ಜೀವನಾಂಶ ಪಾವತಿಸುವಂತೆ ಆದೇಶಿಸಿದ ಕೋರ್ಟ್;‌ 1 ಮತ್ತು 2 ರೂ. ಚಿಲ್ಲರೆ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣ ನೀಡಿದ ಪತಿರಾಯ

| Updated By: ಅಕ್ಷತಾ ವರ್ಕಾಡಿ

Updated on: Dec 22, 2024 | 4:03 PM

ಇತ್ತೀಚಿಗಂತೂ ಡಿವೋರ್ಸ್‌ ಪ್ರಕರಣಗಳು ತೀರಾ ಹೆಚ್ಚುತ್ತಿದೆ. ಇದೀಗ ಇಲ್ಲೊಂದು ವಿಚ್ಛೇದನ ಪ್ರಕರಣ ಸಖತ್‌ ಸುದ್ದಿಯಾಗುತ್ತಿದ್ದು, ವ್ಯಕ್ತಿಯೊಬ್ಬರು ಪತ್ನಿಗೆ ಜೀವನಾಂಶ ಪಾವತಿಸಲು 80 ಸಾವಿರ ರೂ. ಮೌಲ್ಯದ 1-2 ರೂಪಾಯಿ ನಾಣ್ಯಗಳ ಕಟ್ಟನ್ನು ಕೋರ್ಟ್‌ಗೆ ಹೊತ್ತು ತಂದಿದ್ದಾರೆ. ನಿಮ್ಮ ಪತ್ನಿಗೆ 2 ಲಕ್ಷ ರೂ. ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದ್ದು, ಇದಕ್ಕಾಗಿ ಈ ವ್ಯಕ್ತಿ 1 ಮತ್ತು 2 ರೂ. ಚಿಲ್ಲರೆ ಹಣದ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣವನ್ನು ನೀಡಿದ್ದಾರೆ.

ಜೀವನಾಂಶ ಪಾವತಿಸುವಂತೆ ಆದೇಶಿಸಿದ ಕೋರ್ಟ್;‌ 1 ಮತ್ತು 2 ರೂ. ಚಿಲ್ಲರೆ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣ ನೀಡಿದ ಪತಿರಾಯ
New Project (57)
Follow us on

ಸಾಮಾನ್ಯವಾಗಿ ವಿಚ್ಛೇದನ ಪ್ರಕರಣಗಳಲ್ಲಿ ಗಂಡನಾದವನು ಡಿವೋರ್ಸ್‌ ಬಳಿಕ ಹೆಂಡ್ತಿಗೆ ಇಂತಿಷ್ಟು ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡುತ್ತದೆ. ಅದೇ ಇಲ್ಲೊಂದು ನ್ಯಾಯಾಲಯ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದು, ಇದಕ್ಕಾಗಿ ಈ ವ್ಯಕ್ತಿ 1 ಮತ್ತು 2 ರೂ. ನಾಣ್ಯದ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣವನ್ನು ನೀಡಿದ್ದಾರೆ. ಹೌದು ಆ ವ್ಯಕ್ತಿ 80 ಸಾವಿರ ರೂ. ಮೌಲ್ಯದ 1-2 ರೂಪಾಯಿ ಚಿಲ್ಲರೆ ಹಣದ ಕಟ್ಟನ್ನು ಕೋರ್ಟ್‌ಗೆ ಹೊತ್ತು ತಂದಿದ್ದು, ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರು ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲು ಸುಮಾರು 80 ಸಾವಿರ ಮೌಲ್ಯದ 1 ಮತ್ತು ಎರಡು ರೂಪಾಯಿ ಚಿಲ್ಲರೆ ಹಣದ ಕಟ್ಟನ್ನು ಕೋರ್ಟ್‌ಗೆ ತಂದಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?

ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ 37 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಪತ್ನಿ ಕಳೆದ ವರ್ಷ ಕೊಯಮತ್ತೂರು ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್‌ 2 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಆ ವ್ಯಕ್ತಿಗೆ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಮಾಜಿ ಪತ್ನಿಗೆ ಪರಿಹಾರ ಹಣ ನೀಡುವ ಸಲುವಾಗಿ ಆ ವ್ಯಕ್ತಿ ಸುಮಾರು 80 ಸಾವಿರ ಮೌಲ್ಯದ 1 ಮತ್ತು ಎರಡು ರೂಪಾಯಿ ನಾಣ್ಯಗಳ 20 ಕಟ್ಟುಗಳನ್ನು ನ್ಯಾಯಾಲಯಕ್ಕೆ ತಂದಿದ್ದಾರೆ. ನಾಣ್ಯಗಳ ರೂಪದಲ್ಲಿಯೇ ವಿಚ್ಛೇದಿತ ಪತ್ನಿಗೆ ಪರಿಹಾರ ಹಣ ನೀಡಿದ್ದು, ಈ ಹಣವನ್ನು ನಗದು ರೂಪದಲ್ಲಿಯೇ ನೀಡಬೇಕು ಎಂದು ಕೋರ್ಟ್‌ ಹೇಳಿದ್ದಕ್ಕೆ ಆ ವ್ಯಕ್ತಿ ಮರುದಿನ ಕರೆನ್ಸಿ ನೋಟು ರೂಪದಲ್ಲಿ ಹಣ ನೀಡಿದ್ದಾರೆ. ಮತ್ತು ಬಾಕಿ ಉಳಿದ 1.2 ಲಕ್ಷ ರೂ ಹಣವನ್ನು ಆದಷ್ಟು ಬೇಗ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ