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?
ಚಮೋಲಿಯಲ್ಲಿ ಉಂಟಾದ ಈ ಭೂಕುಸಿತವು ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು, ಆದರೆ ಗುರುವಾರ ಅದನ್ನು ತೆರವುಗೊಳಿಸಿ ಯಾತ್ರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. “ಚಮೋಲಿಯ ಭಾನೇರ್ಪಾನಿ ಬಳಿ ನಿರ್ಬಂಧಿಸಲಾದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ” ಎಂದು ಉತ್ತರಾಖಂಡ್ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ