Viral Video: ತರಗತಿಯಲ್ಲಿ ಪಾಠ ಮಾಡುವ ವೇಳೆ ಟೀಚರ್​ ಚಿತ್ರವನ್ನೇ ಬಿಡಿಸಿದ ವಿದ್ಯಾರ್ಥಿನಿ; ಆಮೇಲೆ ಆಕೆ ಮಾಡಿದ್ದೇನು ಗೊತ್ತಾ?

| Updated By: Pavitra Bhat Jigalemane

Updated on: Mar 23, 2022 | 12:55 PM

ವಿದ್ಯಾರ್ಥಿನಿಯೊಬ್ಬಳು ಶಿಕ್ಷಕಿ ಪಾಠ ಮಾಡುವ ವೇಳೆ ಹಿಂದೆ ಕುಳಿತು ಅವರದೇ ಚಿತ್ರವನ್ನು ಪೆನ್ಸಿಲಿನಿಂದ ಬಿಡಿಸಿ ತರಗತಿ ಮುಗಿದ ಮೇಲೆ ಅವರಿಗೇ ನೀಡಿದ್ದಾರೆ. ಇದರ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ.

Viral Video: ತರಗತಿಯಲ್ಲಿ ಪಾಠ ಮಾಡುವ ವೇಳೆ ಟೀಚರ್​ ಚಿತ್ರವನ್ನೇ ಬಿಡಿಸಿದ ವಿದ್ಯಾರ್ಥಿನಿ; ಆಮೇಲೆ ಆಕೆ ಮಾಡಿದ್ದೇನು ಗೊತ್ತಾ?
ಶಿಕ್ಷಕಿಯ ಚಿತ್ರ ಬಿಡಿಸಿದ ವಿದ್ಯಾರ್ಥಿನಿ
Follow us on

ಶಾಲೆಗಳಲ್ಲಿ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೀಟಲೆ ಮಾಡುವುದು ಸಹಜ. ಶಿಕ್ಷಕರು (Teachers) ಪಾಠ ಮಾಡುವ ವೇಳೆ ಹಿಂದಿನ ಬೆಂಚಿನಲ್ಲಿ ಕುಳಿತು ತಮ್ಮದೇ ಪ್ರಪಂಚದಲ್ಲಿ ಹರಟೆ ಹೊಡೆಯುವ, ಪ್ರತಿಭೆಗಳ ಅನಾವರಣ ಮಾಡುವ ಸಾಕಷ್ಟು ಜನರನ್ನು ಕಾಣಬಹುದು. ಅದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ (Viral)​ ಆಗಿದೆ. ವಿದ್ಯಾರ್ಥಿನಿಯೊಬ್ಬಳು ಶಿಕ್ಷಕಿ ಪಾಠ ಮಾಡುವ ವೇಳೆ ಹಿಂದೆ ಕುಳಿತು ಅವರದೇ ಚಿತ್ರವನ್ನು ಪೆನ್ಸಿಲಿನಿಂದ ಬಿಡಿಸಿ ತರಗತಿ (Class) ಮುಗಿದ ಮೇಲೆ ಅವರಿಗೇ ನೀಡಿದ್ದಾರೆ. ಇದರ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ.

ಇನ್ಸ್ಟಾಗ್ರಾಮ್​ನಲ್ಲಿ @gondesichandrika_ ಎನ್ನುವ ಹೆಸರಿನ ಭಾರ್ಗವಿ ಎನ್ನುವ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದಾರೆ.  ಆಂಧ್ರಪ್ರದೇಶದ ವೈಜಾಗ್ ಮೂಲದ ಸ್ವಯಂ ಕಲಾವಿದೆಯಾದ ಅವರು ಪೆನಸ್ಇಲ್​ ಸ್ಕೆಚ್​ಗಳನ್ನು ಬಿಡಿಸುತ್ತಾರೆ  ಆಕೆಯ ಕಲಾಕೃತಿಗಳಿಗೆ ಮೀಸಲಾದ ಯೂಟ್ಯೂಬ್ ಚಾನೆಲ್ ಕೂಡ ಇದೆ. ವೀಡಿಯೊವನ್ನು ಮಾರ್ಚ್ 10 ರಂದು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಅಂದಿನಿಂದ ವಿಡಿಯೋ ಭಾರೀ ವೈರಲ್ ಆಗಿದೆ. ಈವರೆಗೆ ವೀಡಿಯೊ ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಇದು 30 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಿಡಿಯೋದಲ್ಲಿ ಶಿಕ್ಷಕಿಯ ಸ್ಕೆಚ್​ ಬಿಡಿಸುವುದನ್ನು ಕಾಣಬಹುದು. ಕೊನೆಯಲ್ಲಿ ಬಿಡಿಸಿದ ಚಿತ್ರವನ್ನು ಶಿಕ್ಷಕಿಗೆ ತೆಗೆದುಕೊಂಡು ಹೋಗಿ ನೀಡಿದಾಗ ಅವರು ಅಚ್ಚರಿಯಿಂದ ತೆಗೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇನ್‌ಸ್ಟಾಗ್ರಾಮ್ ಬಳಕೆದಾರರು ಹೀಗೆ ಬರೆದಿದ್ದಾರೆ, ನಿಮ್ಮ ರೇಖಾಚಿತ್ರವನ್ನು ನೋಡಿ, ಅವರು ತರಗತಿಯಲ್ಲಿ ಅಧ್ಯಯನ ಮಾಡದಿದ್ದಕ್ಕಾಗಿ ನಿಮಗೆ ಬೈಯಲು ಮರೆತಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ಈ ರೀತಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಿವುದು ನಿಜಕ್ಕೂ ವಿಶೇಷವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಮಿಯಾಮಿಯಾ ನೆಲದಲ್ಲಿ ಸಿಖ್​ ವ್ಯಕ್ತಿಯ ಬಿಂದಾಸ್​ ಡ್ಯಾನ್ಸ್​; ವಿಡಿಯೋ ವೈರಲ್​