ಟೇಕ್​ ಆಫ್​ ಆಗುವ ಮೊದಲೇ ರೈಲ್ವೆ ಹಳಿಯ ಮೇಲೆ ಬಿದ್ದ ವಿಮಾನ: ಪೊಲೀಸರ ಸಮಯ ಪ್ರಜ್ಞೆಯಿಂದ ಬದುಕುಳಿದ ಪೈಲೆಟ್​

ಟೇಕ್​ ಆಫ್​ ಆಗುವ ಮೊದಲೇ ರೈಲ್ವೆ ಹಳಿಯ ಮೇಲೆ ಬಿದ್ದ ವಿಮಾನ: ಪೊಲೀಸರ ಸಮಯ ಪ್ರಜ್ಞೆಯಿಂದ ಬದುಕುಳಿದ ಪೈಲೆಟ್​
ವಿಡಿಯೋದಿಂದ ಸೆರೆಹಿಡಿದ ಚಿತ್ರ

ಟೇಕ್​ ಆಪ್​ ಆಗುವಾಗ ತಾಂತ್ರಿಕ ಸಮಸ್ಯೆ ಆದ ಕಾರಣ ವಿಮಾನ ಹಾರದೆ ರೈಲ್ವೆ  ಹಳಿಯ ಮೇಲೆ ಬಿದ್ದಿದೆ. ಅದೇ ಸಮಯದಲ್ಲಿ ರೈಲು ಬರುತ್ತಿರುವುದನ್ನು ಕಂಡು ಪೊಲೀಸರು ಪೈಲಟ್​ ಅನ್ನು ರಕ್ಷಿಸಿದ್ದಾರೆ.

TV9kannada Web Team

| Edited By: Pavitra Bhat Jigalemane

Jan 10, 2022 | 4:30 PM

ವಿಮಾನವೊಂದು ಟೆಕ್​ ಆಫ್​ ಆಗದೆ ರೈಲು ಹಳಿಯ ಮೇಲೆ ಬಿದ್ದಿದ್ದು ರೈಲು ಬರುವ ಕೆಲವೇ ಕ್ಷಣಗಳ ಮೊದಲು​ ಗಾಯಗೊಂಡ  ಪೈಲಟ್ ಅನ್ನು ರಕ್ಷಿಸಿದ ಘಟನೆ ಲಾಸ್​ ಎಂಜಲೀಸ್​ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋ ಬಾಡಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಭಯಾನಕ ಆಪಘಾತದ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಟೇಕ್​ ಆಪ್​ ಆಗುವಾಗ ತಾಂತ್ರಿಕ ಸಮಸ್ಯೆ ಆದ ಕಾರಣ ವಿಮಾನ ಹಾರದೆ ರೈಲ್ವೆ  ಹಳಿಯ ಮೇಲೆ ಬಿದ್ದಿದೆ. ಅದೇ ಸಮಯದಲ್ಲಿ ರೈಲು ಬರುತ್ತಿರುವುದನ್ನು ಕಂಡು ಪೊಲೀಸರು ಪೈಲಟ್​ ಅನ್ನು ರಕ್ಷಿಸಿದ್ದಾರೆ. ಪತನವಾದ ವಿಮಾನದಿಂದ ಗಾಯಗೊಂಡ ಪೈಲೆಟ್​ಅನ್ನು ಪೊಲೀಸರು ಹೊರಗೆ ಎಳದು ತಂದಿದ್ದಾರೆ. ಈ ವೇಳೆ ಆತ ಗೋ ಗೋ ಎಂದು ಕೂಗಿದ್ದಾರೆ. ಪೈಲೆಟ್​ಅನ್ನು ರಕ್ಸಿಸಿದ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ ರೈಲ್ವೆ ಹಳಿಯ ಮೇಲೆ ಸಾಯಬೇಕೆಂದು ನಿಂತಿದ್ದ ವ್ಯಕ್ತಿಗೆ ಗುದ್ದದೆ ರೈಲನ್ನು ನಿಲ್ಲಿಸಿ ಶ್ಲಾಘನೆ ಪಡೆದಿದ್ದರು. ಇದೀಗ ಗಾಯಗೊಂಡ ಪೈಲೆಟ್​​ನ ಪ್ರಾಣ ಉಳಿಸಿದ ಪೊಲೀಸರ ಕರ್ತವ್ಯ ನಿಷ್ಠೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಗಾಯಗೊಂಡ ಪೈಲೆಟ್ ಅನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ  ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ:

Video: ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಬಿದ್ದು ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಕರಾವಳಿ ಪೊಲೀಸರು

Follow us on

Related Stories

Most Read Stories

Click on your DTH Provider to Add TV9 Kannada