Barbie: ಗುಲಾಬಿ ಜ್ವರ ಇದೀಗ ತಾತ್ಕಾಲಿಕವಾಗಿ ಮೆಲ್ಲಗೆ ಕೆಂಪಿಗೆ ತಿರುಗಿದ ಲಕ್ಷಣವನ್ನು ಹೊಮ್ಮಿಸುತ್ತಿದೆ. ಮೇಲಿನ ಚಿತ್ರವನ್ನು ನೋಡಿದಿರಲ್ಲ? ಅಕಸ್ಮಾತ್ ಬಾರ್ಬಿ ಏನಾದರೂ ದಕ್ಷಿಣ ಭಾರತದವಳಾಗಿದ್ದರೆ ಹೇಗಿರುತ್ತಿತ್ತು… ಎಂಬ ಕಲ್ಪನೆಯನ್ನು ಸಂಗೀತದ ಮೂಲಕ ಅನಾವರಣಗೊಳಿಸಿದ್ದಾರೆ ಕರ್ನಾಟಕ ಸಂಗೀತ ಕಲಾವಿದ ಮಹೇಶ್ ರಾಘವನ್. 1997ರಲ್ಲಿ ಬಿಡುಗಡೆಯಾದ ಬಾರ್ಬಿ ಗರ್ಲ್ (Barbie Girl- Aqua) ಹಾಡಿಗೆ ಟ್ವಿಸ್ಟ್ ನೀಡಿ ಬಾರ್ಬಿ ಟ್ರೆಂಡ್ಗೆ ಈ ಮೂಲಕ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ ಅವರು.
I’m a Barbie girl in a Barbie world. Life in plastic, it’s fantastic. You can brush my hair, undress me everywhere. Imagination, life is your creation; ಈ ಹಾಡನ್ನು ಕೇಳಿದ ನೆನಪಿದೆಯಲ್ಲವೆ? ಕೆಲವರು ನರ್ಸರಿಯಲ್ಲಿ, ಶಾಲೆಯಲ್ಲಿ, ಕಾಲೇಜಿನಲ್ಲಿ, ಪಾರ್ಟಿಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರಬಹುದು. ಈಗಲೂ ಈ ಹಾಡು ಎವರ್ಗ್ರೀನ್! ಕಲಾವಿದ ಮಹೇಶ್ ರಾಘವನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಹಾಡನ್ನು ಕರ್ನಾಟಕ ಸಂಗೀತಕ್ಕೆ ರೂಪಾಂತರಿಸಿದ್ದಾರೆ. ಸುಮಾರು 4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದು ಸುಮಾರು 2.8 ಲಕ್ಷ ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಈ ಪ್ರಯೋಗವನ್ನು ತಮಿಳು ಮತ್ತು ಮಲಯಾಳಂ ಸಾಹಿತ್ಯದೊಂದಿಗೆ ಮಾಡಿದರೆ ಕೇಕ್ನಲ್ಲಿರುವ ಚೆರ್ರಿಯಂತೆ ಅದ್ಭುತವಾಗಿರುತ್ತದೆ ಎಂದಿದ್ದಾರೆ ಒಬ್ಬರು. ನೀವು ಅತ್ಯಂತ ಪ್ರತಿಭಾವಂತ ಮತ್ತು ಸೃಜನಶೀಲ ಕಲಾವಿದರು, ನಿಮಗೆ ಸಾಕಷ್ಟು ಅವಕಾಶಗಳು ಸಿಗಬೇಕು ಎಂದು ಹಾರೈಸುವೆ ಎಂದಿದ್ದಾರೆ ಮತ್ತೊಬ್ಬರು. ಅದ್ಭುತ! ಇಂಥ ಪ್ರಯೋಗವನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ, ಈ ಭಾರತೀಯ ಬಾರ್ಬಿ ವರ್ಷನ್ ಬಹಳ ಆಪ್ತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಇದು ನಮ್ಮ ಕರ್ನಾಟಕ ಸಂಗೀತದ ಸೌಂದರ್ಯ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral: ರೆಸ್ಟ್ ಲೈಕ್ ಬಾರ್ಬಿ; ಇದೀಗ ಶವಪೆಟ್ಟಿಗೆಗಳಿಗೂ ಹರಡಿದ ಗುಲಾಬಿ ಜ್ವರ! ನೋಡಿ ಈ ವಿಡಿಯೋ
ಬಾರ್ಬಿಯಂತೆ ಶವಪೆಟ್ಟಿಗೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ! ಎಂಬ ವರದಿಯನ್ನು ಓದಿ ಸ್ವಲ್ಪ ಸುಸ್ತಾಗಿದ್ದಿರಲ್ಲವೆ? ಈಗ ಈ ಹಾಡು ಕೇಳಿ ಚೈತನ್ಯ ಪಡೆದುಕೊಳ್ಳಿ. ಈ ಗುಲಾಬಿ ಜ್ವರ ಇನ್ನೂ ಎಷ್ಟು ದಿನ ಇರುತ್ತದೆ ಮತ್ತು ಏನೆಲ್ಲ ರೂಪಾಂತರಗಳನ್ನು ಪಡೆದಕೊಳ್ಳುತ್ತದೆ ಎಂದು.
ಏನಂತೀರಿ ನೀವು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ