AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಸಿವು ಎಂದ ವೃದ್ಧನಿಗೆ ಊಟ ಕೊಡಿಸಿ ಮಾನವೀಯತೆ ಮೆರೆದ ಯುವಕ

ಕೆಲವರ ಒಳ್ಳೆತನವು ನಡೆ ನುಡಿಯಲ್ಲಿ ವ್ಯಕ್ತವಾಗುತ್ತದೆ. ಹೌದು, ಹಸಿವು ಎಂದವರಿಗೆ, ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಯುವಕನೊಬ್ಬ ವೃದ್ಧನ ಹಸಿವು ನೀಗಿಸಿದ್ದಾನೆ. ಈ ಯುವಕನ ಒಳ್ಳೆತನಕ್ಕೆ ಸಾಕ್ಷಿಯಾಗಿರುವ ಈ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಹಸಿವು ಎಂದ ವೃದ್ಧನಿಗೆ ಊಟ ಕೊಡಿಸಿ ಮಾನವೀಯತೆ ಮೆರೆದ ಯುವಕ
ವೃದ್ಧImage Credit source: Instagram
ಸಾಯಿನಂದಾ
|

Updated on: Jan 15, 2026 | 3:22 PM

Share

ಹಸಿವು (hunger) ಸಾವಿಗಿಂತಲೂ ಕ್ರೂರಿ. ಹೀಗಾಗಿ ಕೆಲವರು ತಮ್ಮ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಇತರರ ಮುಂದೆ ಕೈಯೊಡ್ಡಿ ಬೇಡುತ್ತಾರೆ. ಇನ್ನು ಕೆಲವರು ಕಸದ ತೊಟ್ಟಿಗೆ ಬಿಸಾಡಿದ ಹಳಸಿದ ಆಹಾರವನ್ನೇ ಹೆಕ್ಕಿ ತಿಂದು ಹಸಿವನ್ನು ನೀಗಿಸಿಕೊಳ್ಳುತ್ತಾರೆ. ಈ ದೃಶ್ಯವನ್ನೆಲ್ಲಾ ನೋಡುವಾಗ ಕಣ್ಣಂಚಲಿ ನೀರು ಬರುತ್ತದೆ. ಆದರೆ ಇಲ್ಲೊಬ್ಬ ಯುವಕ (young man) ತನ್ನ ಒಳ್ಳೆ ಮನಸ್ಸಿನಿಂದಲೇ ನೆಟ್ಟಿಗರ ಹೃದಯ ಗೆದ್ದುಕೊಂಡಿದ್ದಾನೆ. ಹಸಿವು ಎಂದ ವೃದ್ಧನಿಗೆ ತಿನ್ನಲು ಊಟ ಕೊಟ್ಟು ಪುಣ್ಯಾತ್ಮ ಎನಿಸಿಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

street_healear_somu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅರಕಲು ಬಟ್ಟೆ ತೊಟ್ಟ ವೃದ್ಧನೊಬ್ಬ ಯುವಕನ ಬೈಕನ್ನು ನಿಲ್ಲಿಸಿ ಊಟ ಕೊಡು ಕೈ ಸನ್ನೆ ಮಾಡುತ್ತಿರುವುದನ್ನು ಕಾಣಬಹುದು. ಇದನ್ನರಿತ ಯುವಕನು ಈ ಹಿರಿ ಜೀವಕ್ಕೆ ಊಟ ಕೊಡಿಸಲು ಸಣ್ಣದಾದ ಹೋಟೆಲ್‌ಗೆ ಹೋಗುವುದನ್ನು ಕಾಣಬಹುದು. ಯುವಕನು ಇಂತಿಷ್ಟು ಹಣ ನೀಡಿ ಹೋಟೆಲ್ ಮಾಲೀಕಳ ಬಳಿ ಈ ಪಾರ್ಸೆಲ್‌ನ್ನು ವೃದ್ಧನಿಗೆ ಕೊಡಲು ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾನೆ. ಈ ವಿಡಿಯೋದ ವಯೋವೃದ್ಧನು ಯುವಕನಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಕೆಲಸ ಎಂದರೆ, ಇನ್ನೊಬ್ಬರು, ನಿಮ್ಮ ಕುಟುಂಬ ನೂರಾರು ಕಾಲ ಚೆನ್ನಾಗಿರಲಿ ಎಂದು ಕಾಮೆಂಟ್ ನಲ್ಲಿ ಹಾರೈಸಿದ್ದಾರೆ. ಮತ್ತೊಬ್ಬರು, ಸೂಪರ್ ಬ್ರೋ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​
ದರ್ಶನ್ ಗೈರು ಹಾಜರಿ: ಸಂಕ್ರಾಂತಿ ಆಚರಣೆಗೆ ವಿಜಯಲಕ್ಷ್ಮಿ ಮುಂದಾಳತ್ವ
ದರ್ಶನ್ ಗೈರು ಹಾಜರಿ: ಸಂಕ್ರಾಂತಿ ಆಚರಣೆಗೆ ವಿಜಯಲಕ್ಷ್ಮಿ ಮುಂದಾಳತ್ವ
ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್
ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್
ಮೈಸೂರು ಮಹಾಬಲೇಶ್ವರ ದೇವಸ್ಥಾನದಲ್ಲಿ ಕಳ್ಳತನ
ಮೈಸೂರು ಮಹಾಬಲೇಶ್ವರ ದೇವಸ್ಥಾನದಲ್ಲಿ ಕಳ್ಳತನ