Viral Video: ಹಾವಿಗೆ ಮುತ್ತಿಡಲು ಹೋಗಿ ತುಟಿ ಕಚ್ಚಿಸಿಕೊಂಡ ಯುವಕ

ಮನುಷ್ಯರ ಮನಸ್ಸನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಇನ್ನು ಪ್ರಾಣಿಗಳು ಯಾವಾಗ ಹೇಗಿರುತ್ತವೆ ಎಂದು ಅರಿಯಲು ಸಾಧ್ಯವೇ. ಕೆಲವರು ವಿಡಿಯೋಗಳಿಗೋಸ್ಕರ ತಮ್ಮ ಜೀವವನ್ನೇ ಅಪಾಯಕ್ಕೆ ಸಿಲುಕಿಸುತ್ತಾರೆ. ಹಾವಿಗೆ ಮುತ್ತಿಡಲು ಹೋದವನ ತುಟಿಗೆ ಹಾವು(Snake) ಕಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಕಾಡಿನಲ್ಲಿ ನದಿಯ ದಡದಲ್ಲಿ ವ್ಯಕ್ತಿಯೊಬ್ಬ ಆರಾಮವಾಗಿ ಕುಳಿತಿದ್ದಾರೆ, ಕೈಯಲ್ಲಿ ಅಪಾಯಕಾರಿ ಹಾವನ್ನು ಹಿಡಿದಿದ್ದಾರೆ. ಆ ವ್ಯಕ್ತಿ ಹಾವಿಗೆ ಮುತ್ತಿಡಲು ತನ್ನ ಮುಖವನ್ನು ಅದರ ಹತ್ತಿರ ತೆಗೆದುಕೊಂಡು ಹೋಗಿದ್ದಾನೆ, ಕಣ್ಣು ಮಿಟುಕಿಸುವಷ್ಟರಲ್ಲಿ ಅದು ಆತನ ತುಟಿಯನ್ನು ಕಚ್ಚಿದೆ.

Viral Video: ಹಾವಿಗೆ ಮುತ್ತಿಡಲು ಹೋಗಿ ತುಟಿ ಕಚ್ಚಿಸಿಕೊಂಡ ಯುವಕ
ಹಾವು

Updated on: Jan 15, 2026 | 12:39 PM

ಮನುಷ್ಯರ ಮನಸ್ಸನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಇನ್ನು ಪ್ರಾಣಿಗಳು ಯಾವಾಗ ಹೇಗಿರುತ್ತವೆ ಎಂದು ಅರಿಯಲು ಸಾಧ್ಯವೇ. ಕೆಲವರು ವಿಡಿಯೋಗಳಿಗೋಸ್ಕರ ತಮ್ಮ ಜೀವವನ್ನೇ ಅಪಾಯಕ್ಕೆ ಸಿಲುಕಿಸುತ್ತಾರೆ. ಹಾವಿಗೆ ಮುತ್ತಿಡಲು ಹೋದವನ ತುಟಿಗೆ ಹಾವು(Snake) ಕಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಾಡಿನಲ್ಲಿ ನದಿಯ ದಡದಲ್ಲಿ ವ್ಯಕ್ತಿಯೊಬ್ಬ ಆರಾಮವಾಗಿ ಕುಳಿತಿದ್ದಾರೆ, ಕೈಯಲ್ಲಿ ಅಪಾಯಕಾರಿ ಹಾವನ್ನು ಹಿಡಿದಿದ್ದಾರೆ. ಆ ವ್ಯಕ್ತಿ ಹಾವಿಗೆ ಮುತ್ತಿಡಲು ತನ್ನ ಮುಖವನ್ನು ಅದರ ಹತ್ತಿರ ತೆಗೆದುಕೊಂಡು ಹೋಗಿದ್ದಾನೆ, ಕಣ್ಣು ಮಿಟುಕಿಸುವಷ್ಟರಲ್ಲಿ ಅದು ಆತನ ತುಟಿಯನ್ನು ಕಚ್ಚಿದೆ.

ವಿಡಿಯೋದಲ್ಲಿ ಹಾವಿನ ಹಲ್ಲುಗಳು ಆತನ ತುಟಿಯಲ್ಲಿ ಆಳವಾಗಿ ಇಳಿದಿರುವನ್ನು ಕಾಣಬಹುದು.
ಹೇಗೋ ಹಾವನ್ನು ತುಟಿಯಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಡಿಯೋ

ಆ ವ್ಯಕ್ತಿ ಜೆಜಾಕ್ ಸಿ ಆ್ಯಡೆನ್ ಇಂತಹ ಅಪಾಯಕಾರಿ ಮತ್ತು ಆಘಾತಕಾರಿ ವೀಡಿಯೊಗಳಿಗಾಗಿಯೇ ಹೆಸರುವಾಸಿಯಾಗಿದ್ದಾರೆ. ಅವರು @jejaksiaden ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಅಕೌಂಟ್​​ನಲ್ಲಿ ಲಕ್ಷಾಂತರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

 

ವರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:36 pm, Thu, 15 January 26