ಟ್ರಾಫಿಕ್ ಪೊಲೀಸ್ (Traffic Police) ಒಬ್ಬರು ಜನನಿಬಿಡ ಟ್ರಾಫಿಕ್ ಜಂಕ್ಷನ್‌ನಲ್ಲಿ ಸ್ವಿಗ್ಗಿ (Swiggy) ಡೆಲಿವರಿ ಬಾಯ್‌ಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ (ಮೇ 3) ರಂದು ಮಧ್ಯಾಹ್ನ ತಮಿಳುನಾಡಿನ (Tamil Nadu) ಕೊಯಮತ್ತೂರು (Koyamuttur) ನಗರದ ಅವಿನಾಶಿ ರಸ್ತೆಯಲ್ಲಿ ಘಟನೆ ನಡೆದಿದೆ. ಪೊಲೀಸರು ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಶನಿವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
"This happened yesterday evening at the fun mall signal and there was a slight traffic block due to this delivery boy and all of a sudden this Cop Started beating up the Delivery person "
. #welovecovai
.
? IG : FB :TW @WELOVECOVAI
.#coimbatore #delivery #deliveryboy #traffic pic.twitter.com/OBEwmghc1R— We Love Covai ❤️ (@welovecovai) June 4, 2022
ಸ್ವಿಗ್ಗಿ ಡೆಲಿವರಿ ಬಾಯ್ ನಗರದ ಚಿನ್ನಿಯಂಪಾಳ್ಯಂ ನಿವಾಸಿ ಎಂ.ಮೋಹನಸುಂದರಂ (38) ಎಂದು ಗುರುತಿಸಲಾಗಿದೆ. ಸದ್ಯ ಸ್ವಿಗ್ಗಿ ಡೆಲಿವರಿ ಬಾಯ್ ಎಂ.ಮೋಹನಸುಂದರಂ ಈ ಸಂಬಂಧ ನಗರ ಪೊಲೀಸ್ ಆಯುಕ್ತ ಪ್ರದೀಪ್ ಕುಮಾರ್ ಅವರಿಗೆ ಶನಿವಾರ ದೂರು ಸಲ್ಲಿಸಿದ್ದಾರೆ. ಅವಿನಾಶಿ ರಸ್ತೆಯ ಪೀಲಮೇಡು ಪೊಲೀಸ್ ಠಾಣೆ ಎದುರಿನ ಫನ್ ಮಾಲ್ ಜಂಕ್ಷನ್‌ನಲ್ಲಿ ಸಂಜೆ 5.45ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೋಹನಸುಂದರಂ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಬಹಳ ದಿನಗಳ ನಂತರ ಎರಡು ಚಿಂಪಾಂಜಿಗಳು ಭೇಟಿ ಆದಾಗ ಮಾಡಿದ್ದೇನು ಇಲ್ಲದೆ ನೋಡಿ
ಶುಕ್ರವಾರ ಅವರು ಹೋಪ್ ಕಾಲೇಜಿನಿಂದ ಪಾರ್ಸೆಲ್ ತೆಗೆದುಕೊಂಡು ಪಂಕಜಾ ಮಿಲ್ ರಸ್ತೆಗೆ ಹೋಗುತ್ತಿದ್ದಾಗ. ಮೋಹನಸುಂದರಂ ಮಾಲ್ ಮುಂಭಾಗದ ಟ್ರಾಫಿಕ್ ಸಿಗ್ನಲ್ ಬಳಿ ಬಂದಾಗ ರಸ್ತೆ ದಾಟಲು ಯತ್ನಿಸುತ್ತಿದ್ದ ಪಾದಚಾರಿ ಮಹಿಳೆಯ ಭುಜಕ್ಕೆ ಖಾಸಗಿ ಶಾಲೆಯೊಂದರ ಬಸ್ ಡಿಕ್ಕಿ ಹೊಡೆದು, ನಿಲ್ಲಿಸದೆ ಹೋಗಿದೆ. ನಂತರ, ಇದನ್ನು ಕಂಡ ಕೆಲವು ದಾರಿಹೋಕರು ಮತ್ತು ಮಹಿಳೆಯೊಂದಿಗೆ ಬಂದ ಯುವಕ ಜಂಕ್ಷನ್‌ನಲ್ಲಿರುವ ಲಿಂಕ್ ರಸ್ತೆಯಲ್ಲಿ ಬಸ್ ಅನ್ನು ನಿಲ್ಲಿಸಿ ಬಸ್ ಚಾಲಕನ ನಿರ್ಲಕ್ಷ್ಯದ ಕೃತ್ಯದ ಕುರಿತು ಪ್ರಶ್ನಿಸಿದ್ದಾರೆ.
ಈ ವೇಳೆ ಜನರು ರಸ್ತೆಯಲ್ಲಿ ಜಮಾಯಿಸಲು ಪ್ರಾರಂಭಿಸಿದರು ಮತ್ತು ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಸ್ವಿಗ್ಗಿ ಡೆಲಿವರಿ ಏಜೆಂಟ್ ಬಳಿಗೆ ಬಂದು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದಕ್ಕೆ ಕಪಾಳಮೋಕ್ಷ ಮಾಡಿದರು ಎಂದು ಸ್ವಿಗಿ ಡೆಲೆವರಿ ಬಾಯ್ ದೂರಿನಲ್ಲಿ ಹೇಳಿದ್ದಾರೆ. ಟ್ರಾಫಿಕ್ ಪೋಲೀಸರು ಅವರ ಮೊಬೈಲ್ ಫೋನ್, ಇಯರ್ ಫೋನ್ ಮತ್ತು ದ್ವಿಚಕ್ರ ವಾಹನದ ಕೀಯನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಮೋಹನಸುಂದರಂ ಆರೋಪಿಸಿದ್ದಾರೆ.
ಇದನ್ನು ಓದಿ: ತಂದೆಯ ಅರ್ಜಿ ಪತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಆನಂದ ಮಹೀಂದ್ರಾ
ಕೊನೆಗೆ ಆಹಾರ ವಿತರಣೆಯ ಆತುರದಲ್ಲಿದ್ದ ಸ್ವಿಗಿ ಬಾಯ್ ಮೋಹನಸುಂದರಂ ಕ್ಷಮೆಯಾಚಿಸಿದ ನಂತರ ಕೀಲಿಯನ್ನು ಹಿಂತಿರುಗಿಸಿದರು ಎಂದು ಹೇಳಿದ್ದಾರೆ. ಘಟನೆಯ ಕುರಿತು ಆಂತರಿಕ ತನಿಖೆಗೆ ಉಪ ಪೊಲೀಸ್ ಆಯುಕ್ತ (ಸಂಚಾರ) ಎಸ್.ಆರ್. ಸೆಂಥಿಲ್‌ಕುಮಾರ್ ಅವರು ಆದೇಶಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದ್ದಾರೆ.
Due to visuals caught on Camera either by cctv or someone from their mobile, Coimbatore Traffic Police constable Satish (2846) manhandling (slapped) a hapless ”Swiggy” delivery boy Mohanasundaram on 03/06/2022 was suspended & arrested. Otherwise this issue won't come out. pic.twitter.com/ADIA7cTWAU
— Hari Krishnan Pongilath (@h_pongilath) June 4, 2022
ಘಟನೆಯು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ, ಸಿಂಗಾನಲ್ಲೂರು ಸಂಚಾರಿ ಪೊಲೀಸ್ ಠಾಣೆಯ ಗ್ರೇಡ್ ಕಾನ್‌ಸ್ಟೆಬಲ್ ಸತೀಶ್ ಅವರನ್ನು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ವರ್ಗಾಯಿಸಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Sun, 5 June 22