India Gate: ಐತಿಹಾಸಿಕ ಪ್ರವಾಸಿ ಸ್ಥಳಗಳಿಗೆ ನಮ್ಮ ಭಾರತ ಅತೀ ಪ್ರಸಿದ್ಧ. ಅತಿಥಿ ದೇವೋ ಭವ ಎಂಬ ಟ್ಯಾಗ್ಲೈನ್ನೊಂದಿಗೆ ನಿತ್ಯವೂ ಸಾವಿರಾರು ಜನರನ್ನು ನಮ್ಮ ದೇಶ ಬರಮಾಡಿಕೊಳ್ಳುತ್ತದೆ. ಈ ಸ್ಥಳಗಳ ಪೈಕಿ ಹೊಸದೆಹಲಿಯಲ್ಲಿರುವ ಇಂಡಿಯಾ ಗೇಟ್ ಕೂಡ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ. ದಿನಕ್ಕೆ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ತೆಗೆಸಿಕೊಂಡ ಫೋಟೋಗಳನ್ನು, ಸೆಲ್ಫೀಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಖ್ಯಾತ ಮರಳು ಶಿಲ್ಪಕಲಾವಿದ ಸುದರ್ಶನ ಪಟ್ನಾಯಕ್ ಕೂಡ ಎಲ್ಲರಂತೆ ಈ ಸ್ಥಳಕ್ಕೆ ನಿನ್ನೆ ಭೇಟಿ ನೀಡಿದರು. ನಂತರ ಅವರೂ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಮುಂದೆ? ನೋಡಿ ನೀವೇ.
Happy to visit #IndiaGate #Delhi today but was disheartened to see the garbage lying around. Request authorities to please take action and appeal to people to keep our cities clean especially the sites of national significance. #BeatPlasticPollution pic.twitter.com/36j8psmb4V
ಇದನ್ನೂ ಓದಿ— Sudarsan Pattnaik (@sudarsansand) August 22, 2022
ನೋಡಿದಿರಲ್ಲ ರಸ್ತೆಯುದ್ದಕ್ಕೂ ಹರಡಿಕೊಂಡಿರುವ ಕಸದ ರಾಶಿಯ ಈ ವಿಡಿಯೋ. ‘ಇದು ಇಂಡಿಯಾ ಗೇಟ್. ದೆಹಲಿಗೆ ಭೇಟಿ ನೀಡಲು ಸಂತೋಷವೇನೋ ಆಯಿತು. ಆದರೆ ಈ ಕಸದ ರಾಶಿ ನೋಡಿ ಅತೀವ ನಿರಾಶೆಯಾಯಿತು. ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಗರಗಳನ್ನು ಅದರಲ್ಲೂ ರಾಷ್ಟ್ರೀಯ ಐತಿಹ್ಯವುಳ್ಳ ಮಹಾನಗರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಸುದರ್ಶನ ಮನವಿಯುಕ್ತ ಪೋಸ್ಟ್ ಮಾಡಿದರು.
ತಕ್ಷಣವೇ ಅಧಿಕಾರಿಗಳು ಕ್ರಮ ಕೈಗೊಂಡರು! ಆನಂತರದ ಪೋಸ್ಟ್ ಹಂಚಿಕೊಂಡ ಸುದರ್ಶನ ಧನ್ಯವಾದ ತಿಳಿಸಿದರು.
Thank you so much authorities for quick response. I appeal to people to keep our cities clean especially the sites of national significance. #BeatPlasticPollution https://t.co/zr8OeCi41Y pic.twitter.com/PxZTnN4BW1
— Sudarsan Pattnaik (@sudarsansand) August 22, 2022
ಏನೇ ಸುಧಾರಣೆಯಾಗಬೇಕೆಂದರೂ ಸಾಮಾಜಿಕ ಜಾಲತಾಣದ ಮೂಲಕವೇ ಗಮನ ಸೆಳೆಯಬೇಕು ಎನ್ನುವಂಥ ಡಿಜಿಟಲ್ ಕಾಲದಲ್ಲಿ ನಾವಿದ್ದೇವೆ. ಅಂತೂ ಕೂಡಿಟ್ಟ ಕಸ ಮುಕ್ತಿ ಕಂಡಿತಲ್ಲ. ಒಳ್ಳೆಯದೇ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:55 pm, Tue, 23 August 22