ಇಂದಿಗೂ ಜಗತ್ತಿನಲ್ಲಿ ರಾಜಪ್ರಭುತ್ವವನ್ನು ಅನುಸರಿಸುವ ಹಲವು ದೇಶಗಳಿವೆ. ಅಲ್ಲಿ ರಾಜರು ತಮ್ಮ ಇಚ್ಛೆಯಂತೆ ಕಾನೂನುಗಳನ್ನು ಮಾಡಿ ದಬ್ಬಾಳಿಕೆಯಿಂದ ಆಡಳಿತ ನಡೆಸುತ್ತಾರೆ. ಅಂತಹ ಒಂದು ಸಾಮ್ರಾಜ್ಯವು ದಕ್ಷಿಣ ಆಫ್ರಿಕಾದ ಮೊಜಾಂಬಿಕ್ ಬಳಿ ಇದೆ. ಇದನ್ನು ಸ್ವಾಜಿಲ್ಯಾಂಡ್, ಇಸ್ವತಿ ಸಾಮ್ರಾಜ್ಯ ಎಂದು ಕರೆಯಲಾಗುತ್ತದೆ. ಈ ಪ್ರದೇಶವನ್ನು Mswati III ಹಲವು ವರ್ಷಗಳಿಂದ ಆಳುತ್ತಿದ್ದಾನೆ. ಈತನ ಮದುವೆಯ ಸಂಬಂಧಿಸಿದ ಆಚರಣೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಇಸ್ವತಿ ಸಾಮ್ರಾಜ್ಯದಲ್ಲಿ ಪ್ರತಿ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಉಮ್ಲಂಗಾ ಹಬ್ಬ ನಡೆಯುತ್ತದೆ. ಈ ಉತ್ಸವದಲ್ಲಿ 10,000ಕ್ಕೂ ಹೆಚ್ಚು ಕನ್ಯೆಯರು ಭಾಗವಹಿಸುತ್ತಾರೆ. ಈ ಕನ್ಯೆಯರು ರಾಜ ಸೇರಿದಂತೆ ಹಬ್ಬ ನೋಡಲು ಬಂದವರ ಮುಂದೆ ಬೆತ್ತಲೆಯಾಗಿ ಡ್ಯಾನ್ಸ್ ಮಾಡಬೇಕು. ನಂತರ ತನಗೆ ಇಷ್ಟವಾದ ಯುವತಿನ್ನು ರಾಜ ಹೊಸ ರಾಣಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾನೆ. ಇಲ್ಲಿಯವರೆಗೆ ಈ ರಾಜನಿಗೆ 16 ಹೆಂಡತಿಯರು ಮತ್ತು 45 ಮಕ್ಕಳಿದ್ದಾರೆ.
ಇದನ್ನೂ ಓದಿ: ಈ ದೇಶದವರು ನಿದ್ದೆಯಲ್ಲಿ ಅಗ್ರಸ್ಥಾನ, ಭಾರತಕ್ಕೆ ಎಷ್ಟನೇ ಸ್ಥಾನ?; ಗ್ಲೋಬಲ್ ಸ್ಲೀಪ್ ಸಮೀಕ್ಷೆಯ ವರದಿ ಇಲ್ಲಿದೆ
ಆದರೆ, ಯಾವುದೇ ಯುವತಿಯರು ಈ ರೀತಿ ಬೆತ್ತಲೆಯಾಗಿ ನೃತ್ಯ ಮಾಡಲು ಒಪ್ಪದಿದ್ದರೆ, ಯುವತಿಯ ಮನೆಯವರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಒಂದೆಡೆ ದೇಶದ ಜನತೆ ಬಡತನ, ಹಸಿವಿನಿಂದ ನರಳುತ್ತಿದ್ದರೆ ಮತ್ತೊಂದೆಡೆ ರಾಜ ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಿದ್ದನೆಂದು ಆರೋಪಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ