ಉಕ್ರೇನ್​ ನಿರಾಶ್ರಿತರ ಮಕ್ಕಳೊಂದಿಗೆ ಆಟವಾಡಿದ ಸ್ಲೋವಾಕ್ ಪೊಲೀಸ್ ಅಧಿಕಾರಿಗಳು: ವಿಡಿಯೋ ವೈರಲ್​

| Updated By: Pavitra Bhat Jigalemane

Updated on: Mar 20, 2022 | 5:02 PM

ಇಬ್ಬರು ಸ್ಲೋವಾಕ್ ಪೊಲೀಸ್ ಅಧಿಕಾರಿಗಳು ಉಕ್ರೇನಿಯನ್ ನಿರಾಶ್ರಿತರ ಮಕ್ಕಳೊಂದಿಗೆ ಆಡುತ್ತಾ ನಗುತ್ತಿರುವ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಸೆಳೆದಿದೆ.

ಉಕ್ರೇನ್​ ನಿರಾಶ್ರಿತರ ಮಕ್ಕಳೊಂದಿಗೆ ಆಟವಾಡಿದ ಸ್ಲೋವಾಕ್ ಪೊಲೀಸ್ ಅಧಿಕಾರಿಗಳು: ವಿಡಿಯೋ ವೈರಲ್​
ಮಕ್ಕಳೊಂದಿಗೆ ಆಟವಾಡಿದ ಸ್ಲೋವಾಕ್ ಪೊಲೀಸ್ ಅಧಿಕಾರಿಗಳು
Follow us on

ಉಕ್ರೇನ್​ ಮೇಲಿನ ರಷ್ಯಾ ಯುದ್ಧ (Ukraine Russia War)  ಮುಂದುವರೆದಿದೆ. ಉಕ್ರೇನ್‌ನಿಂದ ರಷ್ಯಾದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಯಾವುದೇ ಲಕ್ಷಣಗಳಿಲ್ಲದೆ, ದೇಶದ ಪರಿಸ್ಥಿತಿಯು ಪ್ರಪಂಚದಾದ್ಯಂತ ಜನರನ್ನು ಗಾಬರಿಗೊಳಿಸಿದೆ. ನಗರಗಳು ನಾಶವಾಗಿವೆ, ಮಕ್ಕಳು ಅನಾಥರಾಗಿದ್ದಾರೆ ಮತ್ತು ನಿರಾಶ್ರಿತರು ಅನಿಶ್ಚಿತ ಮತ್ತು ಅಜ್ಞಾತ ಜೀವನವನ್ನು ಪ್ರಾರಂಭಿಸಲು ಗಡಿ ಹಳ್ಳಿಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ- ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಉಕ್ರೇನ್‌ನ ಭೂದೃಶ್ಯವು ಈಗ ಅಕ್ಷರಶಃ ಬೂದಿಯಾಗಿದೆ.


ಈ ನಡುವೆ ಸ್ಲೋವಾಕ್ ಗಣರಾಜ್ಯದ ಪೊಲೀಸರ ಅಧಿಕೃತ ಫೇಸ್‌ಬುಕ್ ಪ್ರೊಫೈಲ್‌ನಿಂದ ಹಂಚಿಕೊಂಡ ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇಬ್ಬರು ಸ್ಲೋವಾಕ್ ಪೊಲೀಸ್ ಅಧಿಕಾರಿಗಳು ಉಕ್ರೇನಿಯನ್ ನಿರಾಶ್ರಿತರ ಮಕ್ಕಳೊಂದಿಗೆ ಆಡುತ್ತಾ ನಗುತ್ತಿರುವ ಫೋಟೋಗಳು ನೆಟ್ಟಿಗರನ್ನು ಸೆಳೆದಿದೆ. ನಿಷ್ಕಲ್ಮಶ ನಗುವನ್ನು ಹೊತ್ತ ಮಕ್ಕಳೊಂದಿಗೆ, ಜಗತ್ತಿನ ಅನಾಹುತಗಳ ಪರಿವೆಯಲ್ಲಿದೆ ತಮ್ಮದೇ ಪ್ರಪಂಚದಲ್ಲಿ ಆರಾಮವಾಗಿರುವ ಮಕ್ಕಳೊಂದಿಗೆ ಸೈನಿಕರು ಕೂಡ ಮಕ್ಕಳಾಗಿ ಕಾಣಿಸಿಕೊಂಡ ಫೋಟೋ, ವಿಡಿಯೋ ಇದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋಕ್ಕೆ ಶೀಘ್ರದಲ್ಲಿಯೇ ರಷ್ಯಾ ಉಕ್ರೇನಿನ ಮೇಲಿನ ಹಿಡಿತವನ್ನು ಸಡಿಲಿಸಲಿದೆ. ಎಲ್ಲವೂ ಸರಿಯಾಗಲಿದೆ. ಮಾನವೀಯತೆ ಗೆಲ್ಲಲಿದೆ ಎಂದು ಕ್ಯಾಪ್ಷನ್​ ನೀಡಲಾಗಿದೆ. ಸದ್ಯ ಇದರ ಫೋಟೋ,ವಿಡಿಯೋಗಳು ಜಗತ್ತಿನಾದ್ಯಂತ ವೈರಲ್​ ಆಗಿವೆ. ದೇಶ ಕಾಯುವ ಮಹತ್ತರ ಜವಾಬ್ದಾರಿ, ಒತ್ತಡ ಹೆಗಲಮೇಲಿದ್ದರೂ ಮಕ್ಕಳನ್ನು ಕಂಡು ನಗುಮೊಗ ತೋರುವ ಸೈನಿಕರ ಒಳ್ಳೆಯತನಕ್ಕೆ ಪ್ರಪಂಚದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

ತಂದೂರಿ ಫ್ರುಟ್​ ದೋಸೆ ನೋಡಿ ನೋ ಥ್ಯಾಂಕ್ಸ್​ ಎಂದ ನೆಟ್ಟಿಗರು: ವಿಡಿಯೋ ವೈರಲ್​

Published On - 5:01 pm, Sun, 20 March 22