ವಿದೇಶಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಆಮೇಲೇನಾಯ್ತು?

ಶ್ರೀಲಂಕಾದಲ್ಲಿ ವಿದೇಶಿ ಮಹಿಳೆಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ವಿಡಿಯೋ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ನ್ಯೂಜಿಲೆಂಡ್ ಮಹಿಳೆ ಜತೆಗೆ ವ್ಯಕ್ತಿಯೊಬ್ಬ ಅನುಚಿತವಾಗಿ ನಡೆದುಕೊಂಡಿದ್ದಾನೆ. ಪ್ಯಾಂಟ್​​​ ಜಾರಿಸಿ, ತನ್ನ ಗುಪ್ತಾಂಗವನ್ನು ಮಹಿಳೆಗೆ ತೋರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ವಿಡಿಯೋವನ್ನು ಇನ್ಸ್ಟಾಗ್ರಾಮ್​​ನಲ್ಲಿ ಮಹಿಳೆ ಹಂಚಿಕೊಂಡಿದ್ದಾರೆ.

ವಿದೇಶಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಆಮೇಲೇನಾಯ್ತು?
ವೈರಲ್​ ವಿಡಿಯೋ

Updated on: Nov 19, 2025 | 4:01 PM

ವಿದೇಶಿ ಮಹಿಳೆಯ (Foreign Woman) ಮುಂದೆ ವ್ಯಕ್ತಿಯೊಬ್ಬ ವಿಕೃತ ವರ್ತನೆ ತೋರಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಇದೀಗ ವಿಡಿಯೋ ನೋಡಿ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದೇಶದಿಂದ ಬರುವ ಮಹಿಳೆಯರು ಒಂದು ದೇಶದ ಆಚರಣೆ, ಸಂಸ್ಕೃತಿ, ಇದರ ಜತೆಗೆ ಅಲ್ಲಿನ ಜನರ ನಡವಳಿಕೆಗಳನ್ನು ನೋಡಿ ಬಂದಿರುತ್ತಾರೆ. ಆದರೆ ಇಂಥಹ ವ್ಯಕ್ತಿಗಳಿಂದ ದೇಶದ ಸಂಸ್ಕೃತಿಗೆ ಅವಮಾನ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಆಟೋದಲ್ಲಿದ್ದ ಒಂಟಿ ವಿದೇಶಿ ಮಹಿಳೆಯ ಮುಂದೆ ಪ್ಯಾಂಟ್​​​ ಜಾರಿಸಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ವಿಡಿಯೋವನ್ನು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆ ನಡೆದಿರುವುದು ಶ್ರೀಲಂಕಾದಲ್ಲಿ. ಇದೀಗ ಆತನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

ಶ್ರೀಲಂಕಾಕ್ಕೆ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದ ಮೋಲ್ಸ್ ಎಂಬ ನ್ಯೂಜಿಲೆಂಡ್ ಮಹಿಳೆ, ಆಟೋ ರಿಕ್ಷಾದಲ್ಲಿ ಶ್ರೀಲಂಕಾದ ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅರುಗಮ್ ಕೊಲ್ಲಿ ಮತ್ತು ಪಾಸಿಕುಡ ಕರಾವಳಿ ರಸ್ತೆಯಲ್ಲಿ ಸ್ವಲ್ಪ ಹೊತ್ತು ನಿಂತಿದ್ದರು. ಇದನ್ನು ನೋಡಿ ವ್ಯಕ್ತಿಯೊಬ್ಬ ಸೂಟ್ಕರ್​​​​​​​​​ನಲ್ಲಿ ಬಂದು, ಮಹಿಳೆಯ ಬಳಿ ಮಾತನಾಡಿದ್ದಾನೆ. ಮೋಲ್ಸ್ ಕೂಡ ಆ ವ್ಯಕ್ತಿಯ ಜತೆಗೆ ಮಾತನಾಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆ ವ್ಯಕ್ತಿ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದಾನೆ. “ನೀನು ಎಲ್ಲಿಗೆ ಹೋಗುತ್ತೀಯಾ, ಸೆಕ್ಸ್ ಮಾಡುವ ಬರ್ತೀಯಾ” ಎಂದೆಲ್ಲ ಕೇಳಿದ್ದಾನೆ. ನಂತರ ಪ್ಯಾಂಟ್​​​ ಜಾರಿಸಿ, ತನ್ನ ಗುಪ್ತಾಂಗವನ್ನು ಮೋಲ್ಸ್​​​ಗೆ ತೋರಿಸಿದ್ದಾನೆ.

ಇದನ್ನೂ ಓದಿ: ನೀವು ಎಲ್ಲಾದರೂ ನಾಲ್ಕು ಕಾಲಿನ ಕೋಳಿ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಇದರಿಂದ ಭಯಗೊಂಡ ಮೋಲ್ಸ್, ಆಟೋ ಡ್ರೈವರ್​ಗೆ​​​ ತಕ್ಷಣ ಇಲ್ಲಿಂದ ಹೋಗುವಂತೆ ಹೇಳಿದ್ದಾರೆ. ಈ ಇಡೀ ಘಟನೆ ಚಾಲಕನ ಸೀಟಿನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.ಮೋಲ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದು, ಈ ರೀತಿ ಬರೆದುಕೊಂಡಿದ್ದಾರೆ. ” ಇಂಥಹ ಕೆಟ್ಟ ಅನುಭವ ಎಂದಿಗೂ ನನಗೆ ಆಗಿಲ್ಲ. ಈ ದೃಶ್ಯವನ್ನು ನೋಡಿದ್ರೆ ನಿಮಗೂ ಭಯ ಆಗುತ್ತದೆ. ಒಂಟಿಯಾಗಿ ಪ್ರಯಾಣಿಸುವುದು ರೋಮಾಂಚನಕಾರಿ ವಿಚಾರ, ಆದರೆ ಅದು ಎಲ್ಲ ಸಮಯದಲ್ಲೂ ಒಳ್ಳೆಯದ್ದಲ್ಲ ಎಂಬುದು ನನಗೆ ಅರ್ಥವಾಗಿದೆ. ಕೆಲವೊಂದು ಬಾರಿ ಇಂತಹ ಅನುಭವಗಳು ಕೂಡ ಆಗಬಹುದು. ಆದರೆ ಇಡೀ ಶ್ರೀಲಂಕಾದ ಜನ ಹೀಗೆ ಎಂದು ಹೇಳುವುದಿಲ್ಲ. ಇಲ್ಲಿನ ಸ್ಥಳೀಯ ಜನರು ಒಳ್ಳೆಯವರು” ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Wed, 19 November 25