ಬೆಂಗಳೂರಿನ ಕಂಪನಿಯೊಂದು ತನ್ನ ಉದ್ಯೋಗಿಗಳ ಆರೋಗ್ಯ ಕ್ಷೇಮಕ್ಕಾಗಿ ಇಂದು ಆಫೀಸಿಗೆ ಬರಬೇಡಿ, ಮಲಗಿ ವಿಶ್ರಾಂತಿಸಿ ಎಂದು ರಜೆಯನ್ನು ಘೋಷಿಸಿದೆ. ಮಾರ್ಚ್ 17ರಂದು ಅಂತರಾಷ್ಟ್ರೀಯ ನಿದ್ರಾ ದಿನ(World Sleep Day ) ವಾಗಿ ಘೋಷಿಸಲಾಗಿದ್ದು, ಈ ದಿನದ ಅಂಗವಾಗಿ ಈ ಕಂಪೆನಿ ತನ್ನ ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ರಜೆಯನ್ನು ನೀಡಿದೆ. ಕಂಪೆನಿಯ ಸಿಬ್ಬಂದಿಗಳಿಗೆ ಹೆಚ್ಆರ್ ಡಿಪಾರ್ಟ್ಮೆಂಟ್ನಿಂದ ಮೇಲ್ ಬಂದಿದ್ದು, ಸರ್ಪ್ರೈಸ್ ಹಾಲಿಡೇ, ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್ ಎಂದು ಸಂದೇಶವನ್ನು ಕಳುಹಿಸಲಾಗಿದೆ.
Wakefit Solutions ಕಂಪೆನಿಯ ಈ ಸರ್ಪ್ರೈಸ್ ರಜೆಯ ಕುರಿತು ಉದ್ಯೋಗಿಗಳಿಗೆ ಕಳುಹಿಸಲಾದ ಮೇಲ್‌ನ ಸಂದೇಶದ ಸ್ಕ್ರೀನ್‌ಶಾಟ್ ಇದೀಗಾ ಭಾರೀ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಪೋಸ್ಟ್.
Official Announcement ? #sleep #powernap #afternoonnap pic.twitter.com/9rOiyL3B3S
— Wakefit Solutions (@WakefitCo) May 5, 2022
ಇದನ್ನೂ ಓದಿ: ಆರೋಗ್ಯವಂತ ವ್ಯಕ್ತಿ ಎಷ್ಟು ಹೊತ್ತು ನಿದ್ರೆ ಮಾಡಬೇಕು? ತಜ್ಞರು ಹೇಳುವುದೇನು?
ಆರೋಗ್ಯವನ್ನು ಕಾಪಾಡುವಲ್ಲಿ ನಿದ್ರೆ ಎಷ್ಟು ಮುಖ್ಯ. ಇಂದು ನೀವು ನಿಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಈ ವಿಶೇಷ ರಜೆಯನ್ನು ನಿದ್ದೆಗಾಗಿ ಮೀಸಲಿಡಿ. ನಿಮ್ಮನ್ನು ಆರೋಗ್ಯವಾಗಿಡಿ. ವಿಶ್ರಾಂತಿ ಪಡೆಯಲು ಇಂದು ಪರಿಪೂರ್ಣ ಅವಕಾಶವಿದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ.
ಈ ಕಂಪೆನಿಯೂ ಸರ್ಪ್ರೈಸ್ ನೀಡಿದ್ದು, ಇದೇ ಮೊದಲಲ್ಲ. ಕಳೆದ ವರ್ಷ ವಿಶ್ರಾಂತಿಸುವ ಹಕ್ಕು (Right to Nap policy) ನೀಡಿದ್ದು, ಅದು ಎಲ್ಲಾ ಉದ್ಯೋಗಿಗಳಿಗೆ ತಮ್ಮ ಕೆಲಸದ ಸಮಯದಲ್ಲಿ 30 ನಿಮಿಷಗಳ ಕಿರು ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿತು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ :