Viral Video: ‘ಲೈಟ್​ ಹಾರ್ಟ್’ ಈ ಕನ್ನಡಕದಿಂದ ನೋಡಿದರೆ ಮ್ಯಾಜಿಕ್ ಆಗುತ್ತದೆ

Fun: ಮಕ್ಕಳಿಗಾದರೆ ಸರಿ. ಆದರೆ ಮಕ್ಕಳಂತೆ ಆಡುವ ದೊಡ್ಡವರು ಈ ಕನ್ನಡಕ ಧರಿಸಿ ಗಾಡಿ ಓಡಿಸಿದರೆ ಗ್ಯಾರಂಟೀ ಪ್ರೀತಿ ಮತ್ತು ಸಾವು ಒಟ್ಟಿಗೇ! ಎಂದು ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ. ಇಂಥ ಕನ್ನಡಕ ನನ್ನ ಬಳಿಯೂ ಇದೆ ಎಂದು ಹೇಳುತ್ತಾ ಇದರಲ್ಲಿ ಏನೆಲ್ಲ ಕಾಣುತ್ತದೆ ಎನ್ನುವುದನ್ನೂ ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಇಲ್ಲಿರುವ ಕನ್ನಡಕದಲ್ಲಿ ನಿಮಗೇನು ಕಾಣುತ್ತದೆ ನೋಡಿ!

Viral Video: 'ಲೈಟ್​ ಹಾರ್ಟ್' ಈ ಕನ್ನಡಕದಿಂದ ನೋಡಿದರೆ ಮ್ಯಾಜಿಕ್ ಆಗುತ್ತದೆ
ಈ ಕನ್ನಡಕದಿಂದ ನೋಡಿದರೆ ಲೈಟ್​​ಗಳು ಹೃದಯದಾಕಾರ ತಾಳುತ್ತವೆ.
Follow us
|

Updated on:Sep 22, 2023 | 4:01 PM

Light : ಈ ಕನ್ನಡಕ ಪ್ರೀತಿ ಮತ್ತು ಸಾವನ್ನು (Love and Death) ಒಟ್ಟಿಗೇ ಹೊತ್ತು ತರುತ್ತದೆ. ಹೆಚ್ಚಿನ ಪಾಲು ಸಾವನ್ನೇ. ಆದರೂ ಇದು ಬಹಳ ಮುದ್ದಾಗಿದೆ. ಹೊಸ ವರ್ಷಕ್ಕಾಗಿ ಇಂಥ ಎರಡು ಕನ್ನಡಕಗಳನ್ನು ಖರೀದಿಸಿದೆ, ಇದನ್ನು ಧರಿಸುತ್ತಿದ್ದಂತೆ ಹೊಸ ಹುಡುಗಿಯನ್ನು ಭೇಟಿಯಾದೆ. ಚಿಕ್ಕಂದಿನಲ್ಲಿ ನನ್ನ ಸ್ನೇಹಿತ ಹೊಸ ವರ್ಷದ ಹಿಂದಿನ ದಿನ ಇಂಥ ಕನ್ನಡಕ ಧರಿಸಿದ್ದನು. ನಾನು ಆ ಕನ್ನಡಕದಿಂದ ಪಟಾಕಿ ಹಾರಿಸುವುದನ್ನು ವೀಕ್ಷಿಸಿದ್ದೆ. ಲಕ್ಷಾಂತರ ಹೃದಯಗಳು ಒಮ್ಮೆಲೇ ಸ್ಫೋಟಗೊಂಡಿದ್ದು ಇನ್ನೂ ನನಗೆ ನೆನಪಿದೆ. ಟ್ರಿಪ್​ಗೆ ಇದೆಲ್ಲ ಒಳ್ಳೆಯದು. ಹೌದು ಡ್ರೈವಿಂಗ್​ಗೆ ಇದು ಸುರಕ್ಷಿತ ಅಲ್ಲ, ಅದರಲ್ಲೂ ರಾತ್ರಿ ಧರಿಸುವುದು ಅಪಾಯಕಾರಿ… ರೆಡ್ಡಿಟ್​ನಲ್ಲಿ ವೈರಲ್ ಆಗಿರುವ ಈ ಕನ್ನಡಕದ ವಿಡಿಯೋ ನೋಡಿದ ನೆಟ್ಟಿಗರು ಹೀಗೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral Video: ತಂದೆಗೆ ಲಿವರ್​ ದಾನ ; ‘ನಿನ್ನ ಪಾದ ಸ್ಪರ್ಶಿಸಬೇಕು ಮಗಳೇ’

ನನ್ನ ಬಳಿ ಇದೇ ರೀತಿಯ ಕನ್ನಡಕ ಇದೆ. ಕ್ರಿಸ್ಮಸ್​ ಸಂದರ್ಭದಲ್ಲಿ ಖರೀದಿಸಿದ್ದೆ. ಅದನ್ನು ಧರಿಸಿದರೆ ಲೈಟ್​ಗಳೆಲ್ಲ ಸಾಂತಾಕ್ಲಾಸ್​ನಂತೆ ಕಾಣುತ್ತವೆ. ನನ್ನ ಬಳಿ ಇದ್ದ ಕನ್ನಡಕದಿಂದ ಯಾವ ಲೈಟ್ ನೋಡಿದರೂ ಅವುಗಳು ಪಟಾಕಿ ಕಿಡಿಯನ್ನು ಹೊಮ್ಮಿಸುತ್ತಿವೇಯೇನೋ ಎನ್ನಿಸುತ್ತದೆ. ನನ್ನ ಬಳಿ ಇರುವ ಕನ್ನಡಕದಿಂದ ನೋಡಿದರೆ ಲೈಟ್​ಗಳು ಓಡುತ್ತಿರುವ ಹಿಮಸಾರಂಗಗಳಂತೆ ಪರಿವರ್ತನೆಯಾಗುತ್ತವೆ, ಕ್ರಿಸ್​ಮಸ್ ಸಂದರ್ಭದಲ್ಲಿ ಮೋಜಿಗಾಗಿ ಇದನ್ನು ಧರಿಸುತ್ತೇನೆ… ಒಂದು ಕನ್ನಡಕದ ಹಿಂದೆ ಏನೆಲ್ಲ ಅಡಗಿದೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಕನ್ನಡಕದಿಂದ ಲೈಟ್​​-ಹಾರ್ಟ್​ ನೋಡಿ

These glasses turn light into hearts byu/Folty1988 inMadeMeSmile

ನಾಲ್ಕು ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 5,200ಕ್ಕೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 125 ಜನರು ಈ ಬಗ್ಗೆ ಚರ್ಚಿಸಿದ್ದಾರೆ ಮತ್ತು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ಇದನ್ನು ಮೋಜಿನಿಂದ ನೋಡಿದ್ದಾರಾದರೂ ಅನೇಕರು ಇದು ಕಣ್ಣಿಗೆ ಅಪಾಯಕಾರಿ ಎಂದೇ ಹೇಳಿದ್ದಾರೆ.

ಇದನ್ನೂ ಓದಿ : Viral Video: ಶಾಲಾಬಾಲಕಿಯರ ಬೀದಿಜಗಳ; ನಮ್ಮ ದೇಶ ಮುಂದುವರಿಯುತ್ತಿದೆ ಎಂದ ನೆಟ್ಟಿಗರು

ಇಂಥ ಸಂಗತಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬಾರದು. ಮೋಜಿಗಾಗಿ ಕೆಲ ನಿಮಿಷಗಳ ಕಾಲ ನಮ್ಮ ನಮ್ಮ ಎಚ್ಚರಿಕೆಯಲ್ಲಿ ಧರಿಸಬೇಕು. ಅದರಲ್ಲೂ ಮಕ್ಕಳ ರಂಜನೆಗೆ ಇಂಥವು ಸಹಾಯಕಾರಿ ಎಂದು ಕೆಲವರು ಸಮಾಧಾನ ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:58 pm, Fri, 22 September 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್