ಬರ್ತಡೇಗೆ ಮೊಬೈಲ್​ ಗಿಪ್ಟ್​ ನೀಡಿದ ಮಗ: ಖುಷಿಯಿಂದ ಕಣ್ಣೀರಾದ ತಾಯಿಯ ವಿಡಿಯೋ ವೈರಲ್​

ಮಗ ತನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ ಮೊಬೈಲ್​ ನೋಡಿ ತಾಯಿಯೊಬ್ಬಳು ಸಂತಸಪಟ್ಟ ಕ್ಷಣದ ವಿಡಿಯೋ ವೈರಲ್​ ಆಗಿದೆ. 

ಬರ್ತಡೇಗೆ ಮೊಬೈಲ್​ ಗಿಪ್ಟ್​ ನೀಡಿದ ಮಗ: ಖುಷಿಯಿಂದ ಕಣ್ಣೀರಾದ ತಾಯಿಯ ವಿಡಿಯೋ ವೈರಲ್​
ವಿಡಿಯೋದಿಂದ ಸೆರೆಹಿಡಿದ ಚಿತ್ರ
Updated By: Pavitra Bhat Jigalemane

Updated on: Jan 10, 2022 | 5:49 PM

ಸದಾ ಕಾಲ ಮಕ್ಕಳ ನಗುವಿನಲ್ಲಿಯೇ ತಂದೆ ತಾಯಿಗಳು ಖುಷಿ ಕಾಣುತ್ತಾರೆ. ಅದೇ ರೀತಿ ಮಕ್ಕಳಿಂದ ಸಿಗುವ ಸಣ್ಣ ಖುಷಿಯನ್ನೂ ಬೆಟ್ಟದಷ್ಟು ಅನುಭವಿಸುತ್ತಾರೆ. ಮಕ್ಕಳ ಏಳಿಗೆಗಾಗಿ ಸದಾ ಶ್ರಮಿಸುವ ಜೀವಕ್ಕೆ ಒಂದು ಸಣ್ಣ ಉಡುಗೊರೆಯೂ ಅಷ್ಟೇ ಮುಖ್ಯವೆನಿಸುತ್ತದೆ. ಇಲ್ಲೊಂದು ತಾಯಿ  ಮಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಮನ ಸೆಳೆದಿದೆ. ಮಗ ತನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ ಮೊಬೈಲ್​ ನೋಡಿ ತಾಯಿಯೊಬ್ಬಳು ಸಂತಸಪಟ್ಟ ಕ್ಷಣದ ವಿಡಿಯೋ ವೈರಲ್​ ಆಗಿದೆ. 

ವಿಡಿಯೋದಲ್ಲಿ ಮೊದಲು ಮಹಿಳೆಯೊಬ್ಬಳು ತನ್ನ ಮಗನಿಂದ ಉಡುಗೊರೆಯ ಚೀಲವನ್ನು ತೆಗೆದುಕೊಳ್ಳುತ್ತಾಳೆ. ನಂತರ ಅದನ್ನು ತೆಗೆದ ತಕ್ಷಣ ಇನ್ನೊಂದು ಪುಟ್ಟ ಬ್ಯಾಗ್​ ಸಿಗುತ್ತದೆ. ಅದನ್ನು ಓಪನ್​ ಮಾಡಿದಾಗ ಅದರಲ್ಲಿದ್ದ ವೊಬೈಲ್​ ನೋಡಿ ಆಕೆಯ ಸಂತಸ ಮುಗಿಲುಮುಟ್ಟಿತ್ತು. ಈ ವಿಡಿಯೋವನ್ನು ವಿಘ್ನೇಶ್​ ಎನ್ನುವ ವ್ಯಕ್ತಿ  ಹಂಚಿಕೊಂಡಿದ್ದಾರೆ. ವಿಡಿಯೋಕ್ಕೆ, 8800 ರೂ. ಗಳ ಮೊಬೈಲ್​ ನೋಡಿ ಅಮ್ಮನ ಪ್ರತಿಕ್ರಿಯೆ ಮಾತ್ರ ಬೆಲೆಕಟ್ಟಲು ಸಾಧ್ಯವಾಗದ ರೀತಿಯಿದೆ ಎಂದು ತಮಿಳಿನಲ್ಲಿ ಕ್ಯಾಪ್ಷನ್​ ನೀಡಲಾಗಿದೆ.


ವಿಡಿಯೋ ಹಂಚಿಕೊಂಡ ಬಳಿಕ ಈ ವರೆಗೆ 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಸಾವಿರಾರು ಮಂದಿ ಸಂತಸ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದಾರೆ. ಇನ್ನು ನಟ ಆರ್​ ಮಾಧವನ್​ ಕೂಡ ವಿಡಿಯೋ ಹಂಚಿಕೊಂಡು ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್​ ವೈರಲ್​ ಆಗಿದ್ದು, ಅಮ್ಮನಿಗೆ ಸರ್ಪೈಸ್​ ಗಿಫ್ಟ್​ ನೀಡಿದ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಒಂದೇ ದಿನ ಎರಡು ಅಪಘಾತದಿಂದ ಪಾರಾದ ಬೈಕ್​ ಸವಾರ: ವಿಡಿಯೋ ವೈರಲ್​