Viral: ರೆಡ್‌ ಸಿಗ್ನಲ್‌ ಬಿದ್ದಿದ್ದೇ ತಡ… ರಸ್ತೆಗಿಳಿದು ಜಬರ್ದಸ್ತ್ ಡ್ಯಾನ್ಸ್‌ ಮಾಡಿದ ಬೈಕರ್ಸ್‌; ವೈರಲ್‌ ಆಯ್ತು ವಿಡಿಯೋ

ಕೆಲವರಿಗೆ ಎಲ್ಲೆಂದರಲ್ಲಿ ರೀಲ್ಸ್‌ ಮಾಡುವ, ಕುಣಿಯುವ ಕ್ರೇಜ್.‌ ಇಂತಹ ಸಾಕಷ್ಟು ಕ್ರೇಜಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲಿಬ್ಬರು ಬೈಕರ್ಸ್‌ ಟ್ರಾಫಿಕ್‌ ಸಿಗ್ನಲ್‌ ಬಳಿ ರೆಡ್‌ ಸಿಗ್ನಲ್‌ ಬೀಳುತ್ತಿದ್ದಂತೆ ರೀಲ್ಸ್‌ ಮಾಡುವ ಸಲುವಾಗಿ ರಸ್ತೆಗಿಳಿದು ಪುಷ್ಪ 2 ಸಿನಿಮಾದ ಪೀಲಿಂಗ್ಸ್‌ ಹಾಡಿಗೆ ಜಬರ್ದಸ್ತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ರೆಡ್‌ ಸಿಗ್ನಲ್‌ ಬಿದ್ದಿದ್ದೇ ತಡ… ರಸ್ತೆಗಿಳಿದು ಜಬರ್ದಸ್ತ್ ಡ್ಯಾನ್ಸ್‌ ಮಾಡಿದ ಬೈಕರ್ಸ್‌; ವೈರಲ್‌ ಆಯ್ತು ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Dec 22, 2024 | 6:05 PM

ಇತ್ತೀಚಿಗೆ ಬಿಡುಗಡೆಯಾದ ಪುಷ್ಪ ಸಿನೆಮಾ ಹಲವು ದಾಖಲೆಗಳನ್ನು ಮುರಿದು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಅಷ್ಟು ಮಾತ್ರವಲ್ಲದೆ ಈ ಸಿನೆಮಾದ ಹಾಡುಗಳ ಅಬ್ಬರವು ಜೋರಾಗಿಯೇ ಇದೆ. ಅದರಲ್ಲೂ ಈ ಚಿತ್ರದ ಪೀಲಿಂಗ್ಸ್‌ ಹಾಡಿಗೆ ಯುವಕರು ಫುಲ್‌ ಫಿದಾ ಆಗಿದ್ದು, ಎಲ್ರೂ ಈ ಪೀಲಿಂಗ್ಸ್‌ ಹಾಡಿಗೆ ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲಿಬ್ಬರು ಬೈಕರ್ಸ್‌ ನಾವು ಸ್ಪಲ್ಪ ಡಿಫರೆಂಟ್‌ ಆಗಿ ರೀಲ್ಸ್‌ ಮಾಡೋಣ ಅಂತ ಟ್ರಾಫಿಕ್‌ ಸಿಗ್ನಲ್‌ ಬಳಿ ರೆಡ್‌ ಸಿಗ್ನಲ್‌ ಬಿದ್ದಾಗ ಬೈಕ್‌ನಿಂದ ಕೆಳಗಿಳಿದು ನಡು ರಸ್ತೆಯಲ್ಲಿ ಪೀಲಿಂಗ್ಸ್‌ ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ. ಬೈಕರ್ಸ್‌ಗಳ ಈ ಡ್ಯಾನ್ಸ್‌ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಬೈಕರ್ಸ್‌ಗಳಿಬ್ಬರು ರೆಡ್‌ ಸಿಗ್ನಲ್‌ ಬೀಳುತ್ತಿದ್ದಂತೆ ಬೈಕ್‌ ನಿಲ್ಲಿಸಿ, ರಸ್ತೆಗಿಳಿದು ಪುಷ್ಪ 2 ಸಿನಿಮಾದ ಪೀಲಿಂಗ್ಸ್‌ ಹಾಡಿಗೆ ಜಬರ್ದಸ್ತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ಇವರ ಕಾನ್ಫಿಡೆನ್ಸ್‌ ಮತ್ತು ಭರ್ಜರಿ ಡ್ಯಾನ್ಸ್‌ಗೆ ಇತರೆ ವಾಹನ ಸವಾರರು ಫುಲ್‌ ಫಿದಾ ಆಗಿದ್ದಾರೆ. ಈ ಕುರಿತ ವಿಡಿಯೋವನ್ನು danceronbike ಬೈಕ್‌ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಟ್ರಾಫಿಕ್‌ ಸಿಗ್ನಲ್‌ ಬಳಿ ರೆಡ್‌ ಸಿಗ್ನಲ್‌ ಬಿದ್ದಾಗ ಬೈಕರ್ಸ್‌ಗಳಿಬ್ಬರು ಬೈಕ್‌ನಿಂದ ಕೆಳಗಿಳಿದು ನಡು ರಸ್ತೆಯಲ್ಲಿ ಪೀಲಿಂಗ್ಸ್‌ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕುವಂತಹ ದೃಶ್ಯವನ್ನು ಕಾಣಬಹುದು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಜೀವನಾಂಶ ಪಾವತಿಸುವಂತೆ ಆದೇಶಿಸಿದ ಕೋರ್ಟ್;‌ 1 ಮತ್ತು 2 ರೂ. ಚಿಲ್ಲರೆ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣ ನೀಡಿದ ಪತಿರಾಯ

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನಂತೂ ಇವರ ಡ್ಯಾನ್ಸ್‌ಗೆ ಫಿದಾ ಆದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹಳ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕ ಬೈಕರ್ಸ್‌ಗಳ ನೃತ್ಯಕ್ಕೆ ಮನಸೋತಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:05 pm, Sun, 22 December 24

ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ
ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ