ಸೋಶಿಯಲ್ ಮೀಡಿಯಾ( Social Media) ಗಳಲ್ಲಿ ಪ್ರತೀ ನಿಮಿಷಕ್ಕೆ ಲಕ್ಷಾಂತರ ಹೊಸ ಹೊಸ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ನಿಮ್ಮ ಕಣ್ಣಲ್ಲಿ ಕಣ್ಣೀರು ಬರಿಸುವದಂತೂ ಖಂಡಿತಾ. ಅಂತದ್ದೇ ವಿಡಿಯೋ ಒಂದು ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಹೌದು ತಾಯಿ ಮಗನ ಭಾವನಾತ್ಮಕ ಬಂಧದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಕರಾವಳಿ ಭಾಗದ ಮೀನು ಮಾರುವ ತಾಯಿಯೊಬ್ಬರ ಮಗ 3ವರ್ಷದ ಬಳಿಕ ಊರಿಗೆ ಬಂದು ತಾಯಿಗೆ ಸರ್ಪ್ರೈಸ್ ಕೊಟ್ಟ ವಿಡಿಯೋ ಇದೀಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಆ ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ: ತನ್ನ ಮದುವೆಯಾಯಿತು ಎಂದು ಈತ ಯಾರಿಗೆಲ್ಲ ಹೇಳುತ್ತಿದ್ದಾನೆ, ಈತನ ಸ್ನೇಹಿತರು ಯಾರೆಲ್ಲ ನೋಡಿ
ಕುಂದಾಪುರದ ರೋಹಿತ್ ಎಂಬವರು 3ವರ್ಷದ ಬಳಿಕ ಊರಿಗೆ ಬಂದು ತನ್ನ ತಾಯಿ ಮೀನು ಮಾರುವ ಸ್ಥಳಕ್ಕೆ ಅಪರಿಚಿತರಂತೆ ಅಂದರೆ ಮುಖವನ್ನು ಕರವಸ್ತ್ರದಿಂದ ಮುಚ್ಚಿ ಜೊತೆಗೆ ಕೂಲಿಂಗ್ ಗ್ಲಾಸ್ ಧರಿಸಿ ಮೀನು ಖರೀದಿಸಲು ಗ್ರಾಹಕರಂತೆ ಹೋಗಿದ್ದಾರೆ. ಕೆಲ ಹೊತ್ತಿನ ವರೆಗೆ ತಾಯಿಗೆ ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಮಗನ ಧ್ವನಿ ಕೇಳುತ್ತಿದ್ದಂತೆ ತನ್ನ ಕರುಳಿನ ಕುಡಿ ಎಂದು ತಿಳಿದಿದ್ದು, 3 ವರ್ಷಗಳ ಬಳಿಕ ಮಗನ ಕಂಡು ಬಿಗಿಯಾದ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ ತಾಯಿಯ ಭಾವನಾತ್ಮಕ ವಿಡಿಯೋ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:28 pm, Fri, 24 May 24