Viral: ತಾಂತ್ರಿಕ ದೋಷವೋ ವಂಚನೆಯೋ; ನಿಮ್ಮ ಇತ್ತೀಚಿನ ಸ್ವಿಗ್ಗಿ ಬಿಲ್ ನೋಡಿದ್ದೀರಾ?

|

Updated on: Sep 22, 2023 | 4:35 PM

Swiggy : ಪೈಸೆಗೆ ಪೈಸೆಯನ್ನೂ ಬಿಡದೇ ಗ್ರಾಹಕರಿಂದ ಹಣವನ್ನು ಹೀರುತ್ತಿದೆ. ಇದು ಹಗಲು ದರೋಡೆ ಎಂದು ಲಕ್ಷಾಂತರ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಸ್ವಿಗ್ಗಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದೆಯಾದರೂ ಗೊಂದಲಕಾರಿಯಾಗಿದೆ. ಏನೇ ಇರಲಿ ಸ್ವಿಗ್ಗಿಯಿಂದ ತರಿಸಿದ ಊಟ ಒಂದಷ್ಟು ದಿನವಾದರೂ ಬಾಯಲ್ಲಿ ಕಹಿಯುಂಟು ಮಾಡುವುದು ನಿಜ.

Viral: ತಾಂತ್ರಿಕ ದೋಷವೋ ವಂಚನೆಯೋ; ನಿಮ್ಮ ಇತ್ತೀಚಿನ ಸ್ವಿಗ್ಗಿ ಬಿಲ್ ನೋಡಿದ್ದೀರಾ?
ಪ್ರಾತಿನಿಧಿಕ ಚಿತ್ರ
Follow us on

Swiggy Delivery Charges: ಆಫೀಸಿನಲ್ಲಿ ಮಧ್ಯಾಹ್ನದ ಊಟ ಒಯ್ಯದಿದ್ದಲ್ಲಿ, ಮನೆಯಲ್ಲಿ ಅಡುಗೆ ಬೇಸರವಾಗಿದ್ದಲ್ಲಿ, ಮಕ್ಕಳ ವೀಕೆಂಡಿನ ಪಿಝಾ ಹಂಬಲಿಕೆ ಪೂರೈಸಲು, ಹೀಗೆ ಹಲವು ನೆವ ಹೂಡಿ ನಾವೆಲ್ಲ ಸ್ವಿಗ್ಗಿ (swiggy)ಗೆ ಮೊರೆ ಹೋಗುತ್ತೇವೆ. ಎರಡು ದಶಕಗಳ ಹಿಂದೆ ಗೂಗಲ್, ಹಲವು ವರ್ಷಗಳ ಹಿಂದೆ ಊಬರ್ ಆದಂತೆ ಈ ಕಾಲದಲ್ಲಿ ಸ್ವಿಗ್ಗಿ ಒಂದು ಕ್ರಿಯಾಪದವಾಗಿ ಹೊಮ್ಮಿದೆ. ಈಗಾಗಲೇ ‘ಅನುಕೂಲ’ದ ಹೆಸರಿನಲ್ಲಿ ಸಾಕಷ್ಟು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಸ್ವಿಗ್ಗಿ ಬೆಂಗಳೂರಿನ ಆಟೋದವರಂತೆ ಮೇಲುಳಿದ ಚಿಲ್ಲರೆ ಹಣವನ್ನು ನುಂಗಿ ಹಾಕುತ್ತಿದೆಯೇ? ನಿಮ್ಮ ಇತ್ತೀಚಿನ ಬಿಲ್ ನೋಡಿಕೊಂಡು ಖಾತ್ರಿ ಪಡಿಸಿಕೊಳ್ಳಿ.

ಇದನ್ನೂ ಓದಿ : Viral Video: ‘ಲೈಟ್​ ಹಾರ್ಟ್’; ಈ ಕನ್ನಡಕದಿಂದ ನೋಡಿದರೆ ಮ್ಯಾಜಿಕ್ ಆಗುತ್ತದೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇತ್ತೀಚೆಗೆ X ಬಳಕೆದಾರರೊಬ್ಬರು ಈ ವಿಷಯವನ್ನು ಗಮನಕ್ಕೆ ತಂದ ನಂತರ ಲಕ್ಷಾಂತರ ಜನ ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಇದಂತೂ ಹೇಳೀಕೇಳಿ ಹಗಲುದರೋಡೆ. ಇವರು ಸ್ಪಷ್ಟವಾಗಿ ವಂಚಿಸುತ್ತಿದ್ದಾರೆ. 91 ಪೈಸೆಯ ಮೇಲುಳಿದ 9 ಪೈಸೆಯನ್ನೂ ಇವರು ಬಿಟ್ಟಂತಿಲ್ಲ. 3 ರೂಪಾಯಿ 9 ಪೈಸೆಯನ್ನು ಸ್ವಾಹಾ ಮಾಡುತ್ತಿದ್ದಾರೆ. ಲಕ್ಷಗಟ್ಟಲೇ ಆರ್ಡರ್​​ಗಳು ಎಂದರೆ ಕೋಟಿಗಟ್ಟಲೇ ರೊಕ್ಕದ ಅಪರಾತಪರಾ! ಹನಿಹನಿಗೂಡಿದರೆ ಹಳ್ಳ ಅಷ್ಟೇ ಅಲ್ಲ, ಇದು ಸ್ವಿಗಿ ಪಾಲಿಗೆ ಹಣದ ಹೊಳೆಯೇ!

ಸ್ವಿಗ್ಗಿ ಬಗ್ಗೆ ನೆಟ್ಟಿಗರ ಆಕ್ರೋಶ

ಈ ಆಪಾದನೆಗೆ ಸ್ವಿಗ್ಗಿ ಕೊಟ್ಟ ಉತ್ತರಗಳು ಸಮಾಧಾನಕಾರಿಯಾಗಿಲ್ಲ. ಮೊದಲಿಗೆ, ‘ನಿಮಗೆ ಹೀಗೆನ್ನಿಸಿದ್ದಕ್ಕೆ ನಮಗೆ ವಿಷಾದವಿದೆ, ಆದರೆ ಇದು RBI ನಿಯಮಗಳ ಪ್ರಕಾರವೇ ಮಾಡುತ್ತಿರುವುದು,’ ಎಂಬ ಅಸ್ಪಷ್ಟ ಉತ್ತರ ಬಂದಿದೆ. ‘ಇದ್ಯಾವ ನಿಯಮ? ನೀವು Tax ಕಟ್ಟುವುದನ್ನು ತಪ್ಪಿಸಿ ಜನರಿಗೆ ಗೊತ್ತಾಗದಂತೆ ಹಣ ಎಗರಿಸುವುದನ್ನು RBI ಒಪ್ಪುತ್ತದೆಯೇ?’ ಎಂಬರ್ಥದ ಪ್ರತಿವಾದಗಳು ಬಂದಿವೆ. ನಂತರ, ‘ಒಂದು ತಾಂತ್ರಿಕ ದೋಷದಿಂದಾಗಿ ಕೆಲವು ಗ್ರಾಹಕರಿಂದ ಹೆಚ್ಚಿನ ಹಣ ತೆಗೆದುಕೊಂಡಂತೆ ಕಾಣುತ್ತಿದ್ದರೂ, ನಿಜವಾಗಿಯೂ ಹಾಗಾಗಿಲ್ಲ. ಸರಿಯಾದ ಮೊತ್ತವನ್ನೇ ಸಂಗ್ರಹಿಸಿದ್ದೇವೆ, ಎಂಬ ಸ್ಪಷ್ಟೀಕರಣ ಬಂದಿದೆ.

ಏನೇ ಇರಲಿ ಸ್ವಿಗ್ಗಿಯಿಂದ ತರಿಸಿದ ಊಟ ಒಂದಷ್ಟು ದಿನವಾದರೂ ಬಾಯಲ್ಲಿ ಕಹಿಯುಂಟು ಮಾಡುವುದು ನಿಜ. ನೀವೇನನ್ನುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:13 pm, Fri, 22 September 23